ETV Bharat / sports

ಭಾರತ-ಪಾಕಿಸ್ತಾನ ಕ್ರಿಕೆಟ್​ಗೆ ಆತಿಥ್ಯವಹಿಸಲು ಮುಂದೆ ಬಂದ ದುಬೈ ಕ್ರಿಕೆಟ್​: ಅಮೀರ್ ಅಭಿನಂದನೆ - ಇಂಡೋ-ಪಾಕ್​ ಸರಣಿಗೆ ಅಮೀರ್ ಬೆಂಬಲ

ಭಾರತ ಮತ್ತು ಪಾಕಿಸ್ತಾನ ತಂಡಗಳು ರಾಜಕೀಯ ಕಾರಣಗಳಿಂದ 2013ರಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯನ್ನಾಡಿಲ್ಲ. ಎರಡು ದಿನಗಳ ಹಿಂದೆ ಅಬ್ದುಲ್ ರೆಹಮಾನ್​, ಎರಡೂ ದೇಶಗಳ ನಡುವಿನ ಸರಣಿ ಆಯೋಜನೆಗೆ ಯುಎಇ ಸರಿಯಾದ ತಟಸ್ಥ ಸ್ಥಳ, ಇದರಿಂದ ಎರಡೂ ದೇಶಗಳ ನಡುವೆ ದೀರ್ಘಕಾಲದಿಂದ ಇರುವ ಬಿಕ್ಕಟ್ಟನ್ನು ಕಡಿಮೆ ಮಾಡಬಹುದು ಎಂದಿದ್ದರು.

Mohammad Amir
ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ
author img

By

Published : Nov 25, 2021, 9:58 PM IST

ಅಬುಧಾಬಿ: ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗೆ ಯುಎಇಯಲ್ಲಿ ಆತಿಥ್ಯ ವಹಿಸುವುದಕ್ಕೆ ನಾವು ಸಿದ್ಧ ಎಂದಿದ್ದ ದುಬೈ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷ ಅಬ್ಧುಲ್ ರಹಮಾನ್​ ಪರ ಪಾಕ್​ ಮಾಜಿ ವೇಗಿ ಮೊಹಮ್ಮದ್ ಅಮೀರ್ ​ಮಾತನಾಡಿದ್ದು, ಇದು ಒಳ್ಳೆಯ ನಿರ್ಧಾರ, ಇದರಿಂದ ಕ್ರಿಕೆಟ್​ ಆಟಕ್ಕೆ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ರಾಜಕೀಯ ಕಾರಣಗಳಿಂದ 2013ರಿಂದ ಯಾವುದೇ ದ್ವಿಪಕ್ಷೀಯ ಸರಣಿಯನ್ನಾಡಿಲ್ಲ. ಎರಡು ದಿನಗಳ ಹಿಂದೆ ಅಬ್ದುಲ್ ರೆಹಮಾನ್​ ಎರಡೂ ದೇಶಗಳ ನಡುವಿನ ಸರಣಿ ಆಯೋಜನೆ ಯುಎಇ ಸರಿಯಾದ ತಟಸ್ಥ ಸ್ಥಳ, ಇದರಿಂದ ಎರಡೂ ದೇಶಗಳ ನಡುವೆ ದೀರ್ಘಕಾಲದಿಂದ ಇರುವ ಬಿಕ್ಕಟ್ಟನ್ನು ಕಡಿಮೆ ಮಾಡಬಹುದು ಎಂದಿದ್ದರು.

ಈ ಕುರಿತು ಮಾತನಾಡಿರುವ ಅಮೀರ್, " ಇದೊಂದು ಒಳ್ಳೆಯ ಸೂಚನೆ ಮತ್ತು ನಾವು ರೆಹಮಾನ್​ಗೆ ಧನ್ಯವಾದ ಹೇಳಬೇಕು. ಆದರೆ ಎರಡೂ ದೇಶಗಳ ಸರ್ಕಾರಗಳು ಒಟ್ಟಿಗೆ ಕುಳಿತು ಚರ್ಚಿಸುವವರೆಗೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗೆಯೇ, 3ನೇ ವ್ಯಕ್ತಿಯ ಪ್ರವೇಶದಿಂದ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಇದರ ಜೊತೆಗೆ ಎರಡೂ ಕ್ರಿಕೆಟ್ ಮಂಡಳಿಗಳ ಮೇಲೆ ಆಧಾರಿತವಾಗಿರುತ್ತದೆ. ರಾಷ್ಟ್ರದ ಎಲ್ಲಾ ಪಕ್ಷಗಳು ಒಪ್ಪಿದರೆ ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ಆಯೋಜಿಸಬಹುದು. ಇದರಿಂದ ಕ್ರೀಡೆಗೆ ಒಳ್ಳೆಯದು" ಎಂದು ಅಬುಧಾಬಿ ಟಿ10 ಲೀಗ್​ನಲ್ಲಿ ಭಾಗವಹಿಸಿದ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ:ಶ್ರೇಯಸ್​ ಟೆಸ್ಟ್ ಆಟ ನೋಡುವ ಕನಸು ನನಸಾಗಿದೆ: ಅಯ್ಯರ್ ತಂದೆ 'ಸಂತೋಷ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.