ETV Bharat / sports

'ವಿಶ್ವದ ಕ್ರಿಕೆಟ್ ತಂಡಗಳೇ ಹುಷಾರಾಗಿರಿ'.. ದ್ರಾವಿಡ್​ ಕೋಚ್​​ ನೇಮಕದ ಬೆನ್ನಲ್ಲೇ ಮೈಕಲ್ ವಾನ್ ಎಚ್ಚರಿಕೆ ಟ್ವೀಟ್​ - ಟೀಂ ಇಂಡಿಯಾ ಕೋಚ್​

ಕನ್ನಡಿಗ ರಾಹುಲ್ ದ್ರಾವಿಡ್​ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗುತ್ತಿದ್ದಂತೆ ವಿಶ್ವ ಕ್ರಿಕೆಟ್​​ಗೆ ಮೈಕಲ್​ ವಾನ್​​ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.

Rahul Dravid
Rahul Dravid
author img

By

Published : Oct 16, 2021, 4:12 PM IST

Updated : Oct 16, 2021, 4:26 PM IST

ಹೈದರಾಬಾದ್​: ಟೀಂ ಇಂಡಿಯಾ ಪುರುಷರ ಕ್ರಿಕೆಟ್​​​ ತಂಡದ ಮುಖ್ಯ ಕೋಚ್​​ ಆಗಿ ರಾಹುಲ್​ ದ್ರಾವಿಡ್​​​​ ಆಯ್ಕೆಯಾಗಿದ್ದಾರೆಂಬ ಮಾತು ಕೇಳಿ ಬರಲು ಶುರುಗೊಂಡಿದೆ. ಇದರ ಬೆನ್ನಲ್ಲೇ ಅನೇಕ ಕ್ರಿಕೆಟ್​ ದಿಗ್ಗಜರು ಇದರ ಬಗ್ಗೆ ತಮ್ಮ ತಮ್ಮ ಟ್ವಿಟರ್​​ ಅಕೌಂಟ್​ನಲ್ಲಿ ಬರೆದುಕೊಳ್ಳುತ್ತಿದ್ದಾರೆ.

  • If it’s true Rahul Dravid is to be the next Indian coach I think the rest of the world better beware … !

    — Michael Vaughan (@MichaelVaughan) October 15, 2021 " class="align-text-top noRightClick twitterSection" data=" ">

ಸದ್ಯ ಇದರ ಬಗ್ಗೆ ಇಂಗ್ಲೆಂಡ್​​​ ತಂಡದ ಮಾಜಿ ನಾಯಕ ಮೈಕಲ್​ ವಾನ್​ ಟ್ವಿಟರ್​​ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ, ಭಾರತೀಯ ಕ್ರಿಕೆಟ್ ತಂಡದ ಮುಂದಿನ ಕೋಚ್​​ ಆಗಿ ರಾಹುಲ್​​ ದ್ರಾವಿಡ್​​ ಆಯ್ಕೆ ಖಚಿತವಾದರೆ 'ವಿಶ್ವ ಕ್ರಿಕೆಟ್ ತಂಡಗಳು​​ ಹುಷಾರಾಗಿರಬೇಕು' ಎಂದು ಟ್ವೀಟ್​ ಮಾಡಿದ್ದಾರೆ.

Michael Vaughan
ಮೈಕಲ್​ ವಾನ್​

ಐಸಿಸಿ ಟಿ - 20 ವಿಶ್ವಕಪ್​ ಮುಕ್ತಾಯದೊಂದಿಗೆ ರವಿಶಾಸ್ತ್ರಿ ಕೋಚ್​​​ ಅವಧಿ ಮುಕ್ತಾಯಗೊಳ್ಳಲಿದ್ದು, ಇದಾದ ಬಳಿಕ ತಂಡದ ಕೋಚ್​​ ಆಗಿ ಯಾರು ನೇಮಕಗೊಳ್ಳಲಿದ್ದಾರೆ ಎಂಬ ಕುತೂಹಲ ಉಂಟಾಗಿತ್ತು. ಸದ್ಯ ಉತ್ತರ ಸಿಕ್ಕಿದ್ದು, ಟೀಂ ಇಂಡಿಯಾ ದಿ ವಾಲ್ ಖ್ಯಾತಿಯ ರಾಹುಲ್​​ ದ್ರಾವಿಡ್​ಗೆ ಬಿಸಿಸಿಐ ಮಣೆ ಹಾಕಿದೆ ಎನ್ನಲಾಗಿದೆ.

ಆದರೆ, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ಅಂಡರ್​​-19 ಕೋಚ್​ ಹಾಗೂ ಎನ್​​ಸಿಎ ಅಧ್ಯಕ್ಷರಾಗಿ ಅನುಭವ ಹೊಂದಿರುವ ರಾಹುಲ್​ ದ್ರಾವಿಡ್​, ಶ್ರೀಲಂಕಾದಲ್ಲಿ ಟೀಂ ಇಂಡಿಯಾ ಹಿರಿಯ ತಂಡದ ಕೋಚ್​​ ಆಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿರಿ: ಚಿನ್ನ ತಲಾ ಕಮ್ಮಿಂಗ್‌.. IPL ಚಾಂಪಿಯನ್‌ ಧೋನಿಗೆ ಡಬಲ್ ಸಂಭ್ರಮ.. ಇದಕ್ಕೆ ಕೂಲ್‌ ಮಡದಿಯೇ 'ಸಾಕ್ಷಿ'!

ವಾಸೀಂ ಜಾಫರ್ ಟ್ವೀಟ್​

  • Till yesterday news reports were saying Rahul Dravid was going to stay at the NCA. Yet early morning news broke of him becoming India coach. So what happened around midnight? My best guess is Lord Shardul blew candles on his birthday cake wishing to be coached by Rahul bhai 😊

    — Wasim Jaffer (@WasimJaffer14) October 16, 2021 " class="align-text-top noRightClick twitterSection" data=" ">

ನಿನ್ನೆಯವರೆಗೂ ರಾಹುಲ್​ ದ್ರಾವಿಡ್​​ NCA ಅಧ್ಯಕ್ಷರಾಗಿ ಉಳಿದುಕೊಳ್ಳಲಿದ್ದಾರೆ ಎಂಬ ಸುದ್ದಿ ವರದಿಯಾಗಿದ್ದವು. ಆದರೆ, ಇಂದು ಮುಂಜಾನೆ ಸುದ್ದಿ ಮಾತ್ರ ಅವರು ಭಾರತದ ಕೋಚ್​ ಆಗಿದ್ದಾರೆ ಎನ್ನಲಾಗಿದೆ. ಹಾಗಾದರೆ ಮಧ್ಯರಾತ್ರಿ ಏನಾಯಿತು? ನನ್ನ ಅತ್ಯುತ್ತಮ ಊಹೆಯೆಂದರೆ ಲಾರ್ಡ್​ ಶಾರ್ದೂಲ್​​​ ಅವರ ಹುಟ್ಟುಹಬ್ಬದ ವೇಳೆ ಕೈಯಲ್ಲಿ ಮೇಣದ ಬತ್ತಿ ಹಿಡಿದುಕೊಂಡು ರಾಹುಲ್​ ಭಾಯ್​ ತರಬೇತಿ ನೀಡಲಿ ಎಂದು ಕೇಳಿಕೊಂಡಿರಬೇಕು ಎಂದಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಹುಲ್​ ದ್ರಾವಿಡ್​ 2023ರವರೆಗೆ ಟೀಂ ಇಂಡಿಯಾ ಕೋಚ್​​ ಆಗಿ ಸೇವೆ ಸಲ್ಲಿಸಲಿದ್ದು, ಅದಕ್ಕಾಗಿ 10 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ.

Last Updated : Oct 16, 2021, 4:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.