ETV Bharat / sports

ಇಂಗ್ಲೆಂಡ್​ ತಂಡ ಮತ್ತಷ್ಟು ಬಲಿಷ್ಠ: 4ನೇ ಟೆಸ್ಟ್​ಗೆ ತಂಡಕ್ಕೆ ಮರಳಿದ ವೋಕ್ಸ್, ಮಾರ್ಕ್​ವುಡ್ - 4ನೇ ಟೆಸ್ಟ್​ಗೆ ಮರಳಿದ ಮಾರ್ಕ್​ವುಡ್​ ಕ್ರಿಸ್ ವೋಕ್ಸ್

ಕ್ರಿಸ್​ ವೋಕ್ಸ್​ ಗಾಯದಿಂದ ಚೇತರಿಸಿಕೊಂಡಿದ್ದು ವಿಟಾಲಿಟಿ ಬ್ಲಾಸ್ಟ್​ನಲ್ಲಿ ಶುಕ್ರವಾರ ಕಣಕ್ಕಿಳಿದಿದ್ದರು. ಇದೀಗ ಚೇತರಿಸಿಕೊಂಡಿರುವುದರಿಂದ ಸರಣಿಯ ಮುಂದಿನ ಪಂದ್ಯಗಳಲ್ಲಿ ತಂಡದ ಭಾಗವಾಗಲಿದ್ದಾರೆ.

Mark Wood, Chris Woakes return to England
4ನೇ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಪ್ರಕಟ
author img

By

Published : Aug 29, 2021, 10:15 PM IST

ನವದೆಹಲಿ: ಗಾಯದ ಕಾರಣ ಮೊದಲ ಮೂರು ಟೆಸ್ಟ್​ಗಳನ್ನು ತಪ್ಪಿಸಿಕೊಂಡಿದ್ದ ಕ್ರಿಸ್ ವೋಕ್ಸ್ ಮತ್ತು ಕಳೆದ ಟೆಸ್ಟ್​ನಿಂದ ಹೊರಗುಳಿದಿದ್ದ ಮಾರ್ಕ್​ವುಡ್​ ಓವಲ್​ನಲ್ಲಿ ನಡೆಯಲಿರುವ ಭಾರತದ ವಿರುದ್ಧದ 4ನೇ ಟೆಸ್ಟ್​ಗೆ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ.

ಕ್ರಿಸ್​ ವೋಕ್ಸ್​ ಗಾಯದಿಂದ ಚೇತರಿಸಿಕೊಂಡಿದ್ದು ವಿಟಾಲಿಟಿ ಬ್ಲಾಸ್ಟ್​ನಲ್ಲಿ ಶುಕ್ರವಾರ ಕಣಕ್ಕಿಳಿದಿದ್ದರು. ಇದೀಗ ಚೇತರಿಸಿಕೊಂಡಿರುವುದರಿಂದ ಸರಣಿಯ ಮುಂದಿನ ಪಂದ್ಯಗಳಲ್ಲಿ ತಂಡದ ಭಾಗವಾಗಲಿದ್ದಾರೆ.

ಇನ್ನು ಭುಜದ ನೋವಿನ ಕಾರಣ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಮಾರ್ಕ್​ ವುಡ್​ ಕೂಡ ಚೇತಿರಿಸಕೊಂಡಿರುವುದರಿಂದ 4ನೇ ಟೆಸ್ಟ್​ಗೆ ಇಸಿಬಿ ಘೋಷಿಸಿರುವ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ತಮ್ಮ ಪತ್ನಿ 2ನೇ ಮಗುವಿಗೆ ಜನ್ಮ ನೀಡುತ್ತಿರುವ ಕಾರಣ ಜೋಸ್ ಬಟ್ಲರ್​ ಕೊನೆಯ ಎರಡು ಟೆಸ್ಟ್​ ಪಂದ್ಯಗಳಿಂದ ಹೊರ ಉಳಿದಿದ್ದು,ಜಾನಿ ಬೈರ್​ಸ್ಟೋವ್​ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಸ್ಯಾಮ್​ ಬಿಲ್ಲಿಂಗ್ಸ್​ ಹೆಚ್ಚುವರಿ ಕೀಪರ್ ಆಗಿ ತಂಡಕ್ಕೆ ಸೇರಿಕೊಂಡಿದ್ದಾರೆ.

ಹೆಡಿಂಗ್ಲೆಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಕ್ರೇಗ್ ಓವರ್​ಟನ್​, ಒಲ್ಲಿ ರಾಬಿನ್ಸನ್, ಸ್ಯಾಮ್​ ಕರ್ರನ್​​ ಮತ್ತು ಜೇಮ್ಸ್​ ಆ್ಯಂಡರ್ಸನ್​ ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮಾರ್ಕ್​​ವುಡ್​ ಬದಲಿಗೆ 15ರ ಬಳಗದಲ್ಲಿದ್ದ ಸಕೀದ್ ಮಹ್ಮೂದ್​ ವಾರ್ವಿಕ್​ಶೈರ್​ ತಂಡಕ್ಕೆ ಮರಳಿದ್ದು ಸೋಮವಾರದಿಂದ ಆರಂಭವಾಗಲಿರುವ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಆಡಲಿದ್ದಾರೆ.

ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋವ್ (ವಿಕೀ), ಸ್ಯಾಮ್ ಬಿಲ್ಲಿಂಗ್ಸ್ (ವಿಕೀ), ರೋರಿ ಬರ್ನ್ಸ್, ಸ್ಯಾಮ್ ಕರ್ರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಡೇವಿಡ್ ಮಲನ್, ಕ್ರೇಗ್ ಓವರ್‌ಟನ್, ಒಲ್ಲಿ ಪೋಪ್, ಒಲ್ಲಿ ರಾಬಿನ್ಸನ್ , ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಇದನ್ನು ಓದಿ: ಮುಂದಿನ 2 ಪಂದ್ಯಕ್ಕೆ ಇಶಾಂತ್ ಔಟ್? ಅಶ್ವಿನ್​ಗೆ ಅವಕಾಶ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.