ETV Bharat / sports

ಮ್ಯಾಕ್ಸ್​ವೆಲ್​ ಅಬ್ಬರ.. ಪಂಜಾಬ್​ ಕಿಂಗ್ಸ್​ಗೆ 165 ರನ್​ಗಳ ಕಠಿಣ ಗುರಿ ನೀಡಿದ ಆರ್​ಸಿಬಿ.. - glenn maxwell fifty

73 ರನ್​ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರ್​ಸಿಬಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಗಿತ್ತು. ಆದರೆ, ​ಬೌಲಿಂಗ್​ ಸ್ನೇಹಿ ಪಿಚ್​ನಲ್ಲೂ ಅಬ್ಬರಿಸಿದ ಮ್ಯಾಕ್ಸ್​ವೆಲ್ 33 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 57 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು..

RCB post 164/7 against Punjab kings
ಪಂಜಾಬ್​ ಕಿಂಗ್ಸ್​ಗೆ 165ರನ್​ಗಳ ಕಠಿಣ ಗುರಿ ನೀಡಿದ ಆರ್​ಸಿಬಿ
author img

By

Published : Oct 3, 2021, 5:28 PM IST

ಶಾರ್ಜಾ : ಗ್ಲೇನ್​ ಮ್ಯಾಕ್ಸ್​ವೆಲ್​ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಾರ್ಜಾದಂತಹ ಕಠಿಣ ಪಿಚ್​ನಲ್ಲೂ 165 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್​ಸಿಬಿಗೆ ವಿರಾಟ್​ ಕೊಹ್ಲಿ ಮತ್ತು ದೇವದತ್​ ಪಡಿಕ್ಕಲ್ ಮೊದಲ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು. 24 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್​ ಸೇರಿದಂತೆ 25 ರನ್​ಗಳಿಸಿದರು.

ಇವರು ಆಸೀಸ್​ ಆಲ್​ರೌಂಡರ್ ಹೆನ್ರಿಕ್ಸ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ನಂತರದ ಎಸೆತದಲ್ಲಿ ಬಡ್ತಿ ಪಡೆದು ಬಂದ ಡೇನಿಯಲ್ ಕ್ರಿಶ್ಚಿಯನ್​ ಅದೇ ಓವರ್​ನಲ್ಲಿ ಗೋಲ್ಡನ್​ ಡಕ್​ಗೆ ಬಲಿಯಾದರು. 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್​ ಸೇರಿ 40ರನ್​ಗಳಿಸಿದ್ದ ಪಡಿಕ್ಕಲ್​ ಕೂಡ ಹೆನ್ರಿಕ್ಸ್​ಗೆ ವಿಕೆಟ್​ ಒಪ್ಪಿಸಿದರು.

73 ರನ್​ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರ್​ಸಿಬಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಗಿತ್ತು. ಆದರೆ, ​ಬೌಲಿಂಗ್​ ಸ್ನೇಹಿ ಪಿಚ್​ನಲ್ಲೂ ಅಬ್ಬರಿಸಿದ ಮ್ಯಾಕ್ಸ್​ವೆಲ್ 33 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 57 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.

ಇವರಿಗೆ ಕೊನೆಯಲ್ಲಿ ಸಾಥ್ ನೀಡಿದ ಎಬಿಡಿ ವಿಲಿಯರ್ಸ್ 18 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 1ಬೌಂಡರಿ ಸಹಿತ 23 ರನ್​ಗಳಿಸಿ ಒಳ್ಳೆಯ ಲಯದಲ್ಲಿದ್ದ ವೇಳೆ ಇಲ್ಲದ ರನ್​ ಕದಿಯಲು ಹೋಗಿ ರನ್​ಔಟ್​ ಆದರು.

ಕೊನೆಯ ಓವರ್​ನಲ್ಲಿ ಶಮಿ ಕೇವಲ 8 ರನ್​ ನೀಡಿದ ಮ್ಯಾಕ್ಸ್​ವೆಲ್, ಶಹ್ಬಾಜ್ ಅಹ್ಮದ್​(8) ಮತ್ತು ಗಾರ್ಟನ್​(0) ವಿಕೆಟ್​ ಪಡೆದು ಆರ್​ಸಿಬಿ ಬೃಹತ್ ಮೊತ್ತ ದಾಖಲಿಸದಂತೆ ಕಡಿವಾಣ ಹಾಕಿದರು. ಪಂಜಾಬ್ ಕಿಂಗ್ಸ್ ಪರ ಮೊಹಮ್ಮದ್ ಶಮಿ 39ಕ್ಕೆ 3, ಹೆನ್ರಿಕ್ಸ್​ 12ಕ್ಕೆ 3 ವಿಕೆಟ್​ ಪಡೆದು ಮಿಂಚಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.