ನ್ಯಾಟಿಂಗ್ಹ್ಯಾಮ್(ಇಂಗ್ಲೆಂಡ್): ಕೇವಲ 42 ಎಸೆತಗಳಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಸ್ಪೋಟಕ ಶತಕ ಸಿಡಿಸಿದ್ರೂ, ಪಾಕ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ 31ರನ್ಗಳ ಸೋಲು ಕಂಡಿರುವ ಆಂಗ್ಲರ ಪಡೆ ಸರಣಿಯಲ್ಲಿ 1-0 ಅಂತರದ ಹಿನ್ನೆಡೆ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ತಂಡ ಬಾಬರ್ ಆಜಂ ಅವರ ಸ್ಫೋಟಕ 85ರನ್( 49 ಎಸೆತ) ಹಾಗೂ ವಿಕೆಟ್ ಕೀಪರ್ ರಿಜ್ವಾನ್ ಸಿಡಿಸಿದ 63ರನ್(41 ಎಸೆತ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಫಖಾರ್ ಜಮಾನ್ 26ರನ್(8 ಎಸೆತ), ಹಫೀಜ್ 24 ರನ್(10 ಎಸೆತ)ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ ಬೃಹತ್ 232ರನ್ಗಳಿಕೆ ಮಾಡಿತು.
233ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಆರಂಭದಲ್ಲೇ ಡೇವಿಡ್ ಮಲನ್(1)ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಬೈರ್ಸ್ಟೋ(11), ಮೊಯಿನ್ ಅಲಿ(1) ಕೂಡ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜಾಸನ್ ರಾಯ್(32)ರನ್ಗಳಿಸಿ ವಿಕೆಟ್ ಒಪ್ಪಿಸಿದರು. 82ರನ್ಗಳಿಕೆ ಮಾಡುವಷ್ಟರಲ್ಲಿ 4ವಿಕೆಟ್ ಕಳೆದುಕೊಂಡಿದ್ದ ಆಂಗ್ಲರ ಪಡೆಗೆ ಲಿಯಾಮ್ ಲಿವಿಂಗ್ಸ್ಟೋನ್ ಆಸರೆಯಾದರು.
ಸ್ಪೋಟಕ ಆಟ ಪ್ರದರ್ಶಿಸಿದ ಲಿಯಾಮ್ ಲಿವಿಂಗ್ಸ್ಟೋನ್
ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಿಯಾಮ್ ಲಿವಿಂಗ್ಸ್ಟೋನ್ ಕೇವಲ 43 ಎಸೆತಗಳಲ್ಲಿ 9 ಸಿಕ್ಸರ್, 6 ಬೌಂಡರಿ ಸೇರಿದಂತೆ 103ರನ್ಗಳಿಕೆ ಮಾಡಿದರು. ಕೇವಲ 17 ಎಸೆತಗಳಲ್ಲಿ 50ರನ್ಗಳಿಕೆ ಮಾಡಿ ಚುಟುಕು ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪರ ಅತಿ ಕಡಿಮೆ ಬೌಲಿಂಗ್ನಲ್ಲಿ ಅರ್ಧಶತಕ ಸಿಡಿಸಿರುವ ದಾಖಲೆ ಬರೆದ ಈ ಪ್ಲೇಯರ್ 42 ಎಸೆತಗಳಲ್ಲಿ ಶತಕ ಸಿಡಿಸಿ,ಇಂಗ್ಲೆಂಡ್ ಪರ ಟಿ-20 ಕ್ರಿಕೆಟ್ನಲ್ಲಿ ಅತಿ ವೇಗವಾಗಿ ಸೆಂಚುರಿ ಬಾರಿಸಿದ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬೇರೆ ಯಾವುದೇ ಪ್ಲೇಯರ್ಸ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ತಂಡ 19.2 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 201ರನ್ಗಳಿಕೆ ಮಾಡಿ, 31ರನ್ಗಳ ಸೋಲು ಕಂಡಿತು. ಪಾಕ್ ಪರ ಶಾಹಿನ್ ಆಫ್ರೀದಿ 3ವಿಕೆಟ್ ಪಡೆದು ಮಿಂಚಿದರು.