ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿಯಿಂದ ಇಂದು ನಡೆದ 90ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಸೇರಿದಂತೆ ಅನೇಕ ಮಹತ್ವದ ನಿರ್ಧಾರ ಕೈಗೊಂಡಿದೆ. ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಆಯ್ಕೆ ಆಗಿರುವುದರಿಂದ ತೆರವುಗೊಂಡಿದ್ದ ಎನ್ಸಿಎ ಸ್ಥಾನಕ್ಕೆ ಲಕ್ಷ್ಮಣ್ ಅವರನ್ನ ಆಯ್ಕೆ ಮಾಡಿದೆ. ಜೊತೆಗೆ ಅಂಡರ್-19 ವಿಶ್ವಕಪ್ ತಂಡದ ಜವಾಬ್ದಾರಿ ನೀಡಿದೆ.
ವಿವಿಎಸ್ ಲಕ್ಷ್ಮಣ್ ಜೊತೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿದ್ದ ಟ್ರಾಲಿ ಕೂಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಬೌಲಿಂಗ್ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಕೋಲ್ಕತ್ತಾದಲ್ಲಿ ಇಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ.
ಇದನ್ನೂ ಓದಿರಿ: ಕರ್ನಾಟಕ, ಗುಜರಾತ್ ಆಯ್ತು, ಇದೀಗ ಮಹಾರಾಷ್ಟ್ರದಲ್ಲೂ ಒಮಿಕ್ರಾನ್ ಪತ್ತೆ
ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಡಿಸೆಂಬರ್ 13ರಂದು ಎನ್ಸಿಎ ಮುಖ್ಯಸ್ಥರಾಗಿ ಸೇರಿಕೊಳ್ಳಲಿದ್ದು, ಅವರ ನೇಮಕಾತಿಗೆ ಬಿಸಿಸಿಐ ಸಾಮಾನ್ಯ ಸಭೆ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ ಲಕ್ಷ್ಮಣ್ ಈಗಾಗಲೇ ಸಹಿ ಮಾಡಿದ್ದು, ಐಸಿಸಿ ವಿಶ್ವಕಪ್ಗಾಗಿ ಅಂಡರ್-19 ತಂಡದೊಂದಿಗೆ ವೆಸ್ಟ್ ಇಂಡೀಸ್ ಇಂಡೀಸ್ ಪ್ರವಾಸ ಸಹ ಕೈಗೊಳ್ಳಲಿದ್ದಾರೆ.
ಜನವರಿ 2ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಔತಣಕೂಟಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಒಮಿಕ್ರಾನ್ ಕಾರಣ ಪ್ರವಾಸದ ಬಗ್ಗೆ ಯಾವುದೇ ರೀತಿಯ ಖಚಿತ ಮಾಹಿತಿ ಇಲ್ಲ. ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ 20 ಸದಸ್ಯರ ತಂಡ ಹಾಗೂ ನೆಟ್ ಬೌಲರ್ ರವಾನೆ ಮಾಡುವುದಾಗಿ ತಿಳಿಸಿದೆ.