ನವದೆಹಲಿ: ಕಳೆದ ಐಪಿಎಲ್ ಆವೃತ್ತಿಯಲ್ಲಿ ದಯನೀಯ ವೈಫಲ್ಯ ಕಂಡಿದ್ದ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಈ ಬಾರಿ ತಂಡದ ಬಲವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಅವರನ್ನು 2022ರ ಆವೃತ್ತಿಗೆ ತಂಡದ ತರಬೇತಿ ಸಿಬ್ಬಂದಿಯಾಗಿ ನೇಮಕ ಮಾಡಿಕೊಂಡಿದೆ.
ಕಳೆದ ಆವೃತ್ತಿಯಲ್ಲಿ ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿರುವ ಬ್ರಿಯಾನ್ ಲಾರಾ ಮುಂಬರುವ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಕೋಚ್ ಮತ್ತು ತಂತ್ರಗಾರಿಕೆ ಸಲಹೆಗಾರನಾಗಿ ಕೆಲಸ ಮಾಡಲಿದ್ದಾರೆ ಎಂದು ತನ್ನ ಸಾಮಾಜಿಕ ಜಾಲಾತಾಣದ ಅಧಿಕೃತ ಖಾತೆಯಲ್ಲಿ ಎಸ್ಆರ್ಹೆಚ್ ಪ್ರಕಟಿಸಿದೆ.
-
Introducing the new management/support staff of SRH for #IPL2022!
— SunRisers Hyderabad (@SunRisers) December 23, 2021 " class="align-text-top noRightClick twitterSection" data="
Orange Army, we are #ReadyToRise! 🧡@BrianLara #MuttiahMuralitharan @TomMoodyCricket @DaleSteyn62 #SimonKatich @hemangkbadani pic.twitter.com/Yhk17v5tb5
">Introducing the new management/support staff of SRH for #IPL2022!
— SunRisers Hyderabad (@SunRisers) December 23, 2021
Orange Army, we are #ReadyToRise! 🧡@BrianLara #MuttiahMuralitharan @TomMoodyCricket @DaleSteyn62 #SimonKatich @hemangkbadani pic.twitter.com/Yhk17v5tb5Introducing the new management/support staff of SRH for #IPL2022!
— SunRisers Hyderabad (@SunRisers) December 23, 2021
Orange Army, we are #ReadyToRise! 🧡@BrianLara #MuttiahMuralitharan @TomMoodyCricket @DaleSteyn62 #SimonKatich @hemangkbadani pic.twitter.com/Yhk17v5tb5
ಇನ್ನು ಕೆಲವು ಆವೃತ್ತಿಗಳಲ್ಲಿ ಹೈದರಾಬಾದ್ ತಂಡದಲ್ಲಿ ಆಡಿದ್ದ ಡೇಲ್ ಸ್ಟೇನ್ ಅವರನ್ನು ವೇಗದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಸ್ಟೇನ್ ಈ ವರ್ಷದ ಆರಂಭದಲ್ಲಿ ಎಲ್ಲ ಮಾದರಿಯಿಂದ ನಿವೃತ್ತಿ ಹೊಂದಿದ್ದರು. ಶ್ರೀಲಂಕಾದ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಸ್ಪಿನ್ ಬೌಲಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.
ಆಸ್ಟ್ರೇಲಿಯಾದ ಟ್ರೆವೆರ್ ಬೇಲಿಸ್ ಸನ್ರೈಸರ್ಸ್ ಮುಖ್ಯಕೋಚ್ ಹುದ್ದೆಯನ್ನು ತ್ಯಜಿಸಿದ್ದರಿಂದ, ಕಳೆದ ಆವೃತ್ತಿಯಲ್ಲಿ ಡೈರೆಕ್ಟರ್ ಆಫ್ ಕ್ರಿಕೆಟರ್ ಆಗಿದ್ದ ಟಾಮ್ ಮೂಡಿ ಮತ್ತೆ ಮುಖ್ಯ ಕೋಚ್ ಹುದ್ದೆಗೆ ಮರಳಿದ್ದಾರೆ. ಭಾರತದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ ಫೀಲ್ಡಿಂಗ್ ಕೋಚ್ , ಆರ್ಸಿಬಿ ಮಾಜಿ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಎಸ್ಆರ್ಹೆಚ್ನ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಸನ್ರೈಸರ್ಸ್ ಮೆಗಾ ಹರಾಜಿಗೂ ಮುನ್ನ ಮೂರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ನಾಯಕ ಕೇನ್ ವಿಲಿಯಮ್ಸನ್ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಯುವ ಆಟಗಾರರಾದ ಉಮ್ರಾನ್ ಮಲಿಕ್ ಮತ್ತು ಅದ್ಭುಲ್ ಸಮದ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.