ETV Bharat / sports

ಐಪಿಎಲ್​ನಲ್ಲಿನ ನನ್ನ ಯಶಸ್ಸು ಎಬಿಡಿ ಮತ್ತು ಕೊಹ್ಲಿಗೆ ಸಲ್ಲಬೇಕು: ಮ್ಯಾಕ್ಸ್​ವೆಲ್

ವಿರಾಟ್​ ಕೊಹ್ಲಿ ಮತ್ತು ಡಿವಿಲಿಯರ್ಸ್ ಜೊತೆಗೆ ತರಬೇತಿ ನಡೆಸುತ್ತಾ ಸಮಯ ಕಳೆಯುತ್ತಿದ್ದರೆ ನನಗೆ 10 ಅಡಿ ಎತ್ತರದಲ್ಲಿ ಇದ್ದೇನೆ ಎಂಬ ಭಾವನೆ ವ್ಯಕ್ತವಾಗುತ್ತಿತ್ತು ಎಂದು ಆಸೀಸ್​ ಸ್ಟಾರ್ ಆಟಗಾರ​ ಹೇಳಿದ್ದಾರೆ.

ಗ್ಲೇನ್ ಮ್ಯಾಕ್ಸ್​ವೆಲ್ ಆರ್​ಸಿಬಿ
ಗ್ಲೇನ್ ಮ್ಯಾಕ್ಸ್​ವೆಲ್ ಆರ್​ಸಿಬಿ
author img

By

Published : Oct 20, 2021, 5:58 PM IST

ಮೆಲ್ಬೋರ್ನ್​: 2021ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿಗೆ ಅತ್ಯುತ್ತಮ ಕೊಡುಗೆ ನೀಡಿರುವ ಆಸ್ಟ್ರೇಲಿಯಾದ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್ ತಾವು ಫಾರ್ಮ್​ಗೆ ಮರಳಲು ಕಾರಣ ತಂಡದ ಸಹ ಆಟಗಾರರಾದ ಎಬಿ ಡಿ ವಿಲಿಯರ್ಸ್ ಮತ್ತು ನಾಯಕ ವಿರಾಟ್ ಕೊಹ್ಲಿ ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಡಿವಿಲಿಯರ್ಸ್ ಜೊತೆಗೆ ತರಬೇತಿ ನಡೆಸುತ್ತಾ ಸಮಯ ಕಳೆಯುತ್ತಿದ್ದರೆ ನನಗೆ 10 ಅಡಿ ಎತ್ತರದಲ್ಲಿ ಇದ್ದೇನೆ ಎಂಬ ಭಾವನೆ ವ್ಯಕ್ತವಾಗುತ್ತಿತ್ತು ಎಂದು ಆಸೀಸ್​ ಸ್ಟಾರ್ ಆಟಗಾರ​ ಹೇಳಿದ್ದಾರೆ.

ಅಲ್ಲಿ ಪ್ರತಿದಿನವೂ ಹೊಸ ವಿಷಯಗಳನ್ನು ಕಲಿಯುವ ಅನುಭವವಾಗುತ್ತಿತ್ತು. ಪ್ರತಿದಿನವೂ ನಾನು ಏನಾದರೂ ಹೊಸದನ್ನು ಕಂಡುಕೊಳ್ಳುತ್ತಿದ್ದೆ. ನಾನು ವಿರಾಟ್ ಮತ್ತು ಎಬಿ ಜೊತೆಗೆ ಉತ್ತಮವಾಗಿ ಹೊಂದಿಕೊಂಡಿದ್ದೆ. ಈ ಒಂದು ಕಾರಣಕ್ಕೆ ನಾನು ಐಪಿಎಲ್‌ಗೆ ಸದಾ ಕೃತಜ್ಞನಾಗಿರುತ್ತೇನೆ. ಐಪಿಎಲ್​ ಇಬ್ಬರು ವಿಶ್ವಶ್ರೇಷ್ಠ ಕ್ರಿಕೆಟಿಗರಿಂದ ಕಲಿಯಲು ನನಗೆ ಉತ್ತಮ ಅವಕಾಶ ಮಾಡಿಕೊಟ್ಟಿತ್ತು ಎಂದು ಮ್ಯಾಕ್ಸ್​ವೆಲ್ cricket.com.au. ವೆಬ್​ಸೈಟ್​ಗೆ ಹೇಳಿದ್ದಾರೆ.

ಕ್ರಿಕೆಟ್​ ಕಂಡಂತಹ ಇಬ್ಬರು ಅತ್ಯುತ್ತಮ ಬ್ಯಾಟಿಂಗ್ ಶ್ರೇಷ್ಠರು ಇದ್ದ ತಂಡದಲ್ಲಿ ನಾನು ಅವಕಾಶ ಪಡೆದಿದ್ದಕ್ಕೆ ಅತ್ಯಂತ ಅದೃಷ್ಠಶಾಲಿಯಾಗಿದ್ದೆ. ಅವರೊಂದಿಗೆ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಆಟದ ಬಗ್ಗೆ ಮಾತನಾಡಲು ನಾನು ಮುಕ್ತನಾಗಿದ್ದೇನೆ ಎಂದು 33 ವರ್ಷದ ಆಲ್​ರೌಂಡರ್​ ಹೇಳಿಕೊಂಡಿದ್ದಾರೆ.

" ನೀವು ಅಂತಹ ಮಹಾನ್​ ಆಟಗಾರರ ಬೆಂಬಲವನ್ನು ಪಡೆದಾಗ ಅದು ನಿಮಗೆ 10 ಅಡಿ ಎತ್ತರದಲ್ಲಿರುವ ಅನುಭವವನ್ನು ನೀಡುತ್ತದೆ. ಅಲ್ಲದೆ ಅವರು ನಿಮ್ಮ ಆಟವನ್ನು ನೋಡುತ್ತಿದ್ದಾರೆ ಅಥವಾ ನಿಮ್ಮನ್ನು ಆಟದ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಅದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ ಮತ್ತು ಸಂತೋಷವನ್ನು ನೀಡುತ್ತದೆ. ಅದೊಂದು ಆರಾಮದಾಯಕವಾದ ಪರಿಸರವಾಗಿರುತ್ತದೆ " ಎಂದು ಕೊಹ್ಲಿ ಮತ್ತು ಎಬಿಡಿಯೊಂದಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.

2020ರ ಆವೃತ್ತಿಯಲ್ಲಿ ಪಂಜಾಬ್ ತಂಡದಲ್ಲಿ ಭಾರಿ ವೈಫಲ್ಯ ಅನುಭವಿಸಿದ್ದ ಮ್ಯಾಕ್ಸ್​ವೆಲ್ 2021ರನಲ್ಲಿ 42.75ರ ಸರಾಸರಿಯಲ್ಲಿ 144.10 ಸ್ಟ್ರೈಕ್‌ರೇಟ್‌ನಲ್ಲಿ 513 ರನ್‌ಗಳಿಸಿ ಆರ್​ಸಿಬಿಯ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಆರ್​ಸಿಬಿ ಪ್ಲೇ ಆಫ್ ತಲುಪುವಲ್ಲಿ ಇವರ ಪ್ರದರ್ಶನ ಪ್ರಮುಖವಾಗಿತ್ತು.

ಇದನ್ನು ಓದಿ:ಇದು ಸ್ಪಿನ್ನರ್​ಗಳ ವಿಶ್ವಕಪ್​, ನಾವೂ ಚೆನ್ನಾಗಿ ಬ್ಯಾಟ್ ಮಾಡಿ ಯಾವುದೇ ತಂಡವನ್ನಾದ್ರು ಸೋಲಿಸಬಲ್ಲೆವು: ರಶೀದ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.