ಶಾರ್ಜಾ: ಮುಂಬೈ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ರೋಹಿತ್ ಪಡೆಗೆ ಕೇವಲ 91 ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ರಾಜಸ್ಥಾನಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಅಲ್ಲದೇ ಪವರ್ ಪ್ಲೇ ಮುಗಿಯುವುದರೊಳಗೆ ಎವಿನ್ ಲೂಯಸ್(24) ಮತ್ತು ಯಶಸ್ವಿ ಜೈಸ್ವಾಲ್(12) ರನ್ನು ಪೆವಿಲಿಯನ್ಗಟ್ಟುವಲ್ಲಿ ಬುಮ್ರಾ ಮತ್ತು ಕೌಲ್ಟರ್ ನೈಲ್ ಯಶಸ್ವಿಯಾದರು.
ಕ್ವಿಂಟನ್ ಡಿಕಾಕ್ ಜಾಗದಲ್ಲಿ ಅವಕಾಶ ಪಡೆದಿದ್ದ ಕಿವೀಸ್ ಆಲ್ರೌಂಡರ್ ಜಿಮ್ಮಿ ನೀಶಮ್ ತಮ್ಮ ಮೊದಲ ಓವರ್ನಲ್ಲೇ ಉತ್ತಮ ಲಯದಲ್ಲಿದ್ದ ರಾಜಸ್ಥಾನ್ ನಾಯಕ ಸಂಜು ಸಾಮ್ಸನ್(3) ಮತ್ತು ಶಿವಂ ದುಬೆ(3) ವಿಕೆಟ್ ಪಡೆದು ರಾಜಸ್ಥಾನಕ್ಕೆ ಮರ್ಮಾಘಾತ ನೀಡಿದರು. ಗ್ಲೇನ್ ಫಿಲಿಫ್ಸ್(4)ರನ್ನು ಕೌಲ್ಟರ್ ಲೈನ್ ಬೌಲ್ಡ್ ಮಾಡುವ ಮೂಲಕ ಕೇವ 10 ಓವರ್ನೊಳಗೆ ರಾಜಸ್ಥಾನದ ಅರ್ಧ ತಂಡ ಪೆವಿಲಿಯನ್ ಸೇರಿಕೊಂಡಿತು.
-
INNINGS BREAK!
— IndianPremierLeague (@IPL) October 5, 2021 " class="align-text-top noRightClick twitterSection" data="
Brilliant bowling display from @mipaltan as they limit #RR to 90/9.
4⃣ wickets for Nathan Coulter-Nile
3⃣ wickets for @JimmyNeesh
2⃣ wickets for @Jaspritbumrah93
The #MumbaiIndians chase to begin soon. #VIVOIPL #RRvMI
Scorecard 👉 https://t.co/0oo7ML9bp2 pic.twitter.com/43QY4JbivJ
">INNINGS BREAK!
— IndianPremierLeague (@IPL) October 5, 2021
Brilliant bowling display from @mipaltan as they limit #RR to 90/9.
4⃣ wickets for Nathan Coulter-Nile
3⃣ wickets for @JimmyNeesh
2⃣ wickets for @Jaspritbumrah93
The #MumbaiIndians chase to begin soon. #VIVOIPL #RRvMI
Scorecard 👉 https://t.co/0oo7ML9bp2 pic.twitter.com/43QY4JbivJINNINGS BREAK!
— IndianPremierLeague (@IPL) October 5, 2021
Brilliant bowling display from @mipaltan as they limit #RR to 90/9.
4⃣ wickets for Nathan Coulter-Nile
3⃣ wickets for @JimmyNeesh
2⃣ wickets for @Jaspritbumrah93
The #MumbaiIndians chase to begin soon. #VIVOIPL #RRvMI
Scorecard 👉 https://t.co/0oo7ML9bp2 pic.twitter.com/43QY4JbivJ
ಈ ಹಂತದಲ್ಲಿ ಒಂದಾದ ಮಿಲ್ಲರ್(15) ಮತ್ತು ತೆವಾಟಿಯಾ(12) 5 ಓವರ್ಗಳವರಗೆ ವಿಕೆಟ್ ಕಾಯ್ದುಕೊಂಡರೆ ಹೊರೆತು ರನ್ಗತಿ ಏರಿಸುವಲ್ಲಿ ವಿಫಲರಾದರು. ತೆವಾಟಿಯಾ ನೀಶಮ್ಗೆ ವಿಕೆಟ್ ಒಪ್ಪಿಸಿದರೆ, ಮಿಲ್ಲರ್ ಕೌಲ್ಟರ್ ನೈಲ್ಗೆ 3ನೇ ಬಲಿಯಾದರು.
ಉಳದಂತೆ ಶ್ರೇಯಸ್ ಗೋಪಾಲ್ ಶೂನ್ಯಕ್ಕೆ ಬುಮ್ರಾ ಓವರ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರೆ ಚೇತನ್ ಸಕಾರಿಯಾ 6ರನ್ಗಳಿಸಿ ನೈಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಒಟ್ಟಾರೆ 20 ಓವರ್ಗಳಲ್ಲಿ ರಾಜಸ್ಥಾನ್ 9 ವಿಕೆಟ್ ಕಳೆದುಕೊಂಡು 90 ರನ್ಗಳಿಗೆ ಸುಸ್ತಾಯಿತು.
ನೇಥನ್ ಕೌಲ್ಟರ್ ನೈಲ್ 14ಕ್ಕೆ4, ಜಿಮ್ಮಿ ನೀಶಮ್ 12ಕ್ಕೆ 3 ಮತ್ತು ಬುಮ್ರಾ 14ಕ್ಕೆ 2 ವಿಕೆಟ್ ಪಡೆದು ರಾಜಸ್ಥಾನ್ಗೆ ಆರಂಭದಿಂದ ಅಂತ್ಯದವರೆಗೆ ಚೇತರಿಸಿಕೊಳ್ಳಲಾಗದಂತೆ ಮಾಡಿದರು ಜೊತೆ 100ರ ಗಡಿದಾಟದಂತೆ ತಡೆಯುವಲ್ಲಿ ಸಫಲರಾದರು.
ಇದನ್ನು ಓದಿ:ಪಾಂಡ್ಯ ಬೌಲಿಂಗ್ ಮಾಡದಿರುವುದು ಮುಂಬೈಗಷ್ಟೇ ಅಲ್ಲ, ಭಾರತಕ್ಕೂ ದೊಡ್ಡ ನಷ್ಟ: ಗವಾಸ್ಕರ್