ಮುಂಬೈ: ಮಹಿಳಾ ಕ್ರಿಕೆಟ್ನಲ್ಲಿ ಹತ್ತಾರು ದಾಖಲೆಗಳನ್ನು ನಿರ್ಮಿಸಿರುವ ಭಾರತೀಯ ಮಹಿಳಾ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 'ನಿಮ್ಮ ಆಶೀರ್ವಾದದೊಂದಿಗೆ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದೇನೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಬಿಸಿಸಿಐ, ಜಯ್ ಶಾ, ಅಭಿಮಾನಿಗಳು ಸೇರಿದಂತೆ ಎಲ್ಲ ತರಬೇತಿ ಸಿಬ್ಬಂದಿಗೂ ಧನ್ಯವಾದ ಹೇಳಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ನ ದಿಗ್ಗಜ ಪ್ರತಿಭೆ ಎಂದೇ ಗುರುತಿಸಿಕೊಂಡಿದ್ದ ಮಿಥಾಲಿ ರಾಜ್ ಟೀಂ ಇಂಡಿಯಾ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು 699 ರನ್ಗಳಿಸಿದ್ದಾರೆ. 232 ಏಕದಿನ ಪಂದ್ಯಗಳಿಂದ 7,805 ರನ್. ಹಾಗು 89 ಟಿ20 ಪಂದ್ಯಗಳಲ್ಲಿ 2,364ರನ್ ಕಲೆ ಹಾಕಿದ್ದಾರೆ.
39 ವರ್ಷದ ಮಿಥಾಲಿ, 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 23 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. 16 ವರ್ಷದವರಾಗಿದ್ದಾಗಲೇ ಭಾರತ ತಂಡದ ಪರ ಡೆಬ್ಯು ಮಾಡಿದ್ದರು. ನಿನ್ನೆಯಷ್ಟೇ ಬಿಡುಗಡೆಯಾದ ಮಹಿಳಾ ಕ್ರಿಕೆಟ್ ಶ್ರೇಯಾಂಕದಲ್ಲಿ ಮಿಥಾಲಿ 7ನೇ ಸ್ಥಾನ ಕಾಯ್ದುಕೊಂಡಿದ್ದರು.
-
Thank you for all your love & support over the years!
— Mithali Raj (@M_Raj03) June 8, 2022 " class="align-text-top noRightClick twitterSection" data="
I look forward to my 2nd innings with your blessing and support. pic.twitter.com/OkPUICcU4u
">Thank you for all your love & support over the years!
— Mithali Raj (@M_Raj03) June 8, 2022
I look forward to my 2nd innings with your blessing and support. pic.twitter.com/OkPUICcU4uThank you for all your love & support over the years!
— Mithali Raj (@M_Raj03) June 8, 2022
I look forward to my 2nd innings with your blessing and support. pic.twitter.com/OkPUICcU4u
'ಕ್ರಿಕೆಟ್ ವೃತ್ತಿಜೀವನದಿಂದ ನಿವೃತ್ತಿಯಾಗಲು ಇದು ಸಕಾಲವೆಂದು ಅನ್ನಿಸುತ್ತಿದೆ. ನಮ್ಮ ತಂಡ ಪ್ರತಿಭಾನ್ವಿತ ಆಟಗಾರ್ತಿಯರನ್ನು ಒಳಗೊಂಡಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿದೆ' ಎಂದು ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದ ನೀಲಿ ಜೆರ್ಸಿಯಲ್ಲಿ ದೇಶವನ್ನ ಪ್ರತಿನಿಧಿಸಿರುವುದು ಅತಿದೊಡ್ಡ ಗೌರವ. ನನ್ನ ಪಯಣದ ತುಂಬ ಏಳು-ಬೀಳು ಕಂಡಿದ್ದೇನೆ. ಪ್ರತಿವೊಂದು ಪಂದ್ಯ ಹೊಸ ಹೊಸದನ್ನ ಕಲಿಸಿದೆ. 23 ವರ್ಷಗಳ ವೃತ್ತಿ ಜೀವನ ಸವಾಲು ಹಾಗೂ ಸಂಭ್ರಮದಿಂದ ಕೂಡಿತ್ತು ಎಂದು ಹೇಳಿದ್ದಾರೆ.
2005 ರಿಂದ 2017ರವರೆಗೆ ಟೀಂ ಇಂಡಿಯಾ ಮುನ್ನಡೆಸಿರುವ ಮಿಥಾಲಿ ರಾಜ್, 1999ರಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಈ ವರ್ಷ ಮಾರ್ಚ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಮಿಥಾಲಿ 68ರನ್ಗಳಿಕೆ ಮಾಡಿದ್ದರು. ಇದು ಅವರ ಕೊನೆಯ ಪಂದ್ಯವಾಗಿತ್ತು.ಕಳೆದ ಕೆಲ ತಿಂಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಮಿಥಾಲಿ ರಾಜ್ ನಿವೃತ್ತಿ ಘೋಷಣೆ ಮಾಡಲಿದ್ದಾರೆಂಬ ಮಾತು ದಟ್ಟವಾಗಿ ಕೇಳಿ ಬಂದಿತ್ತು. ಆದರೆ, ಅವರು ಇಂದು ಈ ನಿರ್ಧಾರ ಕೈಗೊಂಡಿದ್ದಾರೆ.