ETV Bharat / sports

ಕೌಟುಂಬಿಕ ಆರೋಪದಿಂದ ಆತ್ಮಹತ್ಯೆಗೆ ನಿರ್ಧರಿಸಿದ್ದ ಶಮಿ; '30 ಡೇಸ್ ವಿತ್ ಶಮಿ' ಪುಸ್ತಕದಲ್ಲಿದೆ ನೈಜ ಕಥನ - ETV Bharath Karnataka

30 Days With Shami: ಕೌಟುಂಬಿಕ ಆರೋಪಗಳಿಂದ ಖಿನ್ನತೆಗೆ ಒಳಗಾಗಿ ಸಾವಿನ ಬಗ್ಗೆ ಚಿಂತಿಸಿದ್ದ ಮೊಹಮ್ಮದ್​ ಶಮಿಯ ಬಗ್ಗೆ ಅವರ ಆಪ್ತ ಸ್ನೇಹಿತರ ಮಾತು ಹಾಗೇ '30 ಡೇಸ್ ವಿತ್ ಶಮಿ' ಪುಸ್ತಕದಲ್ಲಿನ ರಹಸ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

Mohammed Shami
Mohammed Shami
author img

By ETV Bharat Karnataka Team

Published : Nov 17, 2023, 10:35 PM IST

ಡೆಹ್ರಾಡೂನ್ (ಉತ್ತರಾಖಂಡ): ವಿಶ್ವಕಪ್​ ಸೆಮೀಸ್​ನಲ್ಲಿ 7 ವಿಕೆಟ್​ ಪಡೆದು ಮಿಂಚಿದ ಶಮಿ ದೇಶಕ್ಕೆ ಈಗ ಸೂಪರ್​ ಸ್ಟಾರ್​ ಇದ್ದಂತೆ. ಅವರ ಬೌಲಿಂಗ್​ ಪ್ರದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಮೊಹಮ್ಮದ್​ ಶಮಿಯ ಒಳಗಿನ ನೋವು ಹೆಚ್ಚಿನವರಿಗೆ ತಿಳಿದಿಲ್ಲ. ಮೊಹಮ್ಮದ್ ಶಮಿ ವಿವಾದಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರ ಮೇಲೆ ಅವರ ಪತ್ನಿಯಿಂದ ದೇಶದ್ರೋಹದ ಆರೋಪ ಮಾತ್ರವಲ್ಲದೆ, ಕೌಟುಂಬಿಕ ಕಲಹಗಳು ಅವರನ್ನು ಇನ್ನೂ ಕಾಡಿದ್ದವು.

ಜೀವನದ ಈ ಎಲ್ಲ ಬಿರುಗಾಳಿಗಳ ವಿರುದ್ಧ ಹೋರಾಡುತ್ತಿರುವ ಮೊಹಮ್ಮದ್ ಶಮಿ 2023ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಹೆಮ್ಮೆಯಾಗಿ ಉಳಿದಿದ್ದಾರೆ. ಈ ಎಲ್ಲ ವಿವಾದಗಳನ್ನು ಬದಿಗಿಟ್ಟು, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ನ 7 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಫೈನಲ್​ ದಾರಿ ತೋರಿದರು. ಶಮಿಯ ಆ ಬೌಲಿಂಗ್​ ಪ್ರದರ್ಶನ ಮುಂಬೈನಲ್ಲಿ ಬಾರದಿದ್ದರೆ, 2019 ವಿಶ್ವಕಪ್​ ರೀತಿಯಲ್ಲೇ ಟೀಮ್​ ಇಂಡಿಯಾ ಸೆಮೀಸ್​ನಿಂದ ಹೊಗುಳಿಯಬೇಕಿತ್ತು.

ಮೊಹಮ್ಮದ್​ ಶಮಿ ಅವರ ಆಪ್ತ ಸ್ನೇಹಿತ ಉಮೇಶ್​ ಶರ್ಮಾ ಅವರ ಸಂಕಷ್ಟದ ಕಾಲದಲ್ಲಿ ಅವರೊಂದಿಗೆ ಕಳೆದ ದಿನಗಳ ಬಗ್ಗೆ ನೆನೆದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಆಟಗಾರ ಇಂದು ದೇಶವೇ ಮೆಚ್ಚುವಂತೆ ಆಡುತ್ತಿದ್ದಾನೆ. ಶಮಿ ಎಲ್ಲರಿಂದಲೂ ನಿಂದನೆಗೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರಾದ ಹರಿದ್ವಾರದ ಖಾನ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಶರ್ಮಾ ಅವರ ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತರು.

ಆ ಸಮಯದಲ್ಲಿ ಶಮಿ ಪ್ರಾಣ ಕಳೆದುಕೊಳ್ಳುತ್ತಿದ್ದರು - ಸುರೇಶ್ ರೈನಾ: ಈಟಿವಿ ಭಾರತ್ ಜೊತೆ ಮಾತನಾಡಿದ ಸುರೇಶ್ ರೈನಾ, ಶಮಿ ಇಂದು ವಿಶ್ವಕಪ್‌ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿದ್ದರೆ. ಖಿನ್ನತೆಗೆ ಒಳಗಾಗದಿದ್ದವರೇ ಇಂದು ತಂಡಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ಜೀವ ಕಳೆದುಕೊಳ್ಳುವ ಚಿಂತನೆ ಮಾಡಿದ್ದರು. ಮೊಹಮ್ಮದ್ ಶಮಿ ಅವರು ತಮ್ಮ ಆಟಕ್ಕೆ ಹೇಗೆ ಹೋರಾಡುತ್ತಿದ್ದಾರೆ ಎಂದು ನಾನು ಆ ಸಮಯದಲ್ಲಿ ನೋಡಿದ್ದೇನೆ. ಆದರೆ, ಅವರ ಮಾನಸಿಕ ಸಮತೋಲನವೂ ಸರಿಯಾಗಿಲ್ಲ. ನಾನು ತಂಡಕ್ಕಾಗಿ ಏನಾದರೂ ಉತ್ತಮವಾಗಿ ಮಾಡಬೇಕು ಎಂಬ ಒಂದೇ ಒಂದು ಭರವಸೆ ಅವರಲ್ಲಿತ್ತು ಎಂದು ಸುರೇಶ್​ ರೈನಾ ಹೇಳಿದ್ದಾರೆ.

ಶಮಿ ಕಾನೂನು ಹೋರಾಟ: 2018ರಲ್ಲಿ ಈ ಘಟನೆ ನಡೆಯಿತು. ಶಮಿ ತುಂಬಾ ನೊಂದುಕೊಂಡಿದ್ದಾರೆ ಎಂದು ಪರಿಚಿತರೊಬ್ಬರು ಹೇಳಿದಾಗ. ನಾನು ಮೊದಲ ಬಾರಿಗೆ ಫೋನ್‌ನಲ್ಲಿ ಮಾತನಾಡಿದೆ. ಮರುದಿನವೇ ಭೇಟಿಯಾದೆವು. ನನಗೆ ಕ್ರೀಡಾ ಜಗತ್ತಿನ ಅನೇಕ ಸ್ನೇಹಿತರಿದ್ದಾರೆ ಎಂಬುದು ಶಮಿಗೆ ಗೊತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ ನಾನು ಅವರನ್ನು ಬೆಂಬಲಿಸಿದೆ. ಆ ವೇಳೆ, ಪೊಲೀಸರಿಗೆ ಸಿಕ್ಕಿಬೀಳಬಹುದು ಎಂಬ ಭಯ ಕಾಡುತ್ತಿತ್ತು. ನಂತರ ಅವರು ಒಂದು ತಿಂಗಳು ನನ್ನ ಮನೆಯಲ್ಲಿಯೇ ಇದ್ದರು. ಮಾಧ್ಯಮಗಳು ಶಮಿಯನ್ನು ಗುರಿಯಾಗಿಸಿ ಋಣಾತ್ಮಕ ಸುದ್ದಿಗಳನ್ನು ಬಿತ್ತರಿಸುತ್ತಿದ್ದವು ಎಂದು ಉಮೇಶ್​ ಹೇಳಿದ್ದಾರೆ.

ಆ ಒಂದು ತಿಂಗಳಲ್ಲಿ ಒಂದೇ ಮನೆಯಿಂದ ಎಲ್ಲ ರೀತಿಯ ಹೋರಾಟ ಮಾಡಿದೆವು. ಅವರ ಪತ್ನಿ ಮಾಡಿರುವ ಆರೋಪ ಮತ್ತು ನ್ಯಾಯಾಲಯದ ಪ್ರಕರಣಗಳ ವಿರುದ್ಧ ನಾನು ಮೊಹಮ್ಮದ್ ಶಮಿ ಜೊತೆನಿಂತು ಹೋರಾಡಿದೆ. 2023ರ ಸೆಪ್ಟೆಂಬರ್ 19 ರಂದು ಜಾಮೀನು ಪಡೆದರು. ಸೆಪ್ಟೆಂಬರ್ 22 ರಂದು ಅವರು ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ 5 ವಿಕೆಟ್ ಪಡೆದರು.

ಪುಸ್ತಕದಲ್ಲಿವೆ ಹಲವು ರಹಸ್ಯ: ಶಮಿ ತುಂಬಾ ಅದ್ಭುತ ವ್ಯಕ್ತಿ. ಅವರ ಕುರಿತ ಪುಸ್ತಕ ಶೀಘ್ರದಲ್ಲೇ ಬರಲಿದೆ. ಈ ಪುಸ್ತಕವು ಅವರ ಜೀವನದ ಅನೇಕ ರಹಸ್ಯಗಳನ್ನು ಮತ್ತು ಅಂಶಗಳನ್ನು ಬಹಿರಂಗಪಡಿಸುತ್ತದೆ. '30 ಡೇಸ್ ವಿತ್ ಶಮಿ' ಎಂಬ ಪುಸ್ತಕದಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಆತನ ಮೇಲೆ ಆರೋಪ ಹೊರಿಸಿದ್ದು ಹೇಗೆ, ಜೀವನದಲ್ಲಿ ಅವರನ್ನು ಸೋಲಿಸಲು ಅವರ ಕುಟುಂಬ ಮತ್ತು ಮಗಳ ಪಾತ್ರ ಎಲ್ಲವೂ ಆ ಪುಸ್ತಕದಲ್ಲಿ ಇರುತ್ತದೆ ಎಂದು ಉಮೇಶ್​ ತಿಳಿಸಿದ್ದಾರೆ.

ಉಮೇಶ್ ಶರ್ಮಾ ಪ್ರಕಾರ, ಇದೀಗ ಶಮಿ ತಮ್ಮ ಆಟದ ಮೇಲೆ ಕೇಂದ್ರೀಕರಿಸಿದ್ದಾರೆ. ಫೈನಲ್‌ನಲ್ಲಿಯೂ ಅಮೋಘ ಆಟವಾಡುವ ಮೂಲಕ ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ನಿರೀಕ್ಷೆಯಿದೆ. ಉಮೇಶ್ ಶರ್ಮಾ ಮತ್ತು ಶಮಿ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಇದನ್ನೂ ಓದಿ: ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಅಂಪೈರ್​ಗಳು ಯಾರೆಂದು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.