ETV Bharat / sports

ಮಹಾರಾಜ ಟ್ರೋಫಿ: ಮೈಸೂರು - ಹುಬ್ಬಳ್ಳಿ ಮಧ್ಯೆ ಇಂದು ಫೈನಲ್​ ಕಾದಾಟ, 2ನೇ ಸೆಮೀಸ್​ನಲ್ಲಿ ಗುಲ್ಬರ್ಗಕ್ಕೆ ಸೋಲು

author img

By ETV Bharat Karnataka Team

Published : Aug 29, 2023, 6:59 AM IST

ಮಹಾರಾಜ ಟ್ರೋಫಿಯ 2ನೇ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಗುಲ್ಬರ್ಗ ತಂಡಕ್ಕೆ ಸೋಲುಣಿಸಿದ ಮೈಸೂರು ವಾರಿಯರ್ಸ್​ ಫೈನಲ್​ ತಲುಪಿತು. ಹುಬ್ಬಳ್ಳಿ ಟೈಗರ್ಸ್​ ವಿರುದ್ಧ ಇಂದು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.

ಮಹಾರಾಜ ಟ್ರೋಫಿ
ಮಹಾರಾಜ ಟ್ರೋಫಿ

ಬೆಂಗಳೂರು: ಕರ್ನಾಟಕ ತೊರೆದು ವಿದರ್ಭ ಕ್ರಿಕೆಟ್​ ಸೇರಿರುವ ಬ್ಯಾಟರ್​ ಕರುಣ್ ನಾಯರ್ ಅಬ್ಬರದ ಶತಕ ಹಾಗೂ ರವಿಕುಮಾರ್ ಸಮರ್ಥ್ ಅವರ ಅರ್ಧಶತಕವು ಹಾಲಿ ಚಾಂಪಿಯನ್​ ಗುಲ್ಬರ್ಗಾ ಮಿಸ್ಟಿಕ್ಸ್​ ತಂಡಕ್ಕೆ ಸೋಲು ತಂದು ಮಹಾರಾಜ ಟ್ರೋಫಿಯಲ್ಲಿ‌ ಮೈಸೂರು ವಾರಿಯರ್ಸ್ ತಂಡ ಫೈನಲ್ ಟಿಕೆಟ್​ ಪಡೆಯುವಂತೆ ಮಾಡಿತು. ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ತೀವ್ರ ಹಣಾಹಣಿ ಮಧ್ಯೆ ಗುಲ್ಬರ್ಗಾ 36 ರನ್‌ಗಳಿಂದ ಪರಾಜಯ ಕಂಡಿತು. ಇಂದು (ಮಂಗಳವಾರ) ಹುಬ್ಬಳ್ಳಿ ಟೈಗರ್ಸ್​ ಮತ್ತು ಮೈಸೂರು ವಾರಿಯರ್ಸ್​ ನಡುವೆ ಫೈನಲ್​ ಪಂದ್ಯ ನಡೆಯಲಿದೆ.

ನಾಯರ್​ ಬ್ಯಾಟಿಂಗ್​ ವೈಭವ : ಟಾಸ್​ ಸೋತರೂ ಬ್ಯಾಟಿಂಗ್​ ಗಿಟ್ಟಿಸಿಕೊಂಡ ಮೈಸೂರು ತಂಡಕ್ಕೆ ನಾಯಕ ಕರುಣ್ ನಾಯರ್, ಆರ್​. ಸಮರ್ಥ್ ಮತ್ತು ಕಾರ್ತಿಕ್​ ರನ್​ ಮಳೆಯನ್ನೇ ಸುರಿಸಿದರು. ಅದರಲ್ಲೂ ಕರುಣ್​ ನಾಯರ್​ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆಮೂಲೆಗೆ ಚೆಂಡನ್ನು ಅಟ್ಟಿದರು. 42 ಎಸೆತಗಳಲ್ಲಿ ಅಜೇಯ 107 ರನ್​ ಗಳಿಸಿದ ಕರುಣ್​, ಏಳು ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು. ಇತ್ತ ರವಿಕುಮಾರ್ ಸಮರ್ಥ್ 50 ಎಸೆತಗಳಲ್ಲಿ 80 ರನ್​ ಗಳಿಸಿ ಕರುಣ್​ಗೆ ಉತ್ತಮ ಬೆಂಬಲ ನೀಡಿದರು. ಆರಂಭಿಕ ಬ್ಯಾಟರ್​ ಎಸ್​ಯು ಕಾರ್ತಿಕ್​ 41 ರನ್​ ಮಾಡಿದರು.

ಆರಂಭಿಕರಾದ ರವಿಕುಮಾರ್ ಸಮರ್ಥ್ ಮತ್ತು ಎಸ್‌.ಯು ಕಾರ್ತಿಕ್ ಜೋಡಿ ಮೊದಲ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಪೇರಿಸುವ ಮೂಲಕ ಪವರ್‌ ಪ್ಲೇನ ಸಂಪೂರ್ಣ ಸದುಪಯೋಗ ಪಡೆಯಿತು. 9ನೇ ಓವರ್‌ನಲ್ಲಿ ಡಿ.ಅವಿನಾಶ್ ಬೌಲಿಂಗ್‌ನಲ್ಲಿ ಎಸ್.ಯು ಕಾರ್ತಿಕ್ (41) ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಸಮರ್ಥ್ ಜೊತೆಗೂಡಿದ ನಾಯಕ ಕರುಣ್ ನಾಯರ್ ಅಕ್ಷರಶಃ ಆರ್ಭಟಿಸಿದರು.

ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿದ ಕರುಣ್ ಅಜೇಯ ಶತಕ ಬಾರಿಸಿದರು. ನಂತರ ಬಂದ ಮನೋಜ್ ಭಾಂಡಗೆ ಅಜೇಯ 18 ರನ್ ಗಳಿಸಿದರು. ನಿಗದಿತ 20 ಓವರ್‌ಗಳ ಅಂತ್ಯಕ್ಕೆ ಮೈಸೂರು ತಂಡ 2 ವಿಕೆಟ್​ಗೆ 248 ರನ್ ಗಳಿಸಿತು.

ಹೋರಾಡಿ ಸೋತ ಗುಲ್ಬರ್ಗಾ : ಬೃಹತ್ ಗುರಿ ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಸಹ ಸ್ಫೋಟಕ ಆರಂಭವನ್ನೇ ಪಡೆಯಿತು. ಜಿದ್ದಿಗೆ ಬಿದ್ದಂತೆ ಆಡಿದ ಆರಂಭಿಕರಾದ ಕೆ.ವಿ ಅನೀಶ್ (23), ಎಲ್‌.ಆರ್ ಚೇತನ್ (28) 3 ಓವರ್​ಗಳಲ್ಲಿ 43 ರನ್ ಚಚ್ಚಿದರು. ದಾಳಿಗಿಳಿದ ಮೈಸೂರಿನ ಜೆ.ಸುಚಿತ್ ಇಬ್ಬರಿಗೂ ಪೆವಿಲಿಯನ್​ ದಾರಿ ತೋರಿಸಿದರು. ಅಮಿತ್ ವರ್ಮಾ (11) ರನ್ ಗಳಿಸಲಷ್ಟೇ ಶಕ್ತರಾದರು. ಸಮ್ರನ್​ ರವಿಚಂದ್ರನ್​ ಸೊನ್ನೆ ಸುತ್ತಿದರು.

ಒಂದರ ಹಿಂದೆ ಒಂದು ವಿಕೆಟ್ ಬಿದ್ದು ಸೋಲಿಗೆ ದವಡೆಗೆ ಸಿಲುಕಿದ್ದ ಗುಲ್ಬರ್ಗಾವನ್ನು ಮೇಲೆತ್ತಲು ಮ್ಯಾಕ್ನೈಲ್ ನೊರೊನ್ಹಾ ಹಾಗೂ ಅಬುಲ್ ಖಾಲಿದ್ ಜೋಡಿ ಪ್ರಯತ್ನಿಸಿತು. ಅಂತಿಮವಾಗಿ ಐದು ಓವರ್‌ಗಳಲ್ಲಿ ತಂಡದ ಗೆಲುವಿಗೆ 76 ರನ್‌ಗಳ ಅಗತ್ಯವಿದ್ದಾಗ ಮ್ಯಾಕ್ನೈಲ್ ನೊರೊನ್ಹಾಗೆ (61) ಮೊನಿಶ್ ರೆಡ್ಡಿ ಪೆವಿಲಿಯನ್​ ಕಳಿಸಿದರು. ನಂತರದ ಓವರ್‌ನಲ್ಲಿ ಶರತ್ ಶ್ರೀನಿವಾಸ್ (1) ವಿಕೆಟ್ ಒಪ್ಪಿಸಿದರು.

ಅರ್ಧಶತಕದ ಬೆನ್ನಲ್ಲೇ ಖಾಲೀದ್ (54) ಸಹ ಕುಶಾಲ್ ವಾಧ್ವಾನಿ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಡಿ ಅವಿನಾಶ್ (11), ನಾಯಕ ವಿಜಯ್ ಕುಮಾರ್ ವೈಶಾಕ್ (16) ರನ್ ಗಳಿಸಿದರಾದರೂ ಗುಲ್ಬರ್ಗಕ್ಕೆ ಗೆಲುವು ಧಕ್ಕಲಿಲ್ಲ. ಇದರಿಂದ 8 ವಿಕೆಟ್​ಗೆ 212 ರನ್ ಗಳಿಸಲಷ್ಟೇ ಶಕ್ತವಾದ ತಂಡ 36 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: ಮಹಾರಾಜ ಟ್ರೋಫಿ: ಶಿವಮೊಗ್ಗ ಲಯನ್ಸ್ ಮಣಿಸಿ ಫೈನಲ್‌ಗೇರಿದ ಹುಬ್ಬಳ್ಳಿ ಟೈಗರ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.