ಮುಂಬೈ(ಮಹಾರಾಷ್ಟ್ರ): ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ವೇಳಾಪಟ್ಟಿ ದಿನದಿಂದ ದಿನಕ್ಕೆ ಬಿಗುವಾಗುತ್ತಿದೆ. ಹೀಗಾಗಿ, ಆಟಗಾರರು ಕುಟುಂಬದಿಂದ ಹತ್ತಾರು ತಿಂಗಳ ಕಾಲ ದೂರವಿರುವಂತಹ ಪರಿಸ್ಥಿತಿ ಇದೆ. ಕೋವಿಡ್ ಹಾಗೂ ಬಯೋಬಬಲ್ ಯುಗದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಆಟಗಾರ ಕುಮಾರ್ ಕಾರ್ತಿಕೇಯ ಸುಮಾರು 9 ವರ್ಷಗಳ ಬಳಿಕ ಇದೀಗ ತಮ್ಮ ಪೋಷಕರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಕಾರ್ತಿಕೇಯ ಪ್ರತಿಕ್ರಿಯಿಸಿ, "9 ವರ್ಷ 3 ತಿಂಗಳ ನಂತರ ನನ್ನ ಕುಟುಂಬ ಹಾಗೂ ಅಮ್ಮನನ್ನು ಭೇಟಿಯಾದೆ. ಈ ವೇಳೆ ನನಗಾಗುತ್ತಿರುವ ಸಂತಸದಲ್ಲಿ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ" ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.
-
Met my family and mumma ❤️ after 9 years 3 months . Unable to express my feelings 🤐#MumbaiIndians #IPL2022 pic.twitter.com/OX4bnuXlcw
— Kartikeya Singh (@Imkartikeya26) August 3, 2022 " class="align-text-top noRightClick twitterSection" data="
">Met my family and mumma ❤️ after 9 years 3 months . Unable to express my feelings 🤐#MumbaiIndians #IPL2022 pic.twitter.com/OX4bnuXlcw
— Kartikeya Singh (@Imkartikeya26) August 3, 2022Met my family and mumma ❤️ after 9 years 3 months . Unable to express my feelings 🤐#MumbaiIndians #IPL2022 pic.twitter.com/OX4bnuXlcw
— Kartikeya Singh (@Imkartikeya26) August 3, 2022
ಕುಮಾರ್ ಕಾರ್ತಿಕೇಯ ಈ ಚಿತ್ರವನ್ನು ಪೋಸ್ಟ್ ಮಾಡ್ತಿದ್ದಂತೆ 18,000 ಲೈಕ್ಸ್ ಸಿಕ್ಕಿದ್ದು 900ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. 2022ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದ ಕಾರ್ತಿಕೇಯ ತಾವು ಆಡಿರುವ 4 ಪಂದ್ಯಗಳಿಂದ 5 ವಿಕೆಟ್ ಪಡೆದುಕೊಂಡಿದ್ದರು. ಈ ಪ್ಲೇಯರ್ ಇದೀಗ ಮಧ್ಯಪ್ರದೇಶ ರಣಜಿ ಟ್ರೋಫಿ ತಂಡದಲ್ಲಿ ಆಡುತ್ತಿದ್ದು, ತಂಡ ಪ್ರಸಕ್ತ ಋತುವಿನಲ್ಲಿ ಚಾಂಪಿಯನ್ ಆಗಿದೆ. ಕಾರ್ತಿಕೇಯ 11 ಪಂದ್ಯಗಳಿಂದ 32 ವಿಕೆಟ್ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ, ದ.ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಸರಣಿಗೆ ವೇಳಾಪಟ್ಟಿ ಪ್ರಕಟ
ಐಪಿಎಲ್ ಸಂದರ್ಭದಲ್ಲೊಮ್ಮೆ ಈ ಕುರಿತು ಮಾತನಾಡಿದ್ದ ಕುಮಾರ್ ಕಾರ್ತಿಕೇಯ, ಒಂಭತ್ತು ವರ್ಷಗಳ ಬಳಿಕ ಮನೆಗೆ ಮರಳಲು ಸಜ್ಜಾಗುತ್ತಿದ್ದೇನೆ ಎಂದಿದ್ದರು. ಇದರ ವಿಡಿಯೋ ತುಣುಕನ್ನು ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿತ್ತು. ಚಿಕ್ಕಂದಿನಲ್ಲೇ ಕಾರ್ತಿಕೇಯ ತಮ್ಮ ಮನೆ ತೊರೆದಿದ್ದರು. ದಿನಗೂಲಿಯಾಗಿ ಕೆಲಸ ಮಾಡುತ್ತಾ ಕ್ರಿಕೆಟ್ ಆಡುತ್ತಿದ್ದ ಇವರು ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ಸು ಸಿಕ್ಕ ಬಳಿಕ ಮನೆಗೆ ಮರಳುವುದಾಗಿ ಶಪಥಗೈದಿದ್ದರು.
ಮೂಲತಃ ಉತ್ತರ ಪ್ರದೇಶದವರಾಗಿರುವ ಈ ಆಟಗಾರ, ಕಳೆದೊಂದು ವರ್ಷದಿಂದ ದೆಹಲಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ರಣಜಿ ಕ್ರಿಕೆಟ್ ಆಡಲು ಮಧ್ಯಪ್ರದೇಶ ತಂಡ ಆಯ್ಕೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಬಿಕರಿಯಾಗದೇ ಉಳಿದ ಇವರು, ತದನಂತರ ಗಾಯಗೊಂಡಿದ್ದ ಅರ್ಶದ್ ಖಾನ್ ಸ್ಥಾನಕ್ಕೆ ತಂಡದಲ್ಲಿ ಪಾಲು ಪಡೆದಿದ್ದರು. ಆಡುವ ತಂಡದ 11ರ ಬಳಗದಲ್ಲಿ ಅವಕಾಶವನ್ನೂ ಪಡೆದು ಮಿಂಚು ಹರಿಸಿದ್ದರು.