ಲಂಡನ್: ಭಾರತದ ವಿರುದ್ಧ ಗುರುವಾರದಿಂದ ಆರಂಭವಾಗಲಿರುವ 4ನೇ ಟೆಸ್ಟ್ ಪಂದ್ಯಕ್ಕೆ ಜೋಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಆಲ್ರೌಂಡರ್ ಮೊಯೀನ್ ಅಲಿ ಇಂಗ್ಲೆಂಡ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಜೋಸ್ ಬಟ್ಲರ್ ಪಿತೃತ್ವ ರಜೆ ತೆಗೆದಕೊಂಡು ಸರಣಿಯಿಂದ ಹಿಂದೆ ಸರಿದ ನಂತರ ಮೊಯೀನ್ ಅಲಿಯನ್ನು ಇಸಿಬಿ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಉಪನಾಯಕನಾಗಿ ಆಯ್ಕೆ ಮಾಡಿದೆ. 34 ವರ್ಷದ ಮೊಯೀನ್ ಅಲಿ ಇಂಗ್ಲೆಂಡ್ ಪರ 63 ಟೆಸ್ಟ್ ಪಂದ್ಯಗಳನ್ನಾಡಿದ್ದು, 5 ಶತಕಗಳ ಸಹಿತ 2879 ರನ್ ಮತ್ತು 193 ವಿಕೆಟ್ ವಿಕೆಟ್ ಪಡೆದಿದ್ದಾರೆ. 5 ಬಾರಿ 5 ವಿಕೆಟ್ ಪಡೆದಿದ್ದಾರೆ.
-
Moeen Ali has been named as our vice-captain for the fourth LV= Insurance Test against India. Congrats, Mo! 👏 pic.twitter.com/4eYRn9WXWv
— England Cricket (@englandcricket) September 1, 2021 " class="align-text-top noRightClick twitterSection" data="
">Moeen Ali has been named as our vice-captain for the fourth LV= Insurance Test against India. Congrats, Mo! 👏 pic.twitter.com/4eYRn9WXWv
— England Cricket (@englandcricket) September 1, 2021Moeen Ali has been named as our vice-captain for the fourth LV= Insurance Test against India. Congrats, Mo! 👏 pic.twitter.com/4eYRn9WXWv
— England Cricket (@englandcricket) September 1, 2021
ಗುರುವಾರದಿಂದ ಓವಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ 4ನೇ ಟೆಸ್ಟ್ ಪಂದ್ಯ ನಡೆಯಲಿದೆ. ಎರಡು ತಂಡಗಳು ತಲಾ ಒಂದು ಟೆಸ್ಟ್ ಪಂದ್ಯ ಗೆದ್ದು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆಲ್ರೌಂಡರ್ ಕ್ರಿಸ್ ವೋಕ್ಸ್ ಮತ್ತು 3ನೇ ಟೆಸ್ಟ್ ಪಂದ್ಯದಿಂದ ಗಾಯದ ಕಾರಣ ಹೊರಗುಳಿದಿದ್ದ ಮಾರ್ಕ್ ವುಡ್ ಇಂಗ್ಲೆಂಡ್ ತಂಡಕ್ಕೆ ಹಿಂದಿರುಗಿದ್ದಾರೆ. ವೋಕ್ಸ್ ಕೂಡ ಗಾಯದ ಸಮಸ್ಯೆಯಿಂದ ಮೊದಲ ಮೂರು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದರು.
ಇದನ್ನು ಓದಿ: ENG vs IND 4th Test : ಭಾರತ ಟೆಸ್ಟ್ ತಂಡಕ್ಕೆ ಕನ್ನಡಿಗ ಪ್ರಸಿಧ್ ಕೃಷ್ಣ ಆಯ್ಕೆ