ETV Bharat / sports

ಯಾವುದೇ ಕಾರಣಕ್ಕೂ ಭಾರತಕ್ಕೆ ಟೆಸ್ಟ್ ಚಾಂಪಿಯನ್​ಶಿಪ್ ಗೆಲ್ಲಲು ಸಾಧ್ಯವಿಲ್ಲ : ವಾನ್ ಭವಿಷ್ಯ!​

ನ್ಯೂಜಿಲೆಂಡ್ ಉತ್ತಮವಾಗಿ ತಯಾರಾಗಲಿದೆ ಎಂದು ನನಗೆ ಸಾಕಷ್ಟು ಸ್ಪಷ್ಟತೆಯಿದೆ. ಅವರು ರೆಡ್​ ಬಾಲ್​ನಲ್ಲಿ ಹೆಚ್ಚು ಕ್ರಿಕೆಟ್ ಆಡಿದ ಹೆಚ್ಚಿನ ಆಟಗಾರರನ್ನು ಹೊಂದಿದ್ದಾರೆ. ವಿಶೇಷವಾಗಿ ಇಂಗ್ಲೆಂಡ್​ನಲ್ಲಿ ಬಳಸುವ ಡ್ಯೂಕ್ ಬಾಲ್ ನ್ಯೂಜಿಲೆಂಡ್​ಗೆ ಹೆಚ್ಚು ನೆರವಾಗಲಿದೆ..

ಟೆಸ್ಟ್​ ಚಾಂಪಿಯನ್​ಶಿಪ್
ಟೆಸ್ಟ್​ ಚಾಂಪಿಯನ್​ಶಿಪ್
author img

By

Published : May 19, 2021, 6:22 PM IST

Updated : May 19, 2021, 8:50 PM IST

ಲಂಡನ್ : ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಇನ್ನು ಒಂದು ತಿಂಗಳು ಬಾಕಿಯಿದೆ. ಭಾರತ ತಂಡ ಜೂನ್​ 18 ರಿಂದ 22ರವರೆಗೆ ಸೌತಾಂಪ್ಟನ್​ನಲ್ಲಿ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಬೇಕಿದೆ.

ಭಾರತದ ಎದುರಾಗಿ ಸದಾ ಹೇಳಿಕೆ ನೀಡುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಇದೀಗ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಗೆಲ್ಲಲಿದೆ ಎಂದು ಅಪಸ್ವರ ನುಡಿದಿದ್ದಾರೆ.

ಈಗಾಗಲೇ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್​ ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ನ್ಯೂಜಿಲ್ಯಾಂಡ್ ಇಂಗ್ಲೆಂಡ್ ತಲುಪಿದೆ. ಜೂನ್ ಎರಡರದಿಂದ ಸರಣಿ ಆರಂಭವಾಗಲಿದೆ.

ಇಂಗ್ಲೆಂಡ್​ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಭಾರತಕ್ಕಿಂತ ನ್ಯೂಜಿಲ್ಯಾಂಡ್​ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಹಾಗೆಯೇ ಮೈಕಲ್ ವಾನ್ ಕೂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ ಭಾರತವನ್ನು ಕಿವೀಸ್ ಪಡೆ ಬಗ್ಗು ಬಡಿಯಲಿದೆ ಎಂದು ಸ್ಪಾರ್ಕ್​ ಸ್ಪೋರ್ಟ್ಸ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಡಬ್ಲ್ಯೂಟಿಸಿ ಫೈನಲ್​ನಲ್ಲಿ ನ್ಯೂಜಿಲೆಂಡ್ ಗೆಲ್ಲಲಿದೆ. ಏಕೆಂದರೆ, ಇಂಗ್ಲೆಂಡ್​ ಕಂಡೀಷನ್ಸ್​, ಡ್ಯೂಕ್‌ ಬಾಲ್, ಭಾರತದ ಬಿಡುವಿಲ್ಲದ ವೇಳಾಪಟ್ಟಿ ಭಾರತಕ್ಕೆ ಹಿನ್ನಡೆಯಾದರೆ, ಕಿವೀಸ್​ಗೆ ಬಲವಾಗಿದೆ. ಅಲ್ಲದೆ ಅವರು ಫೈನಲ್ ಪಂದ್ಯ ಕೇವಲ ಒಂದು ವಾರ ಇರುವಾಗ ಇಂಗ್ಲೆಂಡ್​ಗೆ ಬರಲಿದ್ದಾರೆ.

ಆದರೆ, ನ್ಯೂಜಿಲೆಂಡ್‌ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳಿವೆ. ಜೊತೆಗೆ ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗಾಗಿ ನ್ಯೂಜಿಲೆಂಡ್‌ಗೆ ಅಭ್ಯಾಸ ಪಂದ್ಯ ಎಂದು ನೀವು ಬೇಕಾದರೆ ವಾದಿಸಬಹುದು ಎಂದು ಮೈಕಲ್ ವಾನ್ ಹೇಳಿದ್ದಾರೆ.

"ನ್ಯೂಜಿಲೆಂಡ್ ಉತ್ತಮವಾಗಿ ತಯಾರಾಗಲಿದೆ ಎಂದು ನನಗೆ ಸಾಕಷ್ಟು ಸ್ಪಷ್ಟತೆಯಿದೆ. ಅವರು ರೆಡ್​ ಬಾಲ್​ನಲ್ಲಿ ಹೆಚ್ಚು ಕ್ರಿಕೆಟ್ ಆಡಿದ ಹೆಚ್ಚಿನ ಆಟಗಾರರನ್ನು ಹೊಂದಿದ್ದಾರೆ. ವಿಶೇಷವಾಗಿ ಇಂಗ್ಲೆಂಡ್​ನಲ್ಲಿ ಬಳಸುವ ಡ್ಯೂಕ್ ಬಾಲ್ ನ್ಯೂಜಿಲೆಂಡ್​ಗೆ ಹೆಚ್ಚು ನೆರವಾಗಲಿದೆ" ಎಂದು ಆಂಗ್ಲರ ಮಾಜಿ ನಾಯಕ ತಿಳಿಸಿದ್ದಾರೆ.

ಇದನ್ನು ಓದಿ:ಕೊಹ್ಲಿ ಪರ ಮಾತನಾಡಿದ ಪಾಕ್​ ಕ್ರಿಕೆಟರ್​ಗೆ ಫಿಕ್ಸರ್ ಎಂದು ಹೀಯಾಳಿಸಿದ ಮೈಕಲ್ ವಾನ್​

Last Updated : May 19, 2021, 8:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.