ETV Bharat / sports

ಇಂದು 2020ರ ಐಪಿಎಲ್ ಫೈನಲಿಸ್ಟ್​ಗಳ ನಡುವೆ ಕದನ.. ಗೆದ್ದವರಿಗೆ ಅಗ್ರಪಟ್ಟಕ್ಕೆ ಏರುವ ಅವಕಾಶ - ಡೆಲ್ಲಿ vs ಮುಂಬೈ ಲೈವ್ ಸ್ಕೋರ್​

ಎರಡೂ ತಂಡಗಳಲ್ಲೂ ಆಳವಾದ ಬ್ಯಾಟಿಂಗ್ ಲೈನ್​ಅಪ್​ ಮತ್ತು ವಿಶ್ವದರ್ಜೆ ಬೌಲರ್​ಗಳಿದ್ದಾರೆ. ಆದರೆ, ಕಳೆದ ಆವೃತ್ತಿಯಲ್ಲಿ ಚಾಂಪಿಯನ್​ ಮುಂಬೈ ಡೆಲ್ಲಿ ಎದುರು ಆಡಿದ ಎಲ್ಲ 4 ಪಂದ್ಯಗಳನ್ನು ಗೆದ್ದು 12-12 ಇದ್ದ ಮುಖಾಮುಖಿ ಅಂತರವನ್ನು 16-12ಕ್ಕೇ ಏರಿಸಿಕೊಂಡಿತ್ತು.

ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್​
ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್​
author img

By

Published : Apr 20, 2021, 3:19 PM IST

ಚೆನ್ನೈ: ಕಳೆದ ಆವೃತ್ತಿಯ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಈಗಾಗಲೆ ತಲಾ ಒಂದು ಸೋಲು ಮತ್ತು 2 ಗೆಲುವುಗಳೊಂದಿಗೆ ಆರ್​​ಸಿಬಿ ನಂತರದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿವೆ. ಇಂದು ಎರಡೂ ತಂಡಗಳು ತಮ್ಮ 3ನೇ ಜಯಕ್ಕಾಗಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕಾದಾಡಲಿವೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡ 3ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್​ 4ನೇ ಸ್ಥಾನದಲ್ಲಿದೆ. ಇಂದು ಗೆಲ್ಲುವ ತಂಡ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.

ಎರಡೂ ತಂಡಗಳಲ್ಲೂ ಆಳವಾದ ಬ್ಯಾಟಿಂಗ್ ಲೈನ್​ಅಪ್​ ಮತ್ತು ವಿಶ್ವದರ್ಜೆಯ ಬೌಲರ್​ಗಳಿದ್ದಾರೆ. ಆದರೆ, ಕಳೆದ ಆವೃತ್ತಿಯಲ್ಲಿ ಚಾಂಪಿಯನ್​ ಮುಂಬೈ ಡೆಲ್ಲಿ ಎದುರು ಆಡಿದ ಎಲ್ಲಾ 4 ಪಂದ್ಯಗಳನ್ನು ಗೆದ್ದು 12-12 ಇದ್ದ ಮುಖಾಮುಖಿ ಅಂತರವನ್ನು 16-12ಕ್ಕೇ ಏರಿಸಿಕೊಂಡಿತ್ತು.

ಡೆಲ್ಲಿ ಆಫ್​ ಸ್ಪಿನ್ನರ್​ ಆರ್​ ಅಶ್ವಿನ್​ ಪಂಜಾಬ್​ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದ ರಾಹುಲ್ ಪಡೆಯನ್ನು ನಿಯಂತ್ರಿಸಿದ್ದರು. ಇದೀಗ ಅವರ ತವರೂರಿನಲ್ಲಿ ಪಂದ್ಯಗಳು ನಡೆಯಲಿದ್ದು, ಡೆಲ್ಲಿ ಅಶ್ವಿನ್ ಅವ​ರನ್ನು ಹೆಚ್ಚಾಗಿ ನಂಬಿಕೊಂಡಿದೆ. ಇವರಿಗೆ ಮತ್ತೊಂದು ಬದಿಯಲ್ಲಿ ಲಲಿಯ್ ಯಾದವ್ ಅಥವಾ ಕರ್ನಾಟಕದ ಪ್ರವೀಣ್ ದುಬೆ ಸಾಥ್​ ನೀಡುವ ಸಾಧ್ಯತೆಯಿದೆ.

ಮುಂಬೈ ಕಡೆ ರಾಹುಲ್ ಚಹಾರ್​ ಈ ಆವೃತ್ತಿಯ ಮುಂಚೂಣಿ ಸ್ಪಿನ್ನರ್​ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಅಂಗಳದಲ್ಲಿ ನಡೆದಿರುವ ಕಳೆದ 2 ಪಂದ್ಯಗಳಲ್ಲಿ 7 ವಿಕೆಟ್ ಗೆಲುವಿನ ರೂವಾರಿಯಾಗಿದ್ದಾರೆ. ಇಂದೂ ಕೂಡ ಡೆಲ್ಲಿ ತಂಡಕ್ಕೆ ಇವರನ್ನು ಎದುರಿಸುವುದು ದೊಡ್ಡ ಸವಾಲಾಗಲಿದೆ.

ಸಂಭವನೀಯ ಪಟ್ಟಿ:

ಡೆಲ್ಲಿ ತಂಡ: ಶಿಖರ್ ಧವನ್, ಪೃಥ್ವಿ ಶಾ, ಸ್ಟೀವನ್ ಸ್ಮಿತ್, ರಿಷಭ್ ಪಂತ್, ಮಾರ್ಕಸ್ ಸ್ಟೊಯ್ನಿಸ್, ಲಲಿತ್ ಯಾದವ್, ಕ್ರಿಸ್ ವೋಕ್ಸ್, ಆರ್ ಅಶ್ವಿನ್, ಕಗಿಸೊ ರಬಡಾ, ಅವೇಶ್ ಖಾನ್, ಅಮಿತ್ ಮಿಶ್ರಾ/ಪ್ರವೀಣ್ ದುಬೆ

ಮುಂಬೈ ತಂಡ: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಆಡಮ್ ಮಿಲ್ನೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.