ETV Bharat / sports

ಕೋಚ್​ಗಳು ರಾಜೀನಾಮೆ ನೀಡುತ್ತಿದ್ದಂತೆ, ನಿವೃತ್ತಿ ಹಿಂಪಡೆದುಕೊಂಡ ವೇಗಿ ಅಮೀರ್​! - ಪಾಕ್​ ವೇಗಿ ಅಮೀರ್​

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಣೆ ಮಾಡಿದ್ದ ಪಾಕ್​ ವೇಗಿ ಮೊಹಮ್ಮದ್​ ಅಮೀರ್ ಇದೀಗ ಯೂ-ಟರ್ನ್​ ಹೊಡೆದಿದ್ದಾರೆ.

Mohammad amir
Mohammad amir
author img

By

Published : Sep 7, 2021, 8:58 PM IST

ಕರಾಚಿ(ಪಾಕಿಸ್ತಾನ): ಮುಂಬರುವ ಟಿ-20 ವಿಶ್ವಕಪ್​ ಟೂರ್ನಿಗೋಸ್ಕರ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ಈ ಹಿಂದೆ ಕೋಚ್​ಗಳಾಗಿದ್ದ ಮಿಸ್ಬಾ ಉಲ್ ಹಕ್​ ಹಾಗೂ ವಕಾರ್​ ಯೂನಿಸ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಳೆದ ವರ್ಷ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದ ಮೊಹಮ್ಮದ್​ ಅಮೀರ್​ ಇದೀಗ ತಮ್ಮ ನಿರ್ಧಾರ ಹಿಂಪಡೆದುಕೊಳ್ಳಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಪಾಕ್‌ನ ಸುದ್ದಿವಾಹಿನಿವೊಂದು​ ಈ ಕುರಿತ ವರದಿ ಪ್ರಕಟಿಸಿದ್ದು, ಮುಖ್ಯ ಕೋಚ್​​ ಮಿಸ್ಬಾ ಉಲ್ ಹಕ್​​ ಮತ್ತು ಬೌಲಿಂಗ್​ ಕೋಚ್​ ವಕಾರ್​ ಯೂನಿಸ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಅಮೀರ್​​ ನಿವೃತ್ತಿ ಹಿಂಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದಾರೆಂದು ತಿಳಿಸಿದೆ. ಜತೆಗೆ ರಾಷ್ಟ್ರೀಯ ಕ್ರಿಕೆಟ್​​​ಗೆ ಮರಳುವುದಾಗಿ ಘೋಷಿಸಿದ್ದಾರೆ ಎಂದಿದೆ.

29 ವರ್ಷದ ಅಮೀರ್​ ಪಾಕಿಸ್ತಾನ ಪರ 36 ಟೆಸ್ಟ್​​​, 61 ಏಕದಿನ ಮತ್ತು 50 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲ್ಲ ಪಂದ್ಯಗಳಿಂದ 259 ವಿಕೆಟ್​ ಪಡೆದುಕೊಂಡಿದ್ದಾರೆ. 2010ರಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಪಂದ್ಯವೊಂದರಲ್ಲಿ ಸ್ಪಾಟ್​ ಫಿಕ್ಸಿಂಗ್​ ನಡೆಸಿದ್ದಕ್ಕಾಗಿ 5 ವರ್ಷಗಳ ಕಾಲ ನಿಷೇಧಕ್ಕೊಳಗಾಗಿ ತಂದನಂತರ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದರು. ಆದರೆ ಕಳೆದ ವರ್ಷ ದಿಢೀರ್​ ಆಗಿ ಕ್ರಿಕೆಟ್​ನಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಇದೀಗ ಯೂಟರ್ನ್ ಹೊಡೆದಿದ್ದಾರೆ.

ಮಿಸ್ಬಾ ಮತ್ತು ಸಹಚರರು ತಂಡ ಬಿಟ್ಟರೆ ಮತ್ತೆ ಪಾಕ್ ಪರ ಆಡುವೆ ಎಂದಿದ್ದ ಅಮೀರ್​

ಎಲ್ಲ ಮಾದರಿ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಣೆ ಮಾಡಿದ ಬಳಿಕ ಪಿಸಿಬಿ ವಿರುದ್ಧ ಕಿಡಿಕಾರಿದ್ದ ಮೊಹಮ್ಮದ್​ ಅಮೀರ್​, ತಾವು ತಂಡದ ಪರ ಮತ್ತೆ ಆಡಬೇಕಾದರೆ ಕೋಚ್​ ಮಿಸ್ಬಾ ಉಲ್​ ಹಕ್​ ಮತ್ತು ಸಹಚರರು ಪಾಕ್​ ತಂಡ ಬಿಟ್ಟು ಹೋಗಬೇಕು ಎಂದು ತಿಳಿಸಿದ್ದರು.

"ಈಗಿರುವ ನಿರ್ವಹಣಾ ಮಂಡಳಿ ಪಿಸಿಬಿಯನ್ನು ತ್ಯಜಿಸಿದ ನಂತರ ಮತ್ತೆ ನಾನು ಪಾಕಿಸ್ತಾನ ತಂಡದ ಪರ ಆಡಲು ಲಭ್ಯನಾಗುತ್ತೇನೆ ಎಂದು ತಿಳಿಸಲು ಇಚ್ಛಿಸುತ್ತೇನೆ. ದಯವಿಟ್ಟು ನಿಮ್ಮ ಕಥೆಗಳನ್ನು ಮಾರಾಟ ಮಾಡಲು ಸುಳ್ಳುಸುದ್ದಿಯನ್ನು ಹಬ್ಬಿಸುವುದನ್ನು ಮೊದಲು ನಿಲ್ಲಿಸಿ" ಎಂದು ಅಮೀರ್ ಟ್ವಿಟರ್​ ಮೂಲಕ ತಿಳಿಸಿದ್ದರು.

ಇದನ್ನೂ ಓದಿ: ಮಿಸ್ಬಾ ಮತ್ತು ಸಹಚರರು ತಂಡ ಬಿಟ್ಟರೆ ಮತ್ತೆ ಪಾಕ್ ಪರ ಆಡುವೆ; ಮೊಹಮ್ಮದ್ ಅಮೀರ್​

ಯುಎಇನಲ್ಲಿ ಆಯೋಜನೆಗೊಂಡಿರುವ ಟಿ-20 ವಿಶ್ವಕಪ್​​ಗೆ ನಿನ್ನೆ 15 ಸದಸ್ಯರನ್ನೊಳಗೊಂಡ ಪಾಕ್​​ ತಂಡ ಪ್ರಕಟಗೊಂಡಿದೆ. ಇದೀಗ ಮೊಹಮ್ಮದ್​ ಅಮೀರ್​ಗೆ ಮೀಸಲು ಆಟಗಾರನಾಗಿ ನೇಮಕ ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.