ETV Bharat / sports

ರಿಜ್ವಾನ್​ ವಿಶ್ವದಾಖಲೆ: ಟಿ-20ಯಲ್ಲಿ ಒಂದೇ ವರ್ಷ 2000 ರನ್​ ಸಿಡಿಸಿದ ಏಕೈಕ ಬ್ಯಾಟರ್ - ಕ್ರಿಸ್​ ಲೀಗ್​

ಟಿ-20 ಕ್ರಿಕೆಟ್​ನಲ್ಲಿ 2000 ರನ್​ ಸಿಡಿಸಿರುವ ವಿಶ್ವ ದಾಖಲೆ ಬರೆದಿರುವ ರಿಜ್ವಾನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ಗಳಿಸಿದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅವರು 29 ಇನ್ನಿಂಗ್ಸ್​ಗಳಿಂದ 1326 ರನ್​ಗಳಿಸಿದ್ದಾರೆ. ಬಾಬರ್ ಅಜಮ್​ 939 ರನ್​ಗಳಿಸಿದ್ದಾರೆ.

Mohammad Rizwan
ರಿಜ್ವಾನ್ ವಿಶ್ವದಾಖಲೆ
author img

By

Published : Dec 16, 2021, 10:20 PM IST

ಕರಾಚಿ: ಪಾಕಿಸ್ತಾನದ ಆರಂಭಿಕ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್​ ವೆಸ್ಟ್​ ಇಂಡೀಸ್​ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ 2021ರ ಕ್ಯಾಲೆಂಡರ್​ ವರ್ಷದಲ್ಲಿ ಟಿ-20 ಕ್ರಿಕೆಟ್​ನಲ್ಲಿ 2000 ರನ್​ ಪೂರೈಸಿದ್ದಾರೆ. ಚುಟುಕು ಕ್ರಿಕೆಟ್​ ಇತಿಹಾಸದಲ್ಲೇ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

2021ರಲ್ಲಿ ಅದ್ವಿತೀಯ ಫಾರ್ಮ್​ನಲ್ಲಿರುವ ಪಾಕಿಸ್ತಾನ ಬ್ಯಾಟರ್​ 45 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು 55.68 ಸರಾಸರಿ ಮತ್ತು 130ರ ಸ್ಟ್ರೈಕ್​ ರೇಟ್​​ನಲ್ಲಿ 2036 ರನ್​ಗಳಿಸಿರುವ ರಿಜ್ವಾನ್, 18 ಅರ್ಧಶತಕ ಮತ್ತು 1 ಶತಕ ಸಿಡಿಸಿದ್ದಾರೆ.

ಇವರ ಆರಂಭಿಕ ಜೊತೆಗಾರನಾಗಿರುವ ನಾಯಕ ಬಾಬರ್​ ಅಜಮ್​ ಒಂದೇ ವರ್ಷ ಗರಿಷ್ಠ ರನ್​ ಸಿಡಿಸಿರುವ 2ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಅವರು 2021ರಲ್ಲಿ 43 ಇನ್ನಿಂಗ್ಸ್​ಗಳಲ್ಲಿ 2 ಶತಕ ಮತ್ತು 19 ಅರ್ಧಶತಕದ ನೆರವಿನಿಂದ 1779 ರನ್​ಗಳಿಸಿದ್ದಾರೆ.

ಇವರಿಗಿಂತ ಮೊದಲು ವಿಂಡೀಸ್ ದೈತ್ಯ ಕ್ರಿಸ್​ ಗೇಲ್​ 2015ರಲ್ಲಿ 36 ಇನ್ನಿಂಗ್ಸ್​ಗಳಿಂದ 3 ಶತಕ ಮತ್ತು 10 ಅರ್ಧಶತಕ ಸಹಿತ 1665 ರನ್​ಗಳಿಸಿದ್ದರು. ವಿರಾಟ್​ ಕೊಹ್ಲಿ 2016ರಲ್ಲಿ 29 ಇನ್ನಿಂಗ್ಸ್​ಗಳಲ್ಲಿ 4 ಶತಕ ಮತ್ತು 14 ಅರ್ಧಶತಕಗಳ ನೆರವಿನಿಂದ 1614 ರನ್​ಗಳಿಸಿದ್ದರು.

ಅಂತಾರಾಷ್ಟ್ರೀಯ ಟಿ-20ಯಲ್ಲೂ ರಿಜ್ವಾನ್​ ದಾಖಲೆ:

ಒಟ್ಟು ಟಿ20 ಕ್ರಿಕೆಟ್​ನಲ್ಲಿ(ಲೀಗ್+ಅಂತಾರಾಷ್ಟ್ರೀಯ) 2000 ರನ್​ ಸಿಡಿಸಿರುವ ವಿಶ್ವ ದಾಖಲೆ ಬರೆದಿರುವ ರಿಜ್ವಾನ್ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ಗಳಿಸಿದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅವರು 29 ಇನ್ನಿಂಗ್ಸ್​ಗಳಿಂದ 1326 ರನ್​ಗಳಿಸಿದ್ದಾರೆ. ಬಾಬರ್ ಅಜಮ್​ 939 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಶ್ರೇಯಸ್​ ಅಯ್ಯರ್​ಗೆ ದಕ್ಷಿಣ ಆಫ್ರಿಕಾದಲ್ಲಿ ನೈಜ ಸವಾಲು ಎದುರಾಗಲಿದೆ: ಗಂಗೂಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.