ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹತ್ವದ ನಿರ್ಧಾರ ಕೈಗೊಂಡಿದೆ. ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹಾಗು ಕ್ರಿಕೆಟ್ ತಂಡದ ನಿರ್ದೇಶಕ ಜಹೀರ್ ಖಾನ್ ಅವರಿಗೆ ಇದೀಗ ಬೇರೆ ಜವಾಬ್ದಾರಿ ನೀಡಿ, ಆದೇಶ ಹೊರಡಿಸಿದೆ.
2017ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ಕ್ಯಾಪ್ಟನ್ ಜಯವರ್ಧನೆ ಆಯ್ಕೆಯಾಗಿದ್ದರು. ಇವರ ತರಬೇತಿ ಅಡಿಯಲ್ಲಿ ತಂಡ ಮೂರು ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಅವರನ್ನ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಆಗಿ ನೇಮಕಗೊಳಿಸಿದೆ. ಇನ್ನು, 2018ರಲ್ಲಿ ಮುಂಬೈ ತಂಡದ ಕ್ರಿಕೆಟ್ ಕಾರ್ಯಾಚರಣೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವೇಗಿ ಜಹೀರ್ ಖಾನ್ ಅವರನ್ನು ಕ್ರಿಕೆಟ್ ಅಭಿವೃದ್ಧಿಯ ಜಾಗತಿಕ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದೆ.
ಮುಂಬೈ ಇಂಡಿಯನ್ಸ್ ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚೆಗೆ ಯುಎಇಯ ಐಎಲ್ಟಿ 20 ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಎಸ್ಎ 20 ಲೀಗ್ಗಳಲ್ಲಿ ಫ್ರಾಂಚೈಸಿ ಖರೀದಿ ಮಾಡಿದೆ. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಜವಾಬ್ದಾರಿಯಲ್ಲಿ ಜಯವರ್ಧನೆ ತಂಡಗಳ ಕಾರ್ಯತಂತ್ರ, ತರಬೇತಿ ನೀಡಲಿದ್ದು, ಆಟಗಾರರು ಜಾಗತಿಕವಾಗಿ ಬೆಳೆಯಲು ನಿರ್ದೇಶನ ನೀಡಲಿದ್ದಾರೆ.
-
🚨 Head Coach ➡️ Global Head of Performance 🌏
— Mumbai Indians (@mipaltan) September 14, 2022 " class="align-text-top noRightClick twitterSection" data="
We are delighted to announce Mahela Jayawardene as our Global Head of Performance 🙌💙#OneFamily #MumbaiIndians #MIemirates #MIcapetown @MIEmirates @MICapeTown @MahelaJay pic.twitter.com/I4wobGDkOQ
">🚨 Head Coach ➡️ Global Head of Performance 🌏
— Mumbai Indians (@mipaltan) September 14, 2022
We are delighted to announce Mahela Jayawardene as our Global Head of Performance 🙌💙#OneFamily #MumbaiIndians #MIemirates #MIcapetown @MIEmirates @MICapeTown @MahelaJay pic.twitter.com/I4wobGDkOQ🚨 Head Coach ➡️ Global Head of Performance 🌏
— Mumbai Indians (@mipaltan) September 14, 2022
We are delighted to announce Mahela Jayawardene as our Global Head of Performance 🙌💙#OneFamily #MumbaiIndians #MIemirates #MIcapetown @MIEmirates @MICapeTown @MahelaJay pic.twitter.com/I4wobGDkOQ
ಇದನ್ನೂ ಓದಿ: ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿಯಲಿರುವ ಟೀಂ ಇಂಡಿಯಾ... ಶೀಘ್ರದಲ್ಲೇ ಅನಾವರಣ
ಇನ್ನು, ಜಹೀರ್ ಖಾನ್ ಪಾತ್ರ, ಹೊಸ ಪ್ರತಿಭೆ ಗುರುತಿಸುವಿಕೆ, ಮೂರು ಫ್ರಾಂಚೈಸಿಗಳಲ್ಲಿ ಹೊಸ ಹೊಸ ಆಟಗಾರರಿಗೆ ಸೇರ್ಪಡೆ ಹಾಗೂ ಮೂರು ತಂಡಗಳ ಜೊತೆಗೆ ನಿಕಟವಾಗಿ ಕೆಲಸ ಮಾಡುವುದಾಗಿದೆ. ಈ ಜವಾಬ್ದಾರಿಯಿಂದ ನಮ್ಮ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ. ಮುಂದಿನ ವರ್ಷದ ಐಪಿಎಲ್ಗೋಸ್ಕರ ಮುಂಬೈ ಫ್ರಾಂಚೈಸಿ ಹೊಸ ಕೋಚ್ಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ರಾಬಿನ್ ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡಿದೆ.