ಮಕಾಯ್(ಆಸ್ಟ್ರೇಲಿಯಾ): ಭಾರತದ ಸ್ಟಾರ್ ಮಹಿಳಾ ಕ್ರಿಕೆಟಿಗರಾದ ಸ್ಮೃತಿ ಮಂಧಾನ (Smriti Mandhana) ಮತ್ತು ಹರ್ಮನ್ ಪ್ರೀತ್ ಕೌರ್ (Harmanpreet Kaur) ವುಮೆನ್ಸ್ ಬಿಗ್ಬ್ಯಾಶ್ನಲ್ಲಿ (Women's Big Bash League) ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ.
ಮಂಧಾನ ದಾಖಲೆಯ 114 ರನ್ಗಳಿಸಿದರೆ, ಕೌರ್ ಅಜೇಯ 81 ರನ್ಗಳಿಸಿದರು. ಆದರೆ ಕೌರ್ ಆಲ್ರೌಂಡ್ ಆಟ ಮಂಧಾನ ಶತಕ ಹಿಂದಿಕ್ಕಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ 4 ರನ್ಗಳ ರೋಚಕ ಜಯ ತಂದುಕೊಟ್ಟಿತು.
ಬುಧವಾರ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಥಂಡರ್ (Sydney Thunder) ಎದುರಾಳಿಗಳಾಗಿದ್ದವು. ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades) ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 175 ರನ್ಗಳಿಸಿತ್ತು. ಕೇವಲ 9 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿದ ಕೌರ್ 3ನೇ ಓವರ್ನಿಂದ 20ನೇ ಓವರ್ ತನಕ ಬ್ಯಾಟಿಂಗ್ ಮಾಡಿದರು. ಅವರು 55 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 81 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಕೌರ್ಗೆ ಸಾಥ್ ನೀಡಿದ ಜೆಸ್ ಡಫ್ಫಿನ್ 22 ಎಸೆತಗಳಲ್ಲಿ 33 ರನ್ಗಳಿಸಿದರು.
-
Smriti Mandhana has equalled Ashleigh Gardner's record for the highest WBBL score ever!
— Weber Women's Big Bash League (@WBBL) November 17, 2021 " class="align-text-top noRightClick twitterSection" data="
For her stunning century, she's the @WeberBBQAusNZ Player of the Match #WBBL07 pic.twitter.com/mcctQ1cOj8
">Smriti Mandhana has equalled Ashleigh Gardner's record for the highest WBBL score ever!
— Weber Women's Big Bash League (@WBBL) November 17, 2021
For her stunning century, she's the @WeberBBQAusNZ Player of the Match #WBBL07 pic.twitter.com/mcctQ1cOj8Smriti Mandhana has equalled Ashleigh Gardner's record for the highest WBBL score ever!
— Weber Women's Big Bash League (@WBBL) November 17, 2021
For her stunning century, she's the @WeberBBQAusNZ Player of the Match #WBBL07 pic.twitter.com/mcctQ1cOj8
ಇನ್ನು 175 ರನ್ಗಳ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ತಂಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತು. ಸ್ಮೃತಿ ಮಂಧಾನ 64 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 114 ರನ್ಗಳಿಸಿದರೂ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು. ಮಂಧಾನ ಜೊತೆ 14 ಓವರ್ಗಳ ಜೊತೆಯಾಟ ಮಾಡಿದ ವಿಕೆಟ್ ಕೀಪರ್ ತಹಿಲಾ ವಿಲ್ಸನ್ 39 ಎಸೆತಗಳಲ್ಲಿ 38 ರನ್ಗಳಿಸಿ ಸೋಲಿಗೆ ಪರೋಕ್ಷ ಕಾರಣರಾದರು.
ಬ್ಯಾಟಿಂಗ್ನಲ್ಲಿ 81 ರನ್ ಬಾರಿಸಿದ್ದ ಕೌರ್ 4 ಓವರ್ಗಳಲ್ಲಿ 27 ರನ್ ನೀಡಿ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಅಲ್ಲದೆ ಕೊನೆಯ ಓವರ್ನಲ್ಲಿ ಮಂಧಾನ ಕ್ರೀಸ್ನಲ್ಲಿದ್ದರು ಕೇವಲ 13 ರನ್ಗಳಿಗೆ ನಿಯಂತ್ರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಟೂರ್ನಿಯಲ್ಲಿ ಕೌರ್ 10 ಪಂದ್ಯಗಳನ್ನಾಡಿದ್ದು, 78ರ ಸರಾಸರಿಯಲ್ಲಿ 390 ರನ್ ಮತ್ತು 13 ವಿಕೆಟ್ ಪಡೆದು ತಂಡ ಅಗ್ರಸ್ಥಾನದಲ್ಲಿರಲು ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಮಂಧಾನ 11 ಪಂದ್ಯಗಳಲ್ಲಿ 348 ರನ್ಗಳಿಸಿಯೂ ತಂಡದ ಇತರೆ ಬ್ಯಾಟರ್ಗಳ ಸಾಥ್ ನೀಡದ ಕಾರಣ ಸಿಡ್ನಿ ಥಂಡರ್ 7ನೇ ಸ್ಥಾನದಲ್ಲಿರುವಂತೆ ಮಾಡಿದೆ. ಈ ಸೋಲಿನೊಂದಿಗೆ ಟೂರ್ನಿಯಿಂದಲೂ ಹೊರ ಬಿದ್ದಂತಾಗಿದೆ.
ಮಹಿಳಾ ಬಿಗ್ಬ್ಯಾಶ್ ಇತಿಹಾಸದಲ್ಲಿ ಗರಿಷ್ಠ (114) ರನ್ ದಾಖಲಿಸಿದ ಸ್ಮೃತಿ ಮಂಧಾನ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಇದನ್ನೂ ಓದಿ: ಮುಂಬರುವ ICC ಟೂರ್ನಮೆಂಟ್ಗಾಗಿ ರಣತಂತ್ರ.. ಹೊಸ ಕೋಚ್, ಹೊಸ ನಾಯಕ ಹೇಳಿದ್ದೇನು!?