ಸೆಂಚುರಿಯನ್: ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ 200 ವಿಕೆಟ್ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಅತಿ ಕಡಿಮೆ ಎಸೆತದಲ್ಲಿ ಈ ಸಾಧನೆ ಮಾಡಿದ ಭಾರತೀಯ ಬೌಲರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಐಡೆನ್ ಮಾರ್ಕ್ರಮ್(13), ಕೀಗನ್ ಪೀಟರ್ಸನ್(15), ಟೆಂಬ ಬವೂಮ(52), ವಿಯಾನ್ ಮಲ್ಡರ್(12) ಮತ್ತು ಕಗಿಸೊ ರಬಾಡ(25) ವಿಕೆಟ್ ಪಡೆದರು.
-
Milestone Alert 🚨 - 200 Test wickets for @MdShami11 👏👏#SAvIND pic.twitter.com/YXyZlNRkQ1
— BCCI (@BCCI) December 28, 2021 " class="align-text-top noRightClick twitterSection" data="
">Milestone Alert 🚨 - 200 Test wickets for @MdShami11 👏👏#SAvIND pic.twitter.com/YXyZlNRkQ1
— BCCI (@BCCI) December 28, 2021Milestone Alert 🚨 - 200 Test wickets for @MdShami11 👏👏#SAvIND pic.twitter.com/YXyZlNRkQ1
— BCCI (@BCCI) December 28, 2021
ಈ ಮೂಲಕ ಭಾರತದ ಪರ 200 ವಿಕೆಟ್ ಪಡೆದ 11ನೇ ಬೌಲರ್ ಮತ್ತು 5ನೇ ವೇಗದ ಬೌಲರ್ ಎನಿಸಿಕೊಂಡರು. ಭಾರತದ ಪರ ಕಪಿಲ್ ದೇವ್(434), ಇಶಾಂತ್ ಶರ್ಮಾ(311), ಜಹೀರ್ ಖಾನ್(311) ಜಾವಗಲ್ ಶ್ರೀನಾಥ್(236) ಶಮಿಗಿಂತ ಹೆಚ್ಚು ವಿಕೆಟ್ ಪಡೆದಿರುವ ವೇಗದ ಬೌಲರ್ಗಳಾಗಿದ್ದಾರೆ.
ಅತ್ಯಂತ ಕಡಿಮೆ ಎಸೆತಗಳಲ್ಲಿ 200 ವಿಕೆಟ್..
ಶಮಿ 9896 ಎಸೆತಗಳಲ್ಲಿ 200 ವಿಕೆಟ್ ಪಡೆಯುವ ಮೂಲಕ ಭಾರತದ ಪರ ಅತ್ಯಂತ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಡರು. ರವಿಚಂದ್ರನ್ ಅಶ್ವಿನ್ 10,248, ಕಪಿಲ್ ದೇವ್ 11,066, ರವೀಂದ್ರ ಜಡೇಜಾ 11,989 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದರ ಜೊತೆಗೆ ಶಮಿ ವೇಗವಾಗಿ 200 ವಿಕೆಟ್ ಪಡೆದ ಭಾರತದ 3ನೇ ವೇಗದ ಬೌಲರ್ ಎನಿಸಿಕೊಂಡರು. ಅವರು 55 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಕಪಿಲ್ ದೇವ್ 50, ಜಾವಗಲ್ ಶ್ರೀನಾಥ್ 54 ಪಂದ್ಯಗಳಲ್ಲಿ 200 ವಿಕೆಟ್ ಪಡೆದಿದ್ದರು. ಒಟ್ಟಾರೆ ರವಿಚಂದ್ರನ್ ಅಶ್ವಿನ್ 37 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 100 ವಿಕೆಟ್ ಪಡೆದು ಧೋನಿ ದಾಖಲೆ ಉಡೀಸ್ ಮಾಡಿದ ಪಂತ್