ETV Bharat / sports

ವಿಶ್ವಕಪ್​ನಲ್ಲಿ ಪಾಕ್​ ತಂಡದ ಕಳಪೆ ಪ್ರದರ್ಶನ: ಬೌಲಿಂಗ್​ ಕೋಚ್ ಹುದ್ದೆಗೆ ಮೊರ್ನೆ ಮೊರ್ಕೆಲ್ ರಾಜೀನಾಮೆ - ETV Bharath Karnataka

Morne Morkel resigns as Pakistan bowling coach: ವಿಶ್ವಕಪ್​ ಲೀಗ್​ನಿಂದ ಪಾಕಿಸ್ತಾನ ತಂಡ ಹೊರ ಬೀಳುತ್ತಿದ್ದಂತೆ ಬೌಲಿಂಗ್​ ಕೋಚ್​ ಮೊರ್ನೆ ಮೊರ್ಕೆಲ್ ರಾಜೀನಾಮೆ ನೀಡಿದ್ದಾರೆ.

Morne Morkel
Morne Morkel
author img

By ETV Bharat Karnataka Team

Published : Nov 13, 2023, 5:56 PM IST

ಲಾಹೋರ್ (ಪಾಕಿಸ್ತಾನ): 2023ರ ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡ ಎಲ್ಲಾ ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದು ಸೆಮೀಸ್​ ಪ್ರವೇಶ ಕಳೆದುಕೊಂಡು ತವರಿಗೆ ಮರಳಿದೆ. ಅದರಲ್ಲೂ ತಂಡ ಬೌಲಿಂಗ್​ನಲ್ಲಿ ಸುಧಾರಿತ ಪ್ರದರ್ಶನ ನೀಡಲಿಲ್ಲ. ವಿಶ್ವಕಪ್​​ಗೂ ಮುನ್ನ ನಡೆದ ಏಷ್ಯಾಕಪ್​​ನಲ್ಲೂ ಪಾಕ್​ ಬೌಲಿಂಗ್ ಕೆಟ್ಟದಾಗಿ ಕಂಡು ಬಂದಿತ್ತು. ಈ ಎಲ್ಲ ಬೆಳವಣಿಗೆಯ ನಂತರ ಪುರುಷರ ತಂಡದ ಬೌಲಿಂಗ್ ಕೋಚ್ ಸ್ಥಾನಕ್ಕೆ ಮೊರ್ನೆ ಮೊರ್ಕೆಲ್ ರಾಜೀನಾಮೆ ನೀಡಿದ್ದಾರೆ.

ನಡೆಯುತ್ತಿರುವ ವಿಶ್ವಕಪ್​ನಲ್ಲಿ ಬಾಬರ್ ನಾಯಕತ್ವ ಪಡೆ ನೆದರ್ಲೆಂಡ್ಸ್​, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​ ಮೇಲೆ ಮಾತ್ರ ಜಯ ಸಾಧಿಸಿತು. ಉಳಿದಂತೆ ಐದು ಲೀಗ್​ ಪಂದ್ಯಗಳನ್ನು ಕಳೆದುಕೊಂಡಿತು. ನ್ಯೂಜಿಲೆಂಡ್​ ಹೊರತು ಪಡಿಸಿ ಮಿಕ್ಕ ದೊಡ್ಡ ತಂಡಗಳ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲದೇ ಅಫ್ಘಾನಿಸ್ತಾನದ ಎದುರು ಸಹ ಸೋಲನ್ನಪ್ಪಿಕೊಂಡಿತು.

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ಕೆಲ್ ಈ ವರ್ಷದ ಜೂನ್‌ನಲ್ಲಿ ಆರು ತಿಂಗಳ ಒಪ್ಪಂದದ ಮೇರೆಗೆ ಪಾಕಿಸ್ತಾನದ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಮೋರ್ಕೆಲ್ ದಕ್ಷಿಣ ಆಫ್ರಿಕಾ ಪರ 318 ಪಂದ್ಯಗಳನ್ನು ಆಡಿದ್ದು, 544 ವಿಕೆಟ್‌ಗಳನ್ನು ಪಡೆದಿದ್ದಾರೆ.

ಪಾಕಿಸ್ತಾನ ತಂಡ ಬೌಲಿಂಗ್​ ಕೋಚ್​ ಆಗಿ ನೇಮಕರಾದ ಮೋರ್ಕೆಲ್ ಮೊದಲು ಶ್ರೀಲಂಕಾ ಪ್ರವಾಸದ ಬಾಬರ್​ ಪಡೆಗೆ ತರಬೇತಿ ನೀಡಿದರು. ಎರಡು ಟೆಸ್ಟ್​ ಪಂದ್ಯಗಳ ಸರಣಿಯನ್ನು ಪಾಕಿಸ್ತಾನ ತಂಡ 2-0 ಯಿಂದ ಗೆದ್ದುಕೊಂಡಿತ್ತು. ನಂತರ ಕೆಲ ತವರಿನ ಪಂದ್ಯಗಳನ್ನು ಪಾಕಿಸ್ತಾನ ಆಡಿದ್ದು, ಅದರಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಏಷ್ಯಾಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಸೆಮೀಸ್​ನಲ್ಲಿ ಎಡವಿದರೆ, ವಿಶ್ವಕಪ್​ನಲ್ಲಿ ಲೀಗ್​ನಿಂದಲೇ ಹೊರ ಬಿದ್ದಿದೆ.

  • Pakistan cricket in the last 2 weeks:

    - Inzamam Ul Haq resigns as Pakistan chief selector.

    - Pakistan knocked out in the group stage of World Cup 2023.

    - Morne Morkel resigns as Pakistan bowling coach. pic.twitter.com/L8o8epqxsH

    — Johns. (@CricCrazyJohns) November 13, 2023 " class="align-text-top noRightClick twitterSection" data=" ">

ಮೊರ್ನೆ ಮೊರ್ಕೆಲ್ ರಾಜೀನಾಮೆ ಬಗ್ಗೆ ಪ್ರಕಟಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೂತನ ಕೋಚ್​ ಆಯ್ಕೆಯ ಸಮಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಪಾಕಿಸ್ತಾನ ತಂಡ ವಾರ್ಷಿಕ ಪ್ರವಾಸದ ಪ್ರಕಾರ ಮುಂದೆ ತಂಡ ಡಿಸೆಂಬರ್ 14, 2023 ರಿಂದ ಪ್ರಾರಂಭವಾಗಿ ಜನವರಿ 7, 2024ಕ್ಕೆ ಕೊನೆಗೊಳ್ಳುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸರಣಿಯ ಪಂದ್ಯಗಳು ಪರ್ತ್, ಮೆಲ್ಬೋರ್ನ್ (ಬಾಕ್ಸಿಂಗ್ ಡೇ ಟೆಸ್ಟ್) ಮತ್ತು ಸಿಡ್ನಿ (ಹೊಸ ವರ್ಷದ ಟೆಸ್ಟ್) ನಡೆಯಲಿದೆ. ಈ ಟೆಸ್ಟ್​ ಪಂದ್ಯಗಳು 2023-2025 ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಅಂಕಿ - ಅಂಶಗಳ ಭಾಗವಾಗಿರುತ್ತದೆ.

ಇದನ್ನೂ ಓದಿ: ಡ್ಯಾಶಿಂಗ್​ ಓಪನರ್​ ವಿರೇಂದ್ರ ಸೆಹ್ವಾಗ್​​ ಸೇರಿ ಮೂವರಿಗೆ ಐಸಿಸಿ ಹಾಲ್​ ಆಫ್​ ಫೇಮ್​ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.