ಢಾಕಾ(ಬಾಂಗ್ಲಾದೇಶ): ಆತಿಥೇಯ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾ ತಂಡದ ಬ್ಯಾಟರ್ ಕುಶಲ್ ಮೆಂಡಿಸ್ ದಿಢೀರ್ ಆಗಿ ಕುಸಿದು ಬಿದ್ದಿದ್ದಾರೆ. ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣವೇ ಅವರನ್ನು ಢಾಕಾ ಆಸ್ಪತ್ರೆಗೆ ದಾಖಲು ಮಾಡಿ, ಎದೆ ಸ್ಕ್ಯಾನ್ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ಭೋಜನ ವಿರಾಮಕ್ಕೆ ವಿಶ್ರಾಂತಿ ನೀಡಲು ಕೇವಲ ಒಂದು ಓವರ್ ಬಾಕಿ ಇರುವಾಗ ಈ ಘಟನೆ ನಡೆದಿದೆ.
-
Kusal Mendis left field holding his chest and has been hospitalized in Dhaka,this is scary hope he's ok#BANvsSL pic.twitter.com/BZLjoZuX7s
— Robin Saroy (@RobinSaroy2002) May 23, 2022 " class="align-text-top noRightClick twitterSection" data="
">Kusal Mendis left field holding his chest and has been hospitalized in Dhaka,this is scary hope he's ok#BANvsSL pic.twitter.com/BZLjoZuX7s
— Robin Saroy (@RobinSaroy2002) May 23, 2022Kusal Mendis left field holding his chest and has been hospitalized in Dhaka,this is scary hope he's ok#BANvsSL pic.twitter.com/BZLjoZuX7s
— Robin Saroy (@RobinSaroy2002) May 23, 2022
ಢಾಕಾದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ECG ಮಾಡಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಿರ್ಜಲೀಕರಣ ಅಥವಾ ಸ್ನಾಯು ಸೆಳೆತದ ಸಮಸ್ಯೆಯಿಂದ ಮೆಂಡಿಸ್ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಅಸ್ವಸ್ಥಗೊಂಡು ಮೈದಾನದಲ್ಲಿ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕುಶಲ್ ಮೆಂಡಿಸ್ ಅವರ ಮೇಲೆ ಲಂಕಾ ಕ್ರಿಕೆಟ್ ತಂಡದ ಮ್ಯಾನೇಜರ್ ಮಹಿಂದಾ ಹಲಂಗೋಡ ನಿಗಾ ವಹಿಸಿದ್ದಾರೆ.
ಆಗಿದ್ದೇನು? : ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ 23ನೇ ಓವರ್ನಲ್ಲಿ ಮೆಂಡಿಸ್ ದಿಢೀರ್ ಆಗಿ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಹೀಗಾಗಿ, ಎದೆ ಹಿಡಿದುಕೊಂಡೇ ಮೈದಾನವನ್ನು ತೊರೆದಿದ್ದಾರೆ. ತಕ್ಷಣವೇ ಅವರನ್ನ ಢಾಕಾ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂದಿನ ಎಷ್ಟು ಗಂಟೆಗಳ ಕಾಲ ಅವರು ಆಸ್ಪತ್ರೆಯಲ್ಲಿರಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಕುಶಲ್ ಮೆಂಡಿಸ್ ಸ್ಥಾನಕ್ಕೆ ಸದ್ಯ ಕಮಿಂದು ಮೆಂಡಿಸ್ ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಕಾರ್ಯನಿರ್ವಹಿಸುತ್ತಿದ್ದಾರೆ.