ETV Bharat / sports

ಮಹಿಳಾ ಏಕದಿನ ಕ್ರಿಕೆಟ್‌ಗೆ ಮಿಥಾಲಿ 'ರಾಣಿ': ಐಸಿಸಿ ಶ್ರೇಯಾಂಕದಲ್ಲಿ 8ನೇ ಬಾರಿಗೆ ಅಗ್ರಸ್ಥಾನ

author img

By

Published : Jul 6, 2021, 3:52 PM IST

Updated : Jul 6, 2021, 4:05 PM IST

ಟೀಂ ಇಂಡಿಯಾ ಮಹಿಳಾ ತಂಡದ ಕ್ಯಾಪ್ಟನ್​ ಮಿಥಾಲಿ ರಾಜ್​ ಇದೀಗ ಮತ್ತೊಮ್ಮೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್​ 1 ಸ್ಥಾನ ಅಲಂಕರಿಸಿದ್ದಾರೆ.

Mithali Raj
Mithali Raj

ದುಬೈ: ಇಂಗ್ಲೆಂಡ್​ ವಿರುದ್ಧದ ಏಕದಿನ ಕ್ರಿಕೆಟ್​ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಮಹಿಳಾ ತಂಡದ ಕ್ಯಾಪ್ಟನ್​ ಮಿಥಾಲಿ ರಾಜ್​ ಮತ್ತೊಮ್ಮೆ ಐಸಿಸಿ ಮಹಿಳಾ ಏಕದಿನ ರ‍್ಯಾಕಿಂಗ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್​ ಮಹಿಳಾ ತಂಡದ ವಿರುದ್ಧದ ಕ್ರಿಕೆಟ್​ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ಹೊಸದಾಗಿ ಶ್ರೇಯಾಂಕ ಬಿಡುಗಡೆ​ ಮಾಡಿದೆ.

22 ವರ್ಷದ ಕ್ರಿಕೆಟ್​ ಕೆರಿಯರ್​​ನಲ್ಲಿ ಮಿಥಾಲಿ ರಾಜ್​ 8ನೇ ಸಲ ಏಕದಿನ ರ‍್ಯಾಕಿಂಗ್​ನಲ್ಲಿ ಮೊದಲ ಸ್ಥಾನದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಮಿಥಾಲಿ ಪಡೆ 2-1 ಅಂತರದಿಂದ ಸೋಲು ಕಂಡಿತ್ತು. ಆದರೆ ಮಿಥಾಲಿ ಮೂರು ಪಂದ್ಯಗಳಿಂದ 206 ರನ್​ಗಳಿಕೆ ಮಾಡಿದ್ದಾರೆ. ಜೊತೆಗೆ ಫೈನಲ್​ ಪಂದ್ಯದಲ್ಲಿ ಅಜೇಯ 75 ರನ್​ಗಳಿಕೆ ಮಾಡಿ ತಂಡದ ಗೆಲುವಿನ ರೂವಾರಿಯಾಗಿದ್ದರು.

ಇದನ್ನೂ ಓದಿರಿ: ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಮಿಥಾಲಿ ರಾಜ್​

ಉಳಿದಂತೆ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 49 ಸ್ಥಾನ ಏರಿಕೆ ಕಾಣುವ ಮೂಲಕ ಸದ್ಯ 71ನೇ ಸ್ಥಾನದಲ್ಲಿದ್ದಾರೆ. ಬೌಲರ್​ ಜೂಲನ್​ ಗೋಸ್ವಾಮಿ 53ನೇ ಸ್ಥಾನ ಅಲಂಕರಿಸಿದ್ದಾರೆ. ಆಲ್​ರೌಂಡರ್ ದೀಪ್ತಿ ಶರ್ಮಾ 12ನೇ ಸ್ಥಾನ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈಗಾಗಲೇ ದಾಖಲೆ ನಿರ್ಮಾಣ ಮಾಡಿರುವ ಮಿಥಾಲಿ ರಾಜ್​​ ಮಹಿಳಾ ಕ್ರಿಕೆಟ್​ನಲ್ಲಿ 10 ಸಾವಿರ ಮೈಲುಗಲ್ಲು ತಲುಪಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. 38 ವರ್ಷದ ಬ್ಯಾಟರ್ ಮೂರು ಮಾದರಿಯ ಕ್ರಿಕೆಟ್​ನಿಂದ 10,277 ರನ್​ಗಳಿಸಿದ್ದಾರೆ.

Last Updated : Jul 6, 2021, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.