ಮುಂಬೈ: ಕಿವೀಸ್ ವೇಗಿಯ ಬದಲಿಗೆ ಶ್ರೀಲಂಕಾದ ಯುವ ವೇಗಿ ಮತೀಶ ಪತಿರನ 2022ರ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಮಿಲ್ನೆ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆಡುವ ವೇಳೆ ಹ್ಯಾಮ್ಸ್ಟ್ರಿಂಗ್ಗೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಹಾಗಾಗಿ 2020 ಮತ್ತು 2022ರ ಅಂಡರ್ 19 ವಿಶ್ವಕಪ್ನಲ್ಲಿ ಆಡಿದ್ದ ಶ್ರೀಲಂಕಾದ ಅಂಡರ್ 19 ತಂಡದ ಪತಿರನ ಬದಲಿ ಆಟಗಾರನಾಗಿ ಮೂಲಬೆಲೆ 20 ಲಕ್ಷ ರೂ.ಗೆ ಸಿಎಸ್ಕೆ ಬಳಗ ಸೇರಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಹರಾಜಿನಲ್ಲಿ 14 ಕೋಟಿ ನೀಡಿ ಖರೀದಿಸಿದ್ದ ದೀಪಕ್ ಚಾಹರ್ ಕೂಡ 2022ರ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಆದರೆ ಇದುವರೆಗೆ ಅವರ ಬದಲಿಗೆ ಯಾವುದೇ ಬದಲಿ ಆಟಗಾರನನ್ನು ಸಿಎಸ್ಕೆ ಘೋಷಣೆ ಮಾಡಿಲ್ಲ.
ಬದಲಿ ಆಟಗಾರರಾಗಿ ಫ್ರಾಂಚೈಸಿ ಸೇರಿಕೊಂಡ ಆಟಗಾರರಿವರು:
- ಗುಜರಾತ್ ಟೈಟನ್ಸ್ -ಜೇಸನ್ ರಾಯ್ ಬದಲಿಗೆ ಅಫ್ಘಾನಿಸ್ತಾನ ರಮಾನುಲ್ಲಾ ಗುರ್ಬಜ್ ಸೇರ್ಪಡೆ
- ಕೋಲ್ಕತ್ತಾ ನೈಟ್ ರೈಡರ್ಸ್- ಇಂಗ್ಲೆಂಡ್ ಅಲೆಕ್ಸ್ ಹೇಲ್ಸ್ ಬದಲಿಗೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್
- ಲಖನೌ ಸೂಪರ್ ಜೈಂಟ್ಸ್- ಮಾರ್ಕ್ವುಡ್ ಬದಲಿಗೆ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ
- ರಾಯಲ್ ಚಾಲೆಂಜರ್ಸ್ ಬೆಂಗಳೂರು- ಲುವನೀತ್ ಸಿಸೋಡಿಯಾ ಬದಲಿಗೆ ರಜತ್ ಪಾಟೀದಾರ್
- ಚೆನ್ನೈ ಸೂಪರ್ ಕಿಂಗ್ಸ್-ಆ್ಯಡಂ ಮಿಲ್ನೆ ಬದಲಿಗೆ ಮತೀಶ ಪತಿರನ
ಇದನ್ನೂ ಓದಿ:ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆಲ್ರೌಂಡರ್ ಕೀರನ್ ಪೊಲಾರ್ಡ್