ಕರಾಚಿ(ಪಾಕಿಸ್ತಾನ): ಕಾಂಗರೂ ನಾಡಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್ಗೋಸ್ಕರ ಬಹುತೇಕ ಎಲ್ಲ ತಂಡಗಳೂ ಆಯ್ಕೆಯಾಗಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ಕೂಡ ನಿನ್ನೆ 15 ಸದಸ್ಯರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಪಾಕಿಸ್ತಾನದ ಮಾಜಿ ಬೌಲರ್ ಮೊಹಮ್ಮದ್ ಅಮೀರ್, ಮುಖ್ಯ ಆಯ್ಕೆಗಾರರ ಬಗ್ಗೆ ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಮುಖ್ಯ ಆಯ್ಕೆದಾರ ಸಮಿತಿಯ ಅಗ್ಗದ ಆಯ್ಕೆ ಇದಾಗಿದೆ ಎಂದು ಮೊಹಮ್ಮದ್ ಅಮೀರ್ ಟ್ವೀಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾನ್ ಮಸೂದ್ ಹಾಗೂ ಶಾಹೀನ್ ಆಫ್ರಿದಿ ಹೊರತಾಗಿ ಆಯ್ಕೆ ಮಂಡಳಿ ಬಹುತೇಕ ಏಷ್ಯಾ ಕಪ್ನಲ್ಲಿ ಕಣಕ್ಕಿಳಿದಿದ್ದ ತಂಡಕ್ಕೆ ಮಣೆ ಹಾಕಿದೆ. ಅನುಭವಿ ಆಟಗಾರರಾದ ಸರ್ಫರಾಜ್ ಅಹ್ಮದ್, ಶೋಯೆಬ್ ಮಲಿಕ್, ಮುಹಮ್ಮದ್ ವಾಸೀಂ ಅವರನ್ನು ನಿರ್ಲಕ್ಷ್ಯಿಸಲಾಗಿದೆ. ಹೀಗಾಗಿ, ಮೊಹಮ್ಮದ್ ಅಮೀರ್ ಗೇಲಿ ಮಾಡಿದ್ದಾರೆ.
ಏಷ್ಯಾ ಕಪ್ನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮಧ್ಯಮ ಕ್ರಮಾಂಕದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಇದರಲ್ಲಿ ಬಹುತೇಕ ಎಲ್ಲ ಬ್ಯಾಟರ್ಗಳು ವಿಫಲರಾಗಿದ್ದರು. ಹೀಗಾಗಿ, ವಿಶ್ವಕಪ್ಗೋಸ್ಕರ ಕೆಲ ಬದಲಾವಣೆಗಳಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿತ್ತು. ಆದರೆ, ಆಯ್ಕೆ ಸಮಿತಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.
ಪಾಕ್ ಕ್ರಿಕೆಟ್ ತಂಡ ಹೀಗಿದೆ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನ್ ಮಸೂದ್ ಮತ್ತು ಉಸ್ಮಾನ್ ಖಾದಿರ್
ಮೀಸಲು ಆಟಗಾರರು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್ ಮತ್ತು ಶಹನವಾಜ್ ದಹಾನಿ