ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಬಳಗಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದೆ, ಆಲ್‌ರೌಂಡರ್ ಮಿಚೆಲ್ ಮಾರ್ಷ್ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ಬುಧವಾರ ತರಬೇತಿಗೆ ಮರಳಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ಬುಧವಾರ ತಿಳಿಸಿದೆ. ಕಳೆದ ವಾರ ಈ ಇಬ್ಬರು ಕ್ರಿಕೆಟಿಗರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರಿಂದ ಕ್ವಾರಂಟೈನ್ ಒಳಗಾಗಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಮಾರ್ಷ್ ಮತ್ತು ಸೀಫರ್ಟ್ ತಮ್ಮ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಆಟಗಾರರೊಂದಿಗೆ ತರಬೇತಿ ನಡೆಸಿದ್ದಾರೆ.
ತರಬೇತಿ ಅವಧಿಯಲ್ಲಿ ಈ ಇಬ್ಬರು ಕ್ರಿಕೆಟಿಗರಿರುವ ಫೋಟೋಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. "ನಮಗೀಗ ಸಮಾಧಾನವೆನಿಸಿದೆ, ನೀವು ತರಬೇತಿಗೆ ಮರಳಿರುವುದು ಸಂತೋಷ ತಂದಿದೆ ಬಾಯ್ಸ್" ಎಂದು ಕ್ಯಾಪಿಟಲ್ಸ್ ಬರೆದುಕೊಂಡಿದೆ.
ಮಾರ್ಷ್ ಅನುಪಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದು ಭರ್ಜರಿ ಜಯ ಸಾಧಿಸಿದ್ದ ಡೆಲ್ಲಿ ತಂಡ, ನಂತರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೃಹತ್ ಮೊತ್ತದ ಪಂದ್ಯದಲ್ಲಿ 15 ರನ್ಗಳ ರೋಚಕ ಸೋಲು ಕಂಡಿತ್ತು. ಪ್ರಸ್ತುತ ಆಡಿರುವ 7 ಪಂದ್ಯಗಳಲ್ಲಿ 4 ಸೋಲು ಮತ್ತು 3 ಗೆಲುವಿನೊಂದಿಗೆ 6 ಅಂಕ ಪಡೆದು 7 ನೇ ಸ್ಥಾನದಲ್ಲಿದೆ.
ಇದನ್ನೂ ಓದಿ:IPL: ಕೋಟಿಗಟ್ಟಲೆ ಹಣ ಪಡೆದು ಕಳಪೆ ಪ್ರದರ್ಶನ ತೋರುತ್ತಿರುವ ಆಟಗಾರರು ಇವರೇ ನೋಡಿ..