ಕ್ರೈಸ್ಟ್‌ಚರ್ಚ್(ನ್ಯೂಜಿಲೆಂಡ್): ಮಹಿಳಾ ವಿಶ್ವಕಪ್‌ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಹಿರಿಯ ಭಾರತೀಯ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಿಥಾಲಿ ರಾಜ್ ಪಾತ್ರರಾದರು. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಮಿಥಾಲಿ ರಾಜ್ 2000ರಲ್ಲಿ ಇದೇ ದ.ಆಫ್ರಿಕಾ ವಿರುದ್ಧವೇ ಏಕದಿನ ವಿಶ್ವಕಪ್‌ನಲ್ಲಿ ಅರ್ಧಶತಕ ಗಳಿಸಿದ ಕಿರಿಯ ಭಾರತೀಯ ಕ್ರಿಕೆಟ್ ಆಟಗಾರ್ತಿ ಎನಿಸಿಕೊಂಡಿದ್ದರು ಅನ್ನೋದು ವಿಶೇಷ!.
ಈಗ ಅರ್ಧಶತಕ ಬಾರಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ. ಎರಡೂ ದಾಖಲೆಗಳನ್ನು ಮಿಥಾಲಿ ಹೊಂದಿರುವುದು ಕಾಕತಾಳೀಯವಾಗಿದೆ. ಇಂದಿನ ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾರತೀಯ ವನಿತೆಯರು 7 ವಿಕೆಟ್ ನಷ್ಟದೊಂದಿಗೆ ಪ್ರತಿಸ್ಪರ್ಧಿ ತಂಡಕ್ಕೆ 274 ರನ್ ಗುರಿ ನೀಡಿದ್ದಾರೆ.
ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಮಿಥಾಲಿ ರಾಜ್ ಅರ್ಧ ಶತಕಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ರನ್ ಗುರಿ ಬೆನ್ನಟ್ಟಿದ್ದು, ಸದ್ಯಕ್ಕೆ 3 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದೆ. ಲೌರಾ ವೊಲ್ವಾಡ್ತ್ 80 ರನ್ ಗಳಿಸಿದ್ದಾರೆ.
ಇದನ್ನೂ ಓದಿ: IPL ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಕೆಟಿಗರ ಪಟ್ಟಿ..