ETV Bharat / sports

ಸ್ಟಾರ್ಕ್​ ಮಾರಕ ದಾಳಿ: 133 ರನ್​ಗಳ ಅಂತರದಿಂದ ವಿಂಡೀಸ್ ಮಣಿಸಿದ ಆಸ್ಟ್ರೇಲಿಯಾ - Kensington Oval

253ರನ್​ಗಳ ಗುರಿ ಬೆನ್ನತ್ತಿದ ವಿಂಡೀಸ್ 123ಕ್ಕೆ ಆಲೌಟ್ ಆಗಿ 133ರನ್​ಗಳ ಸೋಲು ಕಂಡಿತು. ಮಿಚೆಲ್ ಸ್ಟಾರ್ಕ್​ 48ಕ್ಕೆ 5, ಜೋಶ್ ಹೆಜಲ್​ವುಡ್​ 11ಕ್ಕೆ3, ಆ್ಯಡಂ ಜಂಪಾ 39ಕ್ಕೆ1 ಮಿಚೆಲ್ ಮಾರ್ಷ್​ 7ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

West Indies vs Australia 1st ODI
ಮಿಚೆಲ್ ಸ್ಟಾರ್ಕ್​
author img

By

Published : Jul 21, 2021, 5:55 PM IST

ಬಾರ್ಬಡೋಸ್: ಮಿಚೆಲ್ ಸ್ಟಾರ್ಕ್​ ಮತ್ತು ಜೋಶ್ ಹೆಜಲ್​ವುಡ್​ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಅತಿಥೇಯ ವಿಂಡೀಸ್​ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 133 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಆ್ಯರೋನ್ ಫಿಂಚ್​ ಅನುಪಸ್ಥಿತಿಯಲ್ಲಿ ವಿಕೆಟ್​ ಕೀಪರ್ ಅಲೆಕ್ಸ್ ಕ್ಯಾರಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದ ನೇತೃತ್ವ ವಹಿಸಿಕೊಂಡಿದ್ದರು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್​ ತಂಡ ನಿಗದಿತ ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 252 ರನ್ ​ಗಳಿಸಿತ್ತು. ಪದಾರ್ಪಣೆ ಆಟಗಾರ ಪಿಲಿಪ್ಪೆ 39, ಬೆನ್​ ಮೆಕ್​ಡರ್ಮೊಟ್​ 28, ಅಲೆಕ್ಸ್ ಕ್ಯಾರಿ 67 ಆಶ್ಟನ್ ಟರ್ನರ್​ 49 ರನ್ ​ಗಳಿಸಿದ್ದರು.

ವಿಂಡೀಸ್ ಪರ ಹೇಡನ್ ವಾಲ್ಶ್​ 39ಕ್ಕೆ 5, ಅಲ್ಜಾರಿ ಜೋಸೆಫ್ 40ಕ್ಕೆ 2, ಅಕೀಲ್ ಹುಸೇನ್ 50ಕ್ಕೆ 2 ವಿಕೆಟ್ ಪಡೆದಿದ್ದರು.

253 ರನ್​ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಸ್ಟಾರ್ಕ್ ಮತ್ತು ಹೆಜಲ್​ವುಡ್ ದಾಳಿಗೆ ತತ್ತರಿಸಿ 26.2 ಓವರ್​ಗಳಲ್ಲಿ ಕೇವಲ 123 ರನ್​ಗಳಿಗೆ ಆಲೌಟ್ ಆಗುವ ಮೂಲಕ 133ರನ್​ಗಳ ಸೋಲು ಕಂಡಿತು.

ಚೇಸಿಂಗ್ ಆರಂಭಿಸಿದ ವೆಸ್ಟ್​ ಇಂಡೀಸ್​ 26 ರನ್​ಗಳಾಗುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಎವಿನ್ ಲೂಯಿಸ್​(0), ಹೆಟ್ಮಾಯಿರ್(11), ಜೇಸನ್ ಮೊಹಮ್ಮದ್ (2), ಡರೇನ್ ಬ್ರಾವೋ(2), ನಿಕೋಲಸ್ ಪೂರನ್(0), ಜೇಸನ್ ಹೋಲ್ಡರ್(0) ನಿರಾಶದಾಯಕ ಪ್ರದರ್ಶನ ತೋರಿದರು.

50 ರನ್​ ದಾಟುವುದು ಅನುಮಾನ ಎನ್ನುವ ಸ್ಥಿತಿಯಲ್ಲಿದ್ದ ವಿಂಡೀಸ್ ತಂಡಕ್ಕೆ ನಾಯಕ ಕೀರನ್​ ಪೊಲಾರ್ಡ್​ 57 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 56 ರನ್​ ಗಳಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಇವರನ್ನು ಹೊರತುಪಡಿಸಿದರೆ ಹೇಡನ್ ವಾಲ್ಶ್​ ಮಾತ್ರ 20 ರನ್​ ಗಳಿಸಿ ತಂಡದ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್​ 48ಕ್ಕೆ 5, ಜೋಶ್ ಹೆಜಲ್​ವುಡ್​ 11ಕ್ಕೆ3, ಆ್ಯಡಂ ಜಂಪಾ 39ಕ್ಕೆ1 ಮಿಚೆಲ್ ಮಾರ್ಷ್​ 7ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನು ಓದಿ: ದೀಪಕ್ ಚಾಹರ್ ಭರ್ಜರಿ ಬ್ಯಾಟಿಂಗ್: ಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.