ETV Bharat / sports

ಕೋವಿಡ್-​ 19 ನಿಭಾಯಿಸುವ ವಿಚಾರ: ಭಾರತವನ್ನು ಟೀಕಿಸಿದ ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಹೇಡನ್ ವಾಗ್ದಾಳಿ

author img

By

Published : May 12, 2021, 7:11 PM IST

Updated : May 12, 2021, 7:28 PM IST

ಕಠಿಣ ಸಂದರ್ಭದಲ್ಲಿ ಭಾರತದ ವಿರುದ್ಧ ಕೆರಳಿದ್ದ ಪಾಶ್ಚಿಮಾತ್ಯ ಮಾಧ್ಯಮಗಳ ಬಗ್ಗೆ ಮಾತನಾಡಿರುವ ಹೇಡನ್, " ತಮ್ಮ ದೃಷ್ಟಿಕೋನದ ಪ್ರಕಾರ, ಸಾವಿರಾರು ಮೈಲಿ ದೂರದಲ್ಲಿ ಕುಳಿತುಕೊಂಡಿರುವವರಿಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ" ಎಂದು ತಿಳಿಸಿದ್ದಾರೆ.

ಮ್ಯಾಥ್ಯೂ ಹೇಡನ್
ಮ್ಯಾಥ್ಯೂ ಹೇಡನ್

ಹೈದರಾಬಾದ್: ಬಯೋ-ಬಬಲ್​ನಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 2021ರ ಐಪಿಎಲ್ ಅನ್ನು ಅರ್ಧಕ್ಕೆ ಅಮಾನತುಗೊಳಿಸಲಾಗಿದೆ. ಇದರಿಂದ ಭಾರತದಲ್ಲಿ ಸಿಲುಕಿಕೊಂಡಿದ್ದ ಲೆಜೆಂಡರಿ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್, ಕೊರೊನಾ ಎರಡನೇ ಅಲೆಯನ್ನು ನಿಭಾಯಿಸುವ ವಿಚಾರವಾಗಿ ಭಾರತ ಮತ್ತು ಇಲ್ಲಿನ ಸರ್ಕಾರವನ್ನು ಟೀಕಿಸಿದ್ದ ಅಂತಾರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಠಿಣ ಸಂದರ್ಭದಲ್ಲಿ ಭಾರತದ ವಿರುದ್ಧ ಕೆರಳಿದ್ದ ಪಾಶ್ಚಿಮಾತ್ಯ ಮಾಧ್ಯಮಗಳ ಬಗ್ಗೆ ಮಾತನಾಡಿರುವ ಹೇಡನ್, " ತಮ್ಮ ದೃಷ್ಟಿಕೋನದ ಪ್ರಕಾರ, ಸಾವಿರಾರು ಮೈಲಿ ದೂರದಲ್ಲಿ ಕುಳಿತುಕೊಂಡಿರುವವರಿಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ" ಎಂದು ತಿಳಿಸಿದ್ದಾರೆ.

ಭಾರತ ಅಪಾಯಕಾರಿ ಕೊರೊನಾ ವೈರಸ್​ ಹರಡುವಿಕೆಯ ವಿರುದ್ಧ ಹೋರಾಡುತ್ತಿದೆ. 140 ಕೋಟಿಗೂ ಹೆಚ್ಚು​ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ, ಈ ಸಂದರ್ಭದಲ್ಲಿ ಯಾವುದೇ ಸಾರ್ಜಜನಿಕ ಯೋಜನೆಯನ್ನು ಅನುಷ್ಠಾನಗೊಳಿಸಲು ಮತ್ತು ಅದರಲ್ಲಿ ಯಶಸ್ಸು ಸಾಧಿಸುವುದು ಸವಾಲಿನ ಕೆಲಸವಾಗಿರುತ್ತದೆ. ಆದರೆ, ವಿಶ್ವ ಮಾಧ್ಯಮಗಳು ಇದನ್ನರಿಯದೇ ಟೀಕಿಸುತ್ತಿವೆ ಎಂದಿದ್ದಾರೆ.

ಭಾರತ ಮತ್ತು ಅಲ್ಲಿನ ಜನರು ಕಠಿಣ ಸಂದರ್ಭದಲ್ಲಿ ಎದುರಿಸುತ್ತಿರುವ ಅಸಂಖ್ಯಾತ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಸಮಯವನ್ನು ಕಳೆಯಲು ಇಷ್ಟಪಡದವರು ಭಾರತದ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ ಎಂದು ಇನ್​​ಸ್ಟಿಟ್ಯೂಟ್ ಫಾರ್​ ಆಸ್ಟ್ರೇಲಿಯಾ ಇಂಡಿಯಾ ಎಂಗೇಜ್ಮೆಂಟ್​ ವೆಬ್​ಸೈಟ್​ಗೆ ಬರೆದ ಅಂಕಣದಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳ ಬಗ್ಗೆ ಕಿಡಿಕಾರಿದ್ದಾರೆ.

ಭಾರತದ ಸಾಂಸ್ಕೃತಿಕ ವೈವಿಧ್ಯತೆ ಅಭಿಮಾನಿಯಾಗಿರುವ ಹೇಡನ್, ಈ ಸಮಯದಲ್ಲಿ ಭಾರತವನ್ನು ಟೀಕಿಸುವ ಮೊದಲು ನೀವು ಅದನ್ನು ಅರ್ಥಮಾಡಿಕೊಳ್ಳಲು ಸಮಯ ಮೀಸಲಿಡುಬೇಕು ಎಂದು ಮಾಧ್ಯಮವನ್ನು ಕೇಳಿಕೊಂಡಿದ್ದಾರೆ. " ಭಾರತವು ಶ್ರೀಮಂತ ನಾಗರಿಕತೆಯಾಗಿದ್ದು, ಇದು ಜಗತ್ತಿನ ಕೆಲವು ಪ್ರತಿರೂಪಗಳನ್ನು ಹೊಂದಿದೆ. ಈ ಸಮಯದಲ್ಲಿ, ನಾವು ಭಾರತದ ಸಾಂಸ್ಕೃತಿಕ, ಪ್ರಾದೇಶಿಕ, ಭಾಷೆ, ಮಾನವ ಅಭಿವೃದ್ಧಿ ಮತ್ತು ಇತರ ಸಂಕೀರ್ಣತೆಗಳ ಬಗ್ಗೆ ಯಾವುದೇ ತೀರ್ಪು ನೀಡುವ ಮೊದಲು ಪ್ರಶಂಸಿಸಬೇಕು ಎಂದು ಹೇಳಿದ್ದಾರೆ.

ಭಾರತವನ್ನು ತನ್ನ ಅಧ್ಯಾತ್ಮಿಕ ನೆಲೆ ಎಂದು ಕರೆದಿರುವ ಹೇಡನ್ ಭಾರತದಂತಹ ವೈವಿಧ್ಯಮಯ ಮತ್ತು ವಿಶಾಲವಾದ ದೇಶವನ್ನು ನಡೆಸಲು ಮುಂದಾಳತ್ವವನ್ನು ವಹಿಸಿಕೊಂಡಿರುವ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಗೌರವವಿದೆ. ಖಂಡಿತಾ ಇಲ್ಲಿನ ಈ ಪರಿಸ್ಥಿತಿಯನ್ನು ಅವರು ಆದಷ್ಟು ಉತ್ತಮ ರೀತಿಯಲ್ಲಿ ನಿಭಾಯಿಸಲಿದ್ದಾರೆ ಎಂದು ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.

Last Updated : May 12, 2021, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.