ETV Bharat / sports

ನ್ಯೂಜಿಲೆಂಡ್‌ನ 5 ವಿಕೆಟ್‌ ಉರುಳಿಸಿದ ಮೊಹಮ್ಮದ್ ಶಮಿ: ಕಪಿಲ್​ ದೇವ್​, ಯುವರಾಜ್​ ಸಿಂಗ್​ ದಾಖಲೆ ಪುಡಿ

ಧರ್ಮಶಾಲಾ ಮೈದಾನದಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್​ ಶಮಿ ಐದು ವಿಕೆಟ್​ ಕಿತ್ತರು.

Mohammed Shami
Mohammed Shami
author img

By ETV Bharat Karnataka Team

Published : Oct 22, 2023, 9:48 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): 2023ರ ವಿಶ್ವಕಪ್​ನಲ್ಲಿ ಭಾರತ ತಂಡ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈಗಾಗಲೇ ನಡೆದ ಪಂದ್ಯಗಳಲ್ಲಿ ಎದುರಾಳಿ ತಂಡವನ್ನು 300 ರನ್‌ಗಳ ಗಡಿ ದಾಟದಂತೆ ನಿಯಂತ್ರಿಸಿದೆ. ಅಲ್ಲದೇ ಯಾವುದೇ ತಂಡದ ಬ್ಯಾಟರ್​ಗಳೂ ಶತಕ ದಾಖಲಿಸಿರಲಿಲ್ಲ. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಡೇರಿಲ್ ಮಿಚೆಲ್ ಶತಕ ದಾಖಲಿಸುವ ಮೂಲಕ ಈ ರೆಕಾರ್ಡ್​ ಬ್ರೇಕ್​ ಮಾಡಿದರು. ಆದರೆ ಅವರ ಶತಕದಾಟದ ಹೊರತಾಗಿಯೂ ತಂಡ 273 ರನ್‌ಗಳಿಗೆ ಸರ್ವಪತನ ಕಂಡಿತು. ಡೆತ್​ ಓವರ್​ಗಳಲ್ಲಿ ಶಮಿ ವಿಕೆಟ್‌ಗಳನ್ನು ಉರುಳಿಸಿ ಆಲ್​ಔಟ್​ ಮಾಡಿದರು.

ವಿಶ್ವಕಪ್​ನಲ್ಲಿ ಎರಡನೇ 5 ವಿಕೆಟ್​ ಸಾಧನೆ: ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಶಮಿ 10 ಓವರ್​ ಮಾಡಿ 54 ರನ್​ ಬಿಟ್ಟುಕೊಟ್ಟು 5 ವಿಕೆಟ್​ ಕಬಳಿಸಿದರು. ಇದರಿಂದ ವಿಶ್ವಕಪ್​ನಲ್ಲಿ ಎರಡನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದರು. ವಿಶ್ವಕಪ್​ನಲ್ಲಿ 5 ವಿಕೆಟ್​ ಪಡೆದ ಭಾರತೀಯರಲ್ಲಿ ಇವರೇ ಮೊದಲಿಗ. ಕಪಿಲ್​ ದೇವ್​, ವೆಂಕಟೇಶ್​ ಪ್ರಸಾದ್​, ರಾಬಿನ್​ ಸಿಂಗ್​​, ಆಶಿಶ್​ ನೆಹ್ರಾ ಮತ್ತು ಯುವರಾಜ್​ ಸಿಂಗ್​ ಒಂದು ಬಾರಿ ಪಂಚ ವಿಕೆಟ್​ ಪಡೆದ ಭಾರತೀಯ ಬೌಲರ್​ಗಳಾಗಿದ್ದಾರೆ.

ಶಮಿ ಇದರೊಂದಿಗೆ ವಿಶ್ವಕಪ್​ನಲ್ಲಿ 5 ಬಾರಿ ನಾಲ್ಕಕ್ಕೂ ಹೆಚ್ಚು ವಿಕೆಟ್​ ಪಡೆದ ಸಾಧನೆ ಮಾಡಿದರು. ಈ ಸಾಧನೆಗೈದ ಭಾರತದ ಮೊದಲ ಬೌಲರ್​ ಎಂಬ ಖ್ಯಾತಿಗೂ ಪಾತ್ರರಾದರು. ಅಲ್ಲದೇ ವಿಶ್ವ ಮಟ್ಟದಲ್ಲಿ ಮಿಚೆಲ್​ ಸ್ಟಾರ್ಕ್​ 6 ಬಾರಿ 4ಕ್ಕೂ ಹೆಚ್ಚು ವಿಕೆಟ್​ ಪಡೆದಿದ್ದರೆ, ಇಮ್ರಾನ್​ ತಾಹಿರ್​ ಹಾಗೂ ಶಮಿ 5 ಸಲ ಈ ಸಾಧನೆ ಮಾಡಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.

  • " class="align-text-top noRightClick twitterSection" data="">

ವಿಶ್ವಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್​ ಪಡೆದ ಎರಡನೇ ಬೌಲರ್​ ಶಮಿ. ಜಹೀರ್​ ಖಾನ್​ ಮತ್ತು ಜಾವಗಲ್​ ಶ್ರೀನಾಥ್​ 44 ವಿಕೆಟ್​ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶಮಿ 36 ವಿಕೆಟ್​ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅನಿಲ್​ ಕುಂಬ್ಳೆ (31), ಜಸ್ಪ್ರೀತ್​ ಬುಮ್ರಾ (29) ಹಾಗು ಕಪಿಲ್​ ದೇವ್​ (28) ಇದ್ದಾರೆ.

1975ರ ವಿಶ್ವಕಪ್​ ನಂತರ ಭಾರತದ ವಿರುದ್ಧ ಶತಕ: ನ್ಯೂಜಿಲೆಂಡ್​ ಇನ್ನಿಂಗ್ಸ್​ನಲ್ಲಿ ಡೇರಿಲ್ ಮಿಚೆಲ್ (130) ಶತಕ ಗಳಿಸಿದರು. ಭಾರತದ ವಿರುದ್ಧ ವಿಶ್ವಕಪ್​ನಲ್ಲಿ ಒಬ್ಬ ನ್ಯೂಜಿಲೆಂಡ್​ ಬ್ಯಾಟರ್‌ನಿಂದ 48 ವರ್ಷದ ನಂತರ ಶತಕ ಮೂಡಿಬಂತು. 1975ರ ವಿಶ್ವಕಪ್​ನಲ್ಲಿ ಗ್ಲೆನ್ ಟರ್ನರ್ 114 ರನ್​ ಗಳಿಸಿದ್ದರು. ಅಲ್ಲದೇ ಡೇರಿಲ್ ಮಿಚೆಲ್ ಭಾರತದ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ನಾಲ್ಕನೇ ವೈಯುಕ್ತಿಕ ಅತಿ ಹೆಚ್ಚಿನ ರನ್ ಪೇರಿಸಿದರು. ಟಾಮ್​ ಲ್ಯಾಥಮ್​ (145), ಬ್ರೇಸ್​ವೆಲ್​ (140), ಡೆವೋನ್​ ಕಾನ್ವೆ (138) ಮೇಲಿನ ಮೂರು ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್​ನಲ್ಲಿ 2,000 ರನ್ ಗಡಿ ದಾಟಿದ ಗಿಲ್​: ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.