ETV Bharat / sports

ಮೈದಾನ ಸಿಬ್ಬಂದಿಗೆ ಪ್ರಶಸ್ತಿ ಮೊತ್ತ ಕೊಟ್ಟ ಸಿರಾಜ್​.. ಎಸಿಸಿಯಿಂದ ಗ್ರೌಂಡ್‌ಸ್ಟಾಫ್​ಗೆ 50,000 ಡಾಲರ್ ಕೊಡುಗೆ - ETV Bharath Karnataka

ಪಂದ್ಯ ಶ್ರೇಷ್ಠ ಪ್ರಶಸ್ತಿಯಲ್ಲಿ ಸಿಕ್ಕ ಮೊತ್ತವನ್ನು ಆರ್​ ಪ್ರೇಮದಾಸ್​ ಕ್ರಿಡಾಂಗಣದ ಮೈದಾನ ಸಿಬ್ಬಂದಿಗೆ ನೀಡುವುದಾಗಿ ಸಿರಾಜ್​ ಹೇಳಿದ್ದಾರೆ. ಇದಲ್ಲದೇ ಬಿಸಿಸಿಐ 41.54 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.

ACC announces
ACC announces
author img

By ETV Bharat Karnataka Team

Published : Sep 17, 2023, 10:30 PM IST

ಕೊಲಂಬೊ (ಭಾರತ): ಏಷ್ಯಾಕಪ್​ನಲ್ಲಿ ಭಾಗವಹಿಸಿದ ತಂಡದ ಆಟಗಾರರು ಎಷ್ಟು ಶ್ರಮಿಸಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಶ್ರೀಲಂಕಾದ ಆರ್​ ಪ್ರೇಮದಾಸ್​ ಕ್ರೀಡಾಂಗಣದ ಮೈದಾನ ಸಿಬ್ಬಂದಿ ಮಾತ್ರ ಏಷ್ಯಾಕಪ್​ ಪಂದ್ಯಗಳಿಗಾಗಿ ಹಗಲಿರುಳು ಕಷ್ಟ ಪಟ್ಟಿದ್ದಾರೆ. ಅವರ ಶ್ರಮಕ್ಕೆ ಎಸಿಸಿ ಗೌರವಿಸಿದೆ. ಅಲ್ಲದೇ ಫೈನಲ್​ ಪಂದ್ಯದ ಮ್ಯಾಚ್​ ವಿನ್ನರ್​ ಸಿರಾಜ್​ ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನ ಸಿಬ್ಬಂದಿಗೆ ಕೊಡಲು ನಿರ್ಧಾರ ಮಾಡಿದ್ದಾರೆ.

ಈ ವರ್ಷದ ಏಷ್ಯಾಕಪ್​ಗೆ ಅಡ್ಡಿ ಆತಂಕಗಳು ಆರಂಭದಿಂದಲೇ ಇದ್ದವು. ಪಾಕಿಸ್ತಾನ ಆಯೋಜಕ ರಾಷ್ಟ್ರವಾಗಿದ್ದರಿಂದ ಭಾರತ ಪ್ರಯಾಣಿಸುವುದಿಲ್ಲ ಎಂದು ಆರಂಭದಲ್ಲೇ ತಿಳಿಸಿತ್ತು. ಪಾಕಿಸ್ತಾನ ಈ ವಿಚಾರವಾಗಿ ಹಲವಾರು ಗೊಂದಲಗಳನ್ನು ಸೃಷ್ಟಿಸಿತ್ತು. ನಂತರ ಹೈಬ್ರಿಡ್​ ಮಾದರಿಗೆ ಒಪ್ಪಿಕೊಂಡಿತು. ಹೀಗಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನ ಏಷ್ಯಾಕಪ್​ನ ಆಯೋಜಕ ರಾಷ್ಟ್ರಗಳಾದವು.

ಏಷ್ಯಾಕಪ್​ಗೆ ಮಳೆ ಕಾಟ: ಶ್ರೀಲಂಕಾದಲ್ಲಿ ಏಷ್ಯಾಕಪ್​ ನಡೆಯುವ ಅಷ್ಟೂ ದಿನವೂ ಮಳೆಯ ಮುನ್ಸೂಚನೆ ಇತ್ತು. ಅಲ್ಲದೇ ನಾಲ್ಕು ಪಂದ್ಯಗಳಿಗೆ ಮಳೆ ಬಂದು ಅಡ್ಡಿಪಡಿಸಿತ್ತು. ಪಲ್ಲೆಕೆಲೆಯಲ್ಲಿ ನಡೆದ ಭಾರತ - ಪಾಕಿಸ್ತಾನ ನಡುವಿನ ಲೀಗ್​ ಹಂತ ಪಂದ್ಯ ಫಲಿತಾಂಶ ಕಾಣಲಿಲ್ಲ. ನಂತರ ಸೂಪರ್​ ಫೋರ್​ ಹಂತದ ಎಲ್ಲಾ ಪಂದ್ಯಗಳು ಕೊಲಂಬೊದ ಆರ್​ ಪ್ರೇಮದಾಸ್​ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಂಗಣದಲ್ಲಿ ಭಾನುವಾರ ಫೈನಲ್​ ಪಂದ್ಯದವರೆಗೂ ಮಳೆಯ ಆತಂಕದಲ್ಲೇ ಮ್ಯಾಚ್​ ನಡೆಸಲಾಯಿತು.

ಇಂಡೋ - ಪಾಕ್​ ಪಂದ್ಯಕ್ಕೆ ಬಿಟ್ಟು ಬಿಡದೇ ಕಾಡಿದ ಮಳೆ: ಲೀಗ್​ ಹಂತ ಪಂದ್ಯ ಮಳೆಯಿಂದಾಗಿ ಫಲಿತಾಂಶ ಕಾಣಲಿಲ್ಲ. ಆದರೆ ಸೂಪರ್​ ಫೋರ್​ ಹಂತದಲ್ಲಿನ ಭಾರತ - ಪಾಕಿಸ್ತಾನ ಪಂದ್ಯಕ್ಕೂ ಮಳೆ ಕಾಡಿತು. ಭಾನುವಾರದ ಪಂದ್ಯಕ್ಕೆ ಮೀಸಲು ದಿನ ಇದ್ದ ಕಾರಣ ಮಾರನೇ ದಿನ ಮಳೆಯ ಕಾಟದ ನಡುವೆಯೂ ಭಾರತ ಗೆದ್ದಿತ್ತು. ದಿನವಿಡೀ ಮಳೆ ಸುರಿದರೂ ಮೈದಾನ ಹಾಳಾಗದಂತೆ ಸಿಬ್ಬಂದಿ ರಕ್ಷಿಸಿದ ರೀತಿ ನಿಜಕ್ಕೂ ಶ್ಲಾಘನಾರ್ಹ. ಮಳೆಗೆ ಇಡೀ ಮೈದಾನವನ್ನೇ ಮುಚ್ಚಿ ರಕ್ಷಿಸಿದ್ದರು. ಅಲ್ಲದೇ ಮೈದಾನ ಒಳಗಿಸಲು ಹೆಲೋಜನ್​ ಲೈಟ್​ ಮತ್ತು ಫ್ಯಾನ್​ ಬಳಸಿದ್ದರು. ಈ ನಡೆಗೆ ದಿಗ್ಗಜ ಕ್ರಿಕೆಟಿಗರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಮೈದಾನ ಸಿಬ್ಬಂದಿ ಮಳೆ ಬಂದ ಕೂಡಲೇ ಟಾರ್ಪಲಿನ್​ ಹಿಡಿದು ಮೈದಾನಕ್ಕೆ ಒಡಿ ಬಂದು ಮಳೆಯಲ್ಲಿ ನೆನೆದು ಪಿಚ್​ ಮತ್ತು ಹೊರ ಮೈದಾನವನ್ನು ಹೆಚ್ಚು ತೇವಾಂಶ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು. ಇಂದು ಪಂದ್ಯ ಆರಂಭಕ್ಕೆ 10 ನಿಮಿಷ ಇದೆ ಎನ್ನುವಾಗ ವರುಣ ಆರ್ಭಟಿಸಿದ್ದ. ಮೈದಾನ ನೀರಿನಿಂದ ತೊಯ್ಯದಂತೆ ರಕ್ಷಿಸಿ ನಂತರ ಸಾಂಘವಾಗಿ ಪಂದ್ಯ ನಡೆಸಲು ಸಿಬ್ಬಂದಿ ಶ್ರಮಿಸಿದರು. ಶ್ರೀಲಂಕಾ ಫೈನಲ್​ಗೆ ಪ್ರವೇಶ ಪಡೆದ ಪಂದ್ಯವೂ ಮಳೆಗೆ ಸಿಲುಕಿ ಓವರ್​ ಕಡಿತ ಮಾಡಲಾಗಿತ್ತು. ಆದರೆ ಪಿಚ್​ ಹಾಳಾಗದಂತೆ ಸಿಬ್ಬಂದಿ ನೋಡಿಕೊಂಡಿದ್ದರು.

  • 🏏🏟️ Big Shoutout to the Unsung Heroes of Cricket! 🙌

    The Asian Cricket Council (ACC) and Sri Lanka Cricket (SLC) are proud to announce a well-deserved prize money of USD 50,000 for the dedicated curators and groundsmen at Colombo and Kandy. 🏆

    Their unwavering commitment and…

    — Jay Shah (@JayShah) September 17, 2023 " class="align-text-top noRightClick twitterSection" data=" ">

ಎಸಿಸಿಯಿಂದ 50,000 ಯುಎಸ್​ಡಿ: ಎಸಿಸಿ ಅಧ್ಯಕ್ಷ ಜಯ್ ಶಾ ಎಕ್ಸ್​ ಆ್ಯಪ್​ನಲ್ಲಿ (ಹಿಂದಿನ​ ಟ್ವಿಟರ್) ಪೋಸ್ಟ್​ ಮಾಡಿ,"ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ (ಎಸ್‌ಎಲ್‌ಸಿ) ಕೊಲಂಬೊ ಮತ್ತು ಕ್ಯಾಂಡಿಯಲ್ಲಿ ಮೀಸಲಾದ ಕ್ಯುರೇಟರ್‌ಗಳು ಮತ್ತು ಗ್ರೌಂಡ್ಸ್‌ಮನ್‌ಗಳಿಗೆ 50,000 ಡಾಲರ್​ ಬಹುಮಾನವನ್ನು ಘೋಷಿಸಲು ಹೆಮ್ಮೆಪಡುತ್ತೇವೆ. ಅವರ ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮವು ಏಷ್ಯಾಕಪ್ 2023 ಅನ್ನು ಮರೆಯಲಾಗದ ಚಮತ್ಕಾರವನ್ನಾಗಿ ಮಾಡಿದೆ. ಪಿಚ್ ಪರಿಪೂರ್ಣತೆಯಿಂದ ಸೊಂಪಾದ ಔಟ್‌ಫೀಲ್ಡ್‌ಗಳವರೆಗೆ, ರೋಮಾಂಚಕ ಕ್ರಿಕೆಟ್ ಆಕ್ಷನ್‌ಗೆ ವೇದಿಕೆ ಸಿದ್ಧವಾಗಿದೆ ಎಂದು ಅವರು ಖಚಿತಪಡಿಸಿಕೊಂಡರು. ಕ್ರಿಕೆಟ್‌ನ ಯಶಸ್ಸಿನಲ್ಲಿ ಈ ವ್ಯಕ್ತಿಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತದೆ. ಅವರ ಮಹಾನ್ ಸೇವೆಗಳನ್ನು ಗೌರವಿಸೋಣ!" ಎಂದಿದ್ದಾರೆ.

ಅಲ್ಲದೇ, ಬಿಸಿಸಿಐ ಕೂಡ ಮೈದಾನದ ಸಿಬ್ಬಂದಿಗೆ 41.54 ಲಕ್ಷ ರೂಪಾಯಿ ಪ್ರಶಸ್ತಿಯನ್ನು ಘೋಷಿಸಿದೆ. ಬಿಸಿಸಿಐ ಮತ್ತು ಸಿರಾಜ್​ ಅವರ ನಡೆಗೆ ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Asia Cup 2023: ಏಷ್ಯಾ ಕಪ್​ ಗೆಲ್ಲಿಸಿಕೊಟ್ಟ ಸಿರಾಜ್​.. ಫೈನಲ್ ಪಂದ್ಯದ ದಾಖಲೆಗಳು ಹೀಗಿವೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.