ETV Bharat / sports

ಟ್ವಿಟರ್​ನಲ್ಲಿ ಭಾರತೀಯರನ್ನ ಅಪಹಾಸ್ಯ : ಬಟ್ಲರ್​-ಮಾರ್ಗನ್ ವಿರುದ್ಧ ತನಿಖೆಗೆ ಇಸಿಬಿ ಆದೇಶ

author img

By

Published : Jun 9, 2021, 4:32 PM IST

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಾರತಮ್ಯದ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದ್ದು, 8 ವರ್ಷಗಳ ಹಿಂದೆ ರಾಬಿನ್​ಸನ್​ ಮಾಡಿದ್ದ ಜನಾಂಗೀಯ ನೀತಿ ಮತ್ತು ಮಹಿಳೆಯರ ಮೇಲಿನ ಅಪಹಾಸ್ಯ ಟ್ವೀಟ್​ಗಳು ಬಹಿರಂಗಗೊಂಡ ನಂತರ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಅಮಾನತು ಮಾಡಲಾಗಿತ್ತು. ಈ ಘಟನೆ ನಡೆದ ನಂತರ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನೂ ತುಂಬಾ ಕಷ್ಟಕ್ಕೊಳಗಾಗಿದ್ದಾರೆ ಎಂದು ಹಿರಿಯ ವೇಗಿ ಆ್ಯಂಡರ್ಸನ್​ ಮಂಗಳವಾರ ತಿಳಿಸಿದ್ದರು..

ಬಟ್ಲರ್​-ಮಾರ್ಗನ್ ವಿರುದ್ಧ ತನಿಖೆಗೆ ಇಸಿಬಿ ಆದೇಶ

ಲಂಡನ್ : ಅಲ್ಲಿ ರಾಬಿನ್​ಸನ್​ ಹಳೆಯ ಟ್ವೀಟ್ ವಿವಾದದ ನಂತರ ಇದೀಗ ಇಂಗ್ಲೆಂಡ್ ಸೀಮಿತ ಓವರ್​ಗಳ ನಾಯಕ ಇಯಾನ್ ಮಾರ್ಗನ್ ಮತ್ತು ವಿಕೆಟ್ ಕೀಪರ್​ ಜೋಶ್ ಬಟ್ಲರ್​ ಅಭಿಮಾನಿಗಳು ಬಳಸುವ ಇಂಗ್ಲಿಷ್ ಭಾಷೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಸಂಭಾಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಬಟ್ಲರ್​ ಮತ್ತು ಇಯಾನ್ ಮಾರ್ಗನ್ ಇಬ್ಬರ ಟ್ವೀಟ್​ಗಳ ಸಂಬಂಧ ತನಿಖೆ ನಡೆಸುವುದಕ್ಕೆ ಆದೇಶಿಸಿದೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಾರತಮ್ಯದ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. 8 ವರ್ಷಗಳ ಹಿಂದೆ ರಾಬಿನ್​ಸನ್​ ಮಾಡಿದ್ದ ಜನಾಂಗೀಯ ನೀತಿ ಮತ್ತು ಮಹಿಳೆಯರ ಮೇಲಿನ ಅಪಹಾಸ್ಯ ಟ್ವೀಟ್​ಗಳು ಬಹಿರಂಗಗೊಂಡ ನಂತರ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಅಮಾನತು ಮಾಡಲಾಗಿತ್ತು. ಆದರೆ, ಇಂಗ್ಲೆಂಡ್ ಪ್ರಧಾನಿ ಸೇರಿ ಹಲವಾರು ರಾಜಕಾರಣಿಗಳು ಇಸಿಬಿ ನಡೆ ಖಂಡಿಸಿದ್ದರು. ಯಾವಾಗಲೋ ಮಾಡಿದ್ದ ತಪ್ಪಿಗೆ ಈಗ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ, ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು.

ಆದರೆ, ಇದೀಗ ಜೋಶ್ ಬಟ್ಲರ್​ ಮತ್ತು ಇಯಾನ್ ಮಾರ್ಗನ್​ ಭಾರತೀಯ ಅಭಿಮಾನಿಗಳು ಬಳಸುವ 'ಸರ್'​ ಎಂಬ ಪದವನ್ನು ಗುರಿಯಾಗಿಸಿ ಟ್ವೀಟ್ ಮಾಡಿ ಅಪಹಾಸ್ಯ ಮಾಡಿದ್ದಾರೆ. ಕೋಲ್ಕತಾ ನೈಟ್​ ರೈಡರ್ಸ್​ ತಂಡದ ಕೋಚ್​ ಬ್ರೆಂಡನ್​ ಮೆಕ್ಲಮ್​ ಕೂಡ ಅವರ ಜೊತೆ ಸೇರಿ ಭಾರತೀಯರ ಇಂಗ್ಲಿಷ್​ ಬಳಕೆಯನ್ನು ಅಪಹಾಸ್ಯ ಮಾಡಿದ್ದಾರೆ.

ಅಲ್ಲದೆ ಬಟ್ಲರ್ ಮತ್ತು ಮಾರ್ಗನ್ ಇಂಗ್ಲೆಂಡ್ ತಂಡ ಸ್ಥಾಪಿಸಿದ ಬ್ಯಾಟ್ಸ್​ಮನ್​ಗಳಾದ ನಂತರ ಬರೆಯಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಅಪರಾಧಕ್ಕೆ ಕಾರಣವಾಗಿದೆ" ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ:ನಾವು ರಾಬಿನ್​ಸನ್​ ಕ್ಷಮೆ ಸ್ವೀಕರಿಸಿದ್ದೇವೆ, ನಮ್ಮ ಸಂಪೂರ್ಣ ಬೆಂಬಲ ಆತನಿಗಿದೆ : ಆ್ಯಂಡರ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.