ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ಗೆ ಮುಂಬೈನಲ್ಲಿ ನೀಡಲಾಗಿರುವ ಸರ್ಕಾರಿ ಜಾಗವನ್ನ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಬಳಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್ ಸೂಚಿಸಿದ್ದಾರೆ.
ಭೂಮಿ ಹಂಚಿಕೆಯಾಗಿ 30 ವರ್ಷ ಕಳೆದರೂ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲಾಗಿಲ್ಲ. ಸರ್ಕಾರಿ ಜಾಗವನ್ನು ಅವರು ಬಳಕೆ ಮಾಡಿಲ್ಲ ಎಂದು ಗವಾಸ್ಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬಾಂದ್ರಾದಲ್ಲಿರುವ 2 ಸಾವಿರ ಚದರ ಮೀಟರ್ ಸರ್ಕಾರಿ ಭೂಮಿಯ ಹಂಚಿಕೆಯನ್ನ ಬಹುತೇಕ ರದ್ದುಗೊಳಿಸುವ ನಿರ್ಧಾರಕ್ಕೆ ನಾನು ಬಂದಿದ್ದೆ. ಇಷ್ಟು ದೊಡ್ಡ ಜಾಗ ಮತ್ತು ನಗರದ ಹೃದಯಭಾಗದಲ್ಲಿನ ಸ್ಥಳದಲ್ಲಿ ಅಕಾಡೆಮಿ ಸ್ಥಾಪನೆಯಾಗದೇ ಜಾಗ ಹಾಗೆ ಉಳಿದಿದೆ. ಗವಾಸ್ಕರ್ ಅವರು ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆ ಹಾಗೂ ಅವರ ಸಾಧನೆಗಳ ನೋಡಿ ಈ ಭೂಮಿ ಹಂಚಿಕೆಯನ್ನ ರದ್ದುಗೊಳಿಸದೇ ಹಾಗೆ ಉಳಿಸಿಕೊಂಡಿದ್ದೇನೆ ಎಂದಿದ್ದಾರೆ.
-
जर सुनिल गावस्कर नसता तर कदाचित त्याला आज देण्यात आलेला म्हाडाचा प्लॉट मी रद्द केला असता. ज्या दिवशी सुनिल गावस्कर फिलिप्स डिफ्रायटेस च्या चेंडूवरती त्रिफळाचीत झाला. त्या दिवसापासून जवळ-जवळ माझा क्रिकेट मधला इंटरेस्टच संपला. स्टेडियम मधून रडत बाहेर पडलो होतो
— Dr.Jitendra Awhad (@Awhadspeaks) September 15, 2021 " class="align-text-top noRightClick twitterSection" data="
">जर सुनिल गावस्कर नसता तर कदाचित त्याला आज देण्यात आलेला म्हाडाचा प्लॉट मी रद्द केला असता. ज्या दिवशी सुनिल गावस्कर फिलिप्स डिफ्रायटेस च्या चेंडूवरती त्रिफळाचीत झाला. त्या दिवसापासून जवळ-जवळ माझा क्रिकेट मधला इंटरेस्टच संपला. स्टेडियम मधून रडत बाहेर पडलो होतो
— Dr.Jitendra Awhad (@Awhadspeaks) September 15, 2021जर सुनिल गावस्कर नसता तर कदाचित त्याला आज देण्यात आलेला म्हाडाचा प्लॉट मी रद्द केला असता. ज्या दिवशी सुनिल गावस्कर फिलिप्स डिफ्रायटेस च्या चेंडूवरती त्रिफळाचीत झाला. त्या दिवसापासून जवळ-जवळ माझा क्रिकेट मधला इंटरेस्टच संपला. स्टेडियम मधून रडत बाहेर पडलो होतो
— Dr.Jitendra Awhad (@Awhadspeaks) September 15, 2021
ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಉದ್ದೇಶದಿಂದಲೇ ಅವರಿಗೆ ಭೂಮಿ ಹಂಚಿಕೆ ಮಾಡಲಾಗಿತ್ತು. ಅದಕ್ಕಾಗಿಯೇ ಆ ಜಾಗ ಬಳಸಿಕೊಳ್ಳಬೇಕು. ನಾನು ಆ ಜಾಗವನ್ನ ರಾಜ್ಯ ವಸತಿ ಸಂಸ್ಥೆಯ ಸ್ವಾದೀನಕ್ಕೆ ಪಡೆದು ಬೇರೆ ಉದ್ದೇಶಕ್ಕೆ ಬಳಸಲು ಸಹ ಸಿದ್ಧನಿದ್ದೇನೆ. ಈ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆದು ಈ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡಲಿದ್ದೇವೆ ಎಂದಿದ್ದಾರೆ.
ಆ ಜಾಗದಲ್ಲಿ ಸುನಿಲ್ ಗವಾಸ್ಕರ್ ಇಲ್ಲದಿದ್ದರೆ ವಸತಿ ಸಚಿವನಾಗಿ ನಾನು ಆ ಮಂಜೂರಾತಿಯನ್ನ ರದ್ದುಗೊಳಿಸುತ್ತಿದ್ದೆ ಎಂದು ಸಚಿವ ಜಿತೇಂದ್ರ ಅವ್ಹಾದ್ ಟ್ವೀಟ್ ಮಾಡಿದ್ದಾರೆ. ಎಂಹೆಚ್ಎಡಿಎ (ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ) 1986ರಲ್ಲಿ ಗವಾಸ್ಕರ್ ಅವರು ಕ್ರಿಕೆಟ್ ಅಕಾಡೆಮಿಗಾಗಿ ಆರಂಭಿಸಿದ ಟ್ರಸ್ಟ್‌ಗೆ ಭೂಮಿಯನ್ನು ಗುತ್ತಿಗೆ ನೀಡಿತ್ತು, ಆದರೆ ಯೋಜನೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ.
ಓದಿ: 10 ಸಿಕ್ಸರ್, 7 ಬೌಂಡರಿ, 46 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಎಬಿಡಿ: ವಿಡಿಯೋ ನೋಡಿ..