ಮುಂಬೈ : ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಅರಬ್ ನಾಡು ದುಬೈನಲ್ಲಿ ಇದಕ್ಕೆ ಅದ್ದೂರಿಯಾಗಿ ಚಾಲನೆ ಸಿಗಲಿದೆ. ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಟೀಂ ಇಂಡಿಯಾ ಅಭಿಯಾನ ಆರಂಭಿಸಲಿದೆ.
ಟಿ-20 ವಿಶ್ವಕಪ್ನಲ್ಲಿ ಭಾಗಿಯಾಗುತ್ತಿರುವ ಟೀಂ ಇಂಡಿಯಾ ಹೊಸ ಜರ್ಸಿ ಹಾಕಿಕೊಂಡು ಮೈದಾನಕ್ಕಿಳಿಯಲಿದೆ. ಅದರ ಅನಾವರಣ ಅಕ್ಟೋಬರ್ 13ರಂದು ನಡೆಯಲಿದೆ. ಭಾರತೀಯ ಕ್ರಿಕೆಟ್ ಮಂಡಳಿ ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
-
The moment we've all been waiting for!
— BCCI (@BCCI) October 8, 2021 " class="align-text-top noRightClick twitterSection" data="
Join us for the big reveal on 13th October only on @mpl_sport. 🇮🇳
Are you excited? 🥳 pic.twitter.com/j4jqXHvnQU
">The moment we've all been waiting for!
— BCCI (@BCCI) October 8, 2021
Join us for the big reveal on 13th October only on @mpl_sport. 🇮🇳
Are you excited? 🥳 pic.twitter.com/j4jqXHvnQUThe moment we've all been waiting for!
— BCCI (@BCCI) October 8, 2021
Join us for the big reveal on 13th October only on @mpl_sport. 🇮🇳
Are you excited? 🥳 pic.twitter.com/j4jqXHvnQU
ಇದನ್ನೂ ಓದಿರಿ: IPL 2021: ಡೆಲ್ಲಿ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್ಸಿಬಿ
ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ! ಅಕ್ಟೋಬರ್ 13ರಂದು ನಮ್ಮೊಂದಿಗೆ ಸೇರಿ. ಈ ಕ್ಷಣಕ್ಕಾಗಿ ನೀವು ಉತ್ಸುಕರಾಗಿದ್ದೀರಾ? ಎಂದು ಟ್ವೀಟ್ ಮಾಡಿದೆ. ಈಗಾಗಲೇ ಟೀಂ ಇಂಡಿಯಾ ಹೊಂದಿರುವ ಜರ್ಸಿಯಲ್ಲಿ ಕೆಲ ಬದಲಾವಣೆಗಳೊಂದಿಗೆ ಈ ನೂತನ ಜರ್ಸಿ ಅನಾವರಣಗೊಳ್ಳಲಿದೆ. ನೀಲಿ, ಹಸಿರು, ಬಿಳಿ ಮತ್ತು ಕೆಂಪು ಪಟ್ಟಿ ಹೊಂದಿದೆ.
ಕೈಗೆಟ್ಟುಕುವ ದರದಲ್ಲಿ ಟೀಂ ಇಂಡಿಯಾ ಜರ್ಸಿ : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದ ಜರ್ಸಿ ಅಭಿಮಾನಿಗಳಿಗೆ ಲಭ್ಯವಾಗಲಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹೊಸ ಜರ್ಸಿ ಜತೆಗೆ ಕ್ರೀಡಾಭಿಮಾನಿಗಳ ಪ್ರೀತಿ ಗಳಿಸಲು ನಾವು ವೈವಿಧ್ಯಮಯ ಹೊಸ ವಸ್ತು ಸಹ ಆರಂಭ ಮಾಡುತ್ತೇವೆ ಎಂದು ಎಂಪಿಎಲ್ ಸ್ಪೋರ್ಟ್ಸ್ ಮುಖ್ಯಸ್ಥ ಶೋಭಿತ್ ಗುಪ್ತಾ ತಿಳಿಸಿದ್ದಾರೆ.
ಅಕ್ಟೋಬರ್ 18ರಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಆಡಲಿದೆ. ಈ ಜರ್ಸಿ ಹಾಕಿಕೊಂಡು ಮೈದಾನಕ್ಕಿಳಿಯಲಿದೆ. ಬರುವ ಶುಕ್ರವಾರದಿಂದ ಹೊಸ ಜರ್ಸಿ ಖರೀದಿ ಮಾಡಲು ಬುಕ್ಕಿಂಗ್ ಆರಂಭಗೊಳ್ಳಲಿದೆ. ಅಭಿಮಾನಿಗಳು ಇಲ್ಲಿ ಜರ್ಸಿ ಖರೀದಿ ಮಾಡಬಹುದಾಗಿದೆ.