ಮುಂಬೈ: ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಎಲ್ಲರ ಮನಗೆದ್ದಿರುವ ಮಿನಿ ಎಬಿಡಿ ಖ್ಯಾತಿಯ ಬ್ಯಾಟರ್ ಡೆವಾಲ್ಡ್ ಬ್ರೇವಿಸ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಇದೀಗ ಐಪಿಎಲ್ನಲ್ಲಿ ಮಿಂಚು ಹರಿಸಲು ಸಖತ್ ಆಗಿ ತಯಾರಿ ನಡೆಸಿರುವ ಅವರು, ನೆಟ್ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದಾರೆ.
-
Now that was a complete package of some clean hits & tidy footwork 😌💥
— Mumbai Indians (@mipaltan) March 22, 2022 " class="align-text-top noRightClick twitterSection" data="
Dewald has his first net session in Blue & Gold 👌💙#OneFamily #MumbaiIndians MI TV pic.twitter.com/2Tek9TtHVR
">Now that was a complete package of some clean hits & tidy footwork 😌💥
— Mumbai Indians (@mipaltan) March 22, 2022
Dewald has his first net session in Blue & Gold 👌💙#OneFamily #MumbaiIndians MI TV pic.twitter.com/2Tek9TtHVRNow that was a complete package of some clean hits & tidy footwork 😌💥
— Mumbai Indians (@mipaltan) March 22, 2022
Dewald has his first net session in Blue & Gold 👌💙#OneFamily #MumbaiIndians MI TV pic.twitter.com/2Tek9TtHVR
ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ದಿಗ್ಗಜ ಎಬಿಡಿ ವಿಲಿಯರ್ಸ್ರಂತೆ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ ಯುವ ಬ್ಯಾಟರ್ ಡೆವಾಲ್ಡ್ ಬ್ರೇವಿಸ್ಗೆ ಮುಂಬೈ ಫ್ರಾಂಚೈಸಿ 3 ಕೋಟಿ ರೂ. ನೀಡಿ ಖರೀದಿ ಮಾಡಿದ್ದು, ಇದೀಗ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಬ್ಯಾಟಿಂಗ್ ವೇಳೆ ಎಬಿಡಿ ರೀತಿಯಲ್ಲೇ ಬ್ಯಾಟ್ ಬೀಸಿರುವ ಡೆಲಾಲ್ಡ್ ಬ್ರೆವಿಸ್, ಯಾರ್ಕರ್ ಕಿಂಗ್ ಜಸ್ಪ್ರಿತ್ ಬುಮ್ರಾ ಸೇರಿದಂತೆ ಅನೇಕರ ಎಸೆತಗಳನ್ನ ಸುಲಭವಾಗಿ ಎದುರಿಸಿದರು.
ಇದನ್ನೂ ಓದಿ: ಮಿನಿ ಎಬಿಡಿಗೆ ಬಂಪರ್ ಲಾಟರಿ.. ಮುಂಬೈ ಇಂಡಿಯನ್ಸ್ ಪಾಲಾದ ಡೇವಾಲ್ಡ್ ಬ್ರೇವಿಸ್..
ಅಂಡರ್-19 ವಿಶ್ವಕಪ್ನಲ್ಲಿ ಎಲ್ಲರನ್ನೂ ನಿಬ್ಬೆರಗಾಗಿಸುವಂತಹ ಪ್ರದರ್ಶನ ನೀಡಿರುವ ಬ್ರೇವಿಸ್ ಮುಂಬೈ ಇಂಡಿಯನ್ಸ್ ನೆಟ್ ಸೆಷನ್ನಲ್ಲಿ ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದು, ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಬಗ್ಗೆ ಕಾಯ್ದು ನೋಡಬೇಕಿದೆ. ಬ್ರೇವಿಸ್ ಅಂಡರ್-19 ವಿಶ್ವಕಪ್ನಲ್ಲಿ 6 ಪಂದ್ಯಗಳಿಂದ 84.33ರ ಸರಾಸರಿ ಮತ್ತು 90.20 ಸ್ಟ್ರೈಕ್ರೇಟ್ನಲ್ಲಿ 506 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಆಗಿದ್ದರು. ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಿದ್ದ ಅವರು 7 ವಿಕೆಟ್ ಕೂಡ ಪಡೆದಿದ್ದರು.
2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26ರಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್ ಅಪ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.