ETV Bharat / sports

ಮಹಾರಾಜ ಟ್ರೋಫಿ ಟಿ20: ಹುಬ್ಬಳ್ಳಿ ಟೈಗರ್ಸ್‌ಗೆ ಶರಣಾದ ಶಿವಮೊಗ್ಗ ಸ್ಟ್ರೈಕರ್ಸ್‌ - ಮಹಾರಾಜ ಟ್ರೋಫಿ ಕ್ರಿಕೆಟ್​ ಟೂರ್ನಿ

ಮಹಾರಾಜ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ ತಂಡವು ಭರ್ಜರಿ ಗೆಲುವು ಸಾಧಿಸಿದೆ.

Etv Bharatmaharaja-trophy-hubballi-tigers-beat-shivamogga-strikers
Etv Bharatಮಹಾರಾಜ ಟ್ರೋಫಿ ಟಿ20: ಹುಬ್ಬಳ್ಳಿ ಟೈಗರ್ಸ್‌ಗೆ ಶರಣಾದ ಶಿವಮೊಗ್ಗ ಸ್ಟ್ರೈಕರ್ಸ್‌
author img

By

Published : Aug 19, 2022, 9:39 PM IST

ಬೆಂಗಳೂರು: ಲವ್‌ನೀತ್‌ ಸಿಸೋಡಿಯಾ (62) ಹಾಗೂ ಬಿಯು ಶಿವಕುಮಾರ್‌ (61*) ಅವರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಮಹಾರಾಜ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. 147 ರನ್‌ ಜಯದ ಗುರಿ ಹೊತ್ತ ಟೈಗರ್ಸ್‌ ಇನ್ನೂ 16 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತು.

ಟಾಸ್‌ ಗೆದ್ದ ಹುಬ್ಬಳ್ಳಿ ಟೈಗರ್ಸ್‌ ತಂಡ ಫೀಲ್ಡಿಂಗ್‌ ಆಯ್ದುಕೊಂಡಿತು. ಶಿವಮೊಗ್ಗಕ್ಕೆ ಶರತ್‌ ಹಾಗೂ ಹೂವರ್‌ ಮೊದಲ ವಿಕೆಟ್​​​ ಜೊತೆಯಾಟದಲ್ಲಿ 78 ರನ್‌ ಸೇರಿಸಿದರು. ಶರತ್‌ 36 ಹಾಗೂ ಸ್ಟಾಲಿನ್‌ ಹೂವರ್‌ 38 ರನ್‌ ಗಳಿಸಿದರು. ಆದರೆ ಈ ಇಬ್ಬರೂ ನಿರ್ಗಮಿಸುತ್ತಿದ್ದಂತೆ ಶಿವಮೊಗ್ಗದ ರನ್ ಗಳಿಕೆಗೆ ಕಡಿವಾಣ ಬಿತ್ತು. ಬೌಲರ್​ಗಳಾದ ಆನಂದ್‌ ಮತ್ತು ಶಿವಕುಮಾರ್‌ ಆರಂಭಿಕ ಆಟಗಾರರ ವಿಕೆಟ್‌ ಪಡೆದು ಹುಬ್ಬಳ್ಳಿ ತಂಡಕ್ಕೆ ಮೇಲುಗೈ ಒದಗಿಸಿದರು.

ಇದನ್ನೂ ಓದಿ: ರಾಷ್ಟ್ರಗೀತೆ ನುಡಿಸುವ ವೇಳೆ ಮೆಚ್ಚುಗೆ ಗಳಿಸಿದ ಕ್ರಿಕೆಟಿಗ ಕೆ ಎಲ್ ರಾಹುಲ್‌ ನಡೆ

ನಂತರ ಕೆ. ಸಿದ್ಧಾರ್ಥ್‌ (23) ಹಾಗೂ ಚೈತನ್ಯ (32*) 43 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 147ಕ್ಕೆ ಕೊಂಡೊಯ್ದರು. ಹುಬ್ಬಳ್ಳಿ ಪರ ನಿನ್ನೆಯ ಪಂದ್ಯದಲ್ಲಿ ಮಿಂಚಿದ್ದ ವಾಸುಕಿ ಕೌಶಿಕ್‌ ಶಿವಮೊಗ್ಗ ವಿರುದ್ಧವೂ ತಮ್ಮ ಬೌಲಿಂಗ್‌ ಚಮತ್ಕಾರ ಮುಂದುವರೆಸಿದರು. ವಾಸುಕಿ 29 ರನ್‌ಗೆ 2 ವಿಕೆಟ್‌ ಗಳಿಸಿದರೆ, ನವೀನ್‌, ದೊಡ್ಡಮನಿ ಆನಂದ್‌ ಮತ್ತು ಶಿವಕುಮಾರ್‌ ತಲಾ 1 ವಿಕೆಟ್‌ ಕಬಳಿಸಿದರು.

147 ರನ್‌ ಜಯದ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್‌ ತಂಡದ ಪರ ಸಿಸೋಡಿಯಾ 38 ಎಸೆತಗಳಲ್ಲಿ 62 ರನ್​ ಹಾಗೂ ಶಿವಕುಮಾರ್‌ 52 ಎಸೆತಗಳಲ್ಲಿ 61 ರನ್‌ ಬಾರಿಸಿ ಟೈಗರ್ಸ್​​ಗೆ ಸುಲಭ ಜಯದ ರೂವಾರಿಯಾದರು. 17.2 ಓವರ್​ಗಳಲ್ಲಿ ಹುಬ್ಬಳ್ಳಿ ತಂಡ 2 ವಿಕೆಟ್​ ನಷ್ಟಕ್ಕೆ ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿ: ಮಹಾರಾಜ ಟ್ರೋಫಿ ಕ್ರಿಕೆಟ್ 2022, ವಿದ್ಯಾಧರ ಮಾರಕ ಬೌಲಿಂಗ್‌, ಮೈಸೂರು ವಾರಿಯರ್ಸ್​ಗೆ ರೋಚಕ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.