ETV Bharat / sports

ಧೋನಿಯನ್ನು ಕಾಣಲು 1,436 ಕಿ.ಮೀ. ನಡೆದುಕೊಂಡೇ ಸಾಗಿ ಬಂದ ಅಭಿಮಾನಿ! - ಅಭಿಮಾನಿಯ ಸಾಹಸಕ್ಕೆ ಧೋನಿ ಚಕಿತ

ತನ್ನನ್ನು ಕಾಣಲು ಹರಿಯಾಣದಿಂದ 1,436 ಕಿ.ಮೀ. ನಡೆದುಕೊಂಡೇ ಬಂದ ಅಭಿಮಾನಿಯನ್ನು ಕಂಡು ಚಕಿತರಾದ ಮಹೇಂದ್ರ ಸಿಂಗ್​ ಧೋನಿ (MS Dhoni surprises fan who walked 1,436 km)ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿಯಿಂದ ಆಲಂಗಿಸಿಕೊಂಡಿದ್ದಾರೆ.

MS Dhoni
ಮಹೇಂದ್ರ ಸಿಂಗ್​ ಧೋನಿ
author img

By

Published : Nov 18, 2021, 3:55 PM IST

ರಾಂಚಿ(ಜಾರ್ಖಂಡ್​): ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಲ್ಲೊಬ್ಬ ಅಭಿಮಾನಿ ಬರೋಬ್ಬರಿ 1,436 ಕಿ.ಮೀ. ದೂರವನ್ನು ನಡೆದುಕೊಂಡೇ ಕ್ರಮಿಸಿ ಧೋನಿಯನ್ನು ಕಾಣಲು ರಾಂಚಿಗೆ ಬಂದಿದ್ದಾನೆ. ಇದನ್ನು ಕಂಡು ಸ್ವತಃ ಧೋನಿಯೇ ನಿಬ್ಬೆರಗಾಗಿದ್ದಾರೆ.

ಹರಿಯಾಣದ ನಿವಾಸಿ ಅಜಯ್​ ಗಿಲ್​ ಎಂಬುವವರು ಮಹೇಂದ್ರ ಸಿಂಗ್ ಧೋನಿಯ ಕಟ್ಟಾಭಿಮಾನಿ. ಧೋನಿಯನ್ನು ನೋಡಲೇಬೇಕು ಎಂಬ ಕಾರಣಕ್ಕಾಗಿ ಹರಿಯಾಣದಿಂದ ರಾಂಚಿಗೆ ನಡೆದುಕೊಂಡೇ ಬಂದಿದ್ದಾರೆ. ಫಾರ್ಮ್​ಹೌಸ್​ಗೆ ಬಂದ ಅಭಿಮಾನಿಯನ್ನು ಧೋನಿ ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿಯಿಂದ ಆಲಂಗಿಸಿಕೊಂಡಿದ್ದಾರೆ. ಅಲ್ಲದೇ, ಅಭಿಮಾನಿ ಗಿಲ್​ ಜೊತೆ ಫೋಟೋಗೆ ಫೋಸ್​ ನೀಡಿದರು.

ಅಜಯ್​ ಗಿಲ್​ ಹರಿಯಾಣಕ್ಕೆ ವಾಪಸ್ಸಾಗಲು ಧೋನಿಯೇ ವಿಮಾನದ ಟಿಕೆಟ್​ ಬುಕ್ ಮಾಡಿಸಿಕೊಟ್ಟಿದ್ದಾರೆ. ಅಲ್ಲದೇ, ದಿನದ ಮಟ್ಟಿಗೆ ಉಳಿದುಕೊಳ್ಳಲು ತನ್ನ ಫಾರ್ಮ್​ಹೌಸ್‌ನಲ್ಲೇ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಈ ಹಿಂದೆಯೂ ಅಜಯ್​ ಗಿಲ್ ಅವರು​ ಧೋನಿಯನ್ನು ಕಾಣಲು ಹರಿಯಾಣದಿಂದ ಕಾಲ್ನಡಿಗೆಯಲ್ಲೇ ಬಂದಿದ್ದರು. ಆದರೆ, ಈ ವೇಳೆ ಮಹೇಂದ್ರ ಸಿಂಗ್​ ಧೋನಿ ಚೆನ್ನೈನಲ್ಲಿದ್ದರು. ಧೋನಿಯನ್ನು ಭೇಟಿಯಾಗಲೇಬೇಕು ಎಂದು ಹಠ ಹಿಡಿದು ಧೋನಿ ಫಾರ್ಮ್​ಹೌಸ್​ ಎದುರಿಗೇ ಠಿಕಾಣಿ ಹೂಡಿದ್ದ. ವಿಷಯ ತಿಳಿದ ಧೋನಿ ಆಪ್ತರು ಗಿಲ್​ ಮನವೊಲಿಸಿ ಧೋನಿಯನ್ನು ಮತ್ತೊಮ್ಮೆ ಭೇಟಿ ಮಾಡುವಂತೆ ತಿಳಿಸಿ ಹರಿಯಾಣಕ್ಕೆ ವಾಪಸ್​ ಕಳುಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.