ಭಾರತಕ್ಕೆ ಸರಿಸುಮಾರು 10 ವರ್ಷಗಳಿಂದ ಐಸಿಸಿ ನಡೆಸುವ ಪ್ರತಿಷ್ಠಿತ ಕಪ್ಗಳು ದೊರೆತಿಲ್ಲ. ಭಾರತ 2013 ಇಂಗ್ಲೆಂಡ್ ಅನ್ನು ಮಣಿಸಿ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಂಡಿತ್ತು. ಆದಾದ ನಂತರ 7 ಐಸಿಸಿ ಆಯೋಜನೆ ಟೂರ್ನಿಗಳು ನಡೆದಿದ್ದು ಯಾವುದರಲ್ಲೂ ಗೆಲುವು ದಾಖಲಿಸಿಲ್ಲ. 2013ರದ್ದೇ ಭಾರತಕ್ಕೆ ಬಂದ ಕೊನೆಯ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಪ್ರಶಸ್ತಿಯಾಗಿದೆ.
ನಂತರ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದರು ಫೈನಲ್‌ವರೆಗೆ ಹೋಗಿ ರನ್ನರ್ ಆಪ್ ಆಗಿದೆ. ಸತತ ಐಸಿಸಿ ಟ್ರೋಫಿಯ ಸೋಲಿನ ಕಾರಣ ಭಾರತ ತಂಡನ ನಾಯಕತ್ವ ವಹಿಸಿದ್ದ ವಿರಾಟ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತಂಡದಲ್ಲಿ ಕೇವಲ ಆಟಗಾರರಾಗಿ ಉಳಿದು ಕೊಂಡರು. ಈಗ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಪಡೆದುಕೊಂಡಿದ್ದು ಓವೆಲ್ನಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಗೆದ್ದು ಗದೆ ವಶಪಡಿಸಿಕೊಳ್ಳುತ್ತಾ? ಎಂಬ ಕುತೂಹಲ ಎಲ್ಲರಲ್ಲಿದೆ.
-
India have set a date with Australia at The Oval for the #WTC23 Final 🔥
— ICC (@ICC) March 13, 2023 " class="align-text-top noRightClick twitterSection" data="
More ➡️ https://t.co/en4JKEz34d pic.twitter.com/WezeBkKluj
">India have set a date with Australia at The Oval for the #WTC23 Final 🔥
— ICC (@ICC) March 13, 2023
More ➡️ https://t.co/en4JKEz34d pic.twitter.com/WezeBkKlujIndia have set a date with Australia at The Oval for the #WTC23 Final 🔥
— ICC (@ICC) March 13, 2023
More ➡️ https://t.co/en4JKEz34d pic.twitter.com/WezeBkKluj
2014 ಟಿ20 ವಿಶ್ವಕಪ್ ಫೈನಲ್ ಸೋಲು: 2013ರಲ್ಲಿ ಚಾಪಿಂಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ಅದೇ ತಂಡದೊಂದಿಗೆ ಟಿ20 ವಿಶ್ವ ಕಪ್ ಎದುರಿಸಿತ್ತು. ಗುಂಪು ಹಂತದಲ್ಲಿ ನಾಲ್ಕು ಪಂದ್ಯದಲ್ಲಿ ಸೋಲನ್ನೇ ಕಾಣದೇ ಫೈನಲ್ ಪ್ರವೇಶ ಪಡೆದಿತ್ತು. ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಶ್ರೀಲಂಕಾ ಎದುರಾಳಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ನೀಡಿದ್ದ 130 ರನ್ನ ಗುರಿಯನ್ನು ಲಂಕಾ 4 ವಿಕೆಟ್ ನಷ್ಟದಲ್ಲಿ ಸಾಧಿಸಿತ್ತು. ಭಾರತ 6 ವಿಕೆಟ್ಗಳ ಸೋಲನುಭವಿಸಿತ್ತು.
2015ರ ಏಕದಿನ ವಿಶ್ವಕಪ್ ಸೆಮೀಸ್ ಸೋಲು: 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತಕ್ಕೆ ನಾಲ್ಕು ವರ್ಷಗಳ ನಂತರ ಮತ್ತೆ ವಿಶ್ವಕಪ್ ಪಂದ್ಯ ಎದುರಾಗಿತ್ತು. ಗುಂಪು ಹಂತದ 6 ಪಂದ್ಯದಲ್ಲಿ ಒಂದೂ ಸೋಲು ಕಾಣದೇ ಸೆಮೀಸ್ ಪ್ರವೇಶ ಪಡೆದಿದ್ದ ಭಾರತ ಆಸ್ಟ್ರೇಲಿಯಾದ ಎದುರು ಸೋಲನುಭವಿಸಿತು. ಆಸಿಸ್ ನೀಡಿದ್ದ 328 ರನ್ ಗುರಿ ಬೆನ್ನು ಹತ್ತಿದ್ದ ಭಾರತ 233 ರನ್ಗೆ ಆಲ್ಔಟ್ ಆಗಿ ಸೆಮಿಸ್ನಿಂದ ಹೊರ ಬಂದಿತ್ತು.
2016 ಟಿ20 ವಿಶ್ವಕಪ್ ಸೆಮೀಸ್ ಅಪಜಯ: ಎರಡನೇ ಸೆಮೀಸ್ ಕದನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 7 ವಿಕೆಟ್ಗಳ ಸೋಲನುಭವಿಸಿತ್ತು. ಭಾರತ ಕೊಟ್ಟಿದ್ದ 192 ರನ್ನ ಗುರಿಯನ್ನು ಮೂರು ವಿಕೆಟ್ ಕಳೆದಕೊಂಡು 2 ಬಾಲ್ ಉಳಿಸಿಕೊಂಡು ಕೆರಿಬಿಯನ್ನರು ಗೆದ್ದಿದ್ದರು. ಫೈನಲ್ನಲ್ಲಿ ಸಹ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಮಣಿಸಿ ಗೆಲುವು ದಾಖಲಿಸಿತ್ತು.
2017 ಚಾಂಪಿಯನ್ಸ್ ಟ್ರೋಫಿ ಫೈನಲ್: ವಿರಾಟ್ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದ್ದ ಭಾರತ ಪಾಕಿಸ್ತಾನದಿಂದ ಹೀನಾಯ ಸೋಲನುಭವಿಸಿತ್ತು. ಪಾಕಿಸ್ತಾನ ಕೊಟ್ಟಿದ್ದ 338 ರನ್ನ ಗುರಿಯನ್ನು ಬೆನ್ನು ಹತ್ತಿದ್ದ ಭಾರತ 158ಕ್ಕೆ ಆಲ್ಔಟ್ ಆಗಿತ್ತು. 180 ರನ್ಗಳಿಂದ ಬೃಹತ್ ಸೋಲು ಎದುರಿಸಿತ್ತು.
2019ರ ಏಕದಿನ ವಿಶ್ವಕಪ್ ಸೆಮೀಸ್ ಸೋಲು: ವಿರಾಟ್ ನಾಯಕತ್ವದ ಐಸಿಸಿ ಟ್ರೋಫಿಯ ಎರಡನೇ ಸೋಲು ಇದಾಗಿತ್ತು. ಗುಂಪು ಹಂತದ ಪಂದ್ಯದಲ್ಲಿ 9ರಲ್ಲಿ 7 ಗೆದ್ದು, ಸೆಮೀಸ್ಗೆ ಭಾರತ ಪ್ರವೇಶ ಪಡೆದಿತ್ತು. ನಾಕೌಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತೆ ಎಡವಿತು. ಕಿವೀಸ್ ವಿರುದ್ಧ 18 ರನ್ನ ಸೋಲು ಕಂಡಿತು.
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲು: 2021ರಲ್ಲಿ ಐಸಿಸಿ ಚೊಚ್ಚಲ ಬಾರಿಗೆ ಟೆಸ್ಟ್ ಚಾಂಪಿಯನ್ಶಿಪ್ ಪರಿಚಯಿಸಿತ್ತು. ಇದರಲ್ಲಿ ಫೈನಲ್ ಪ್ರವೇಶಿದ ಭಾರತ ಕಿವೀಸ್ ವಿರುದ್ಧ ಸೋಲನುಭವಿಸಿತ್ತು. ಇದು ವಿರಾಟ್ ಸತತ ಮೂರನೇ ಐಸಿಸಿ ಟ್ರೋಫಿಯ ಸೋಲಾಗಿತ್ತು. ಇದು ವಿರಾಟ್ ನಾಯಕತ್ವಕ್ಕೆ ಕುತ್ತು ತಂದಿತ್ತು.
2022ರ ಟಿ20 ವಿಶ್ವಕಪ್ ಸೆಮೀಸ್ ಸೋಲು: ರೋಹಿತ್ ಶರ್ಮಾ ನಾಯಕನಾಗಿ ಟಿ20 ವಿಶ್ವಕಪ್ ಮುನ್ನಡೆಸಿದ್ದರು. ಸೆಮೀಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲನುಭವಿಸಿ, ಮತ್ತೊಂದು ಐಸಿಸಿ ಟ್ರೋಫಿಯನ್ನು ಕಳೆದುಕೊಂಡಿತ್ತು. ಈಗ ಜೂನ್ 7 ರಿಂದು ಇಂಗ್ಲೆಂಡ್ನ ಓವೆಲ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದ್ದು ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಕಣಕ್ಕಿಳಿಯಲಿದೆ. ಈ ಕಪ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ಐಪಿಎಲ್ ಮುಗಿದ ಬೆನ್ನಲ್ಲೇ ಭಾರತ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಬೇಕಿದೆ.
ಇದನ್ನೂ ಓದಿ: ಜೂನ್‌ನಲ್ಲಿ ಶುರುವಾಗುತ್ತೆ ಟಿ10 ಲೀಗ್; ನಿವೃತ್ತ ದಿಗ್ಗಜರ ಕ್ರಿಕೆಟ್ ನೋಡಲು ಸಿದ್ಧರಾಗಿ!