ಮುಂಬೈ: ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಟೆಸ್ಟ್ ಆಡುವುದರಿಂದ ಮಹಿಳಾ ಕ್ರಿಕೆಟರ್ಸ್ ಫಿಟ್ನೆಸ್ ವಿಷಯದಲ್ಲಿ ಉತ್ತಮವಾಗಲು ಮತ್ತು ಕಠಿಣ ಸ್ಪರ್ಧೆ ನೀಡಲು ಸಹಾಯವಾಗುತ್ತದೆ ಎಂದು ಮಾಜಿ ಕೋಚ್ ಡಬ್ಲ್ಯೂ.ವಿ. ರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚು ಟೆಸ್ಟ್ ಆಡುವುದರಿಂದ ಮಹಿಳಾ ಕ್ರಿಕೆಟರ್ಸ್ಗೆ ಆಟದ ಕಠಿಣ ಸ್ವರೂಪ ಹಾಗೂ ಆಡುವ ಅವಕಾಶ ನೀಡುತ್ತದೆ. ಈ ಹಿಂದಿನಿಗಿಂತಲೂ ಉತ್ತಮವಾಗಿ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕ್ರಿಕೆಟ್ ವೆಬ್ಸೈಟ್ಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹಿಳಾ ತಂಡದ ಮಾಜಿ ಕೋಚ್, ನಿಯಮಿತವಾಗಿ ಆಡುವುದರಿಂದ ಅವಕಾಶಗಳು ಸಿಗುತ್ತವೆ. ನಾಲ್ಕು ಅಥವಾ ಐದು ದಿನಗಳ ಕಾಲ ಕಠಿಣ ಕ್ರಿಕೆಟ್ ಆಡುವುದು ಅಷ್ಟೊಂದು ಸುಲಭವಲ್ಲ. ಆದರೆ ಹೆಚ್ಚಿನ ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗುವುದರಿಂದ ಅವರು ಮತ್ತಷ್ಟು ಗಟ್ಟಿಗೊಳ್ಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ನಾನು ಕಾಯುತ್ತೇನೆ; WTC ಫೈನಲ್ನಲ್ಲಿ ಪಂತ್ ವಿಕೆಟ್ ಕೀಪರ್ ಆಗಲಿ: ವೃದ್ಧಿಮಾನ್
ಭಾರತ ಮಹಿಳಾ ತಂಡ ಜೂನ್ 16ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿದ್ದು, 2014ರ ನಂತರ ಇದು ಮೊದಲ ಟೆಸ್ಟ್ ಪಂದ್ಯವಾಗಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ಹಗಲು -ರಾತ್ರಿ ಟೆಸ್ಟ್ ಪಂದ್ಯದಲ್ಲಿ ತಂಡ ಭಾಗಿಯಾಲಿದೆ.
ಮಹಿಳಾ ತಂಡದ ಕೋಚ್ ಆಗಿದ್ದ ರಾಮನ್ ಅವರ ಸ್ಥಾನಕ್ಕೆ ಇದೀಗ ರಮೇಶ್ ಪವಾರ್ ಆಯ್ಕೆಯಾಗಿದ್ದು, ಫೀಲ್ಡಿಂಗ್ ಕೋಚ್ ಆಗಿ ಅಭಯ್ ಶರ್ಮಾ ಆಯ್ಕೆಯಾಗಿದ್ದಾರೆ.