ಭಾರತ್ಪುರ: ಭಾರತ್‌ಪುರದ ಉವಾರ್ ಗ್ರಾಮದ 4 ವರ್ಷದ ಬಾಲಕ ಕುನಾಲ್ ತನ್ನ ಪ್ರತಿಭೆಯಿಂದಾಗಿ ಭಾರೀ ಚರ್ಚೆಯಲ್ಲಿದ್ದಾನೆ. ಕೇವಲ ತನ್ನ ನಾಲ್ಕನೇ ವಯಸ್ಸಿನಲ್ಲಿ ಉತ್ತಮವಾಗಿ ಕ್ರಿಕೆಟ್ ಆಡುತ್ತಿದ್ದು, ಎದುರಾಳಿಗಳನ್ನು ಸಹ ಸೋಲಿಸುತ್ತಾನೆ. ಸಂಪೂರ್ಣ ತರಬೇತಿ ಇಲ್ಲದೇ ಈ ಮಗು ಇಷ್ಟೊಂದು ಉತ್ತಮವಾಗಿ ಕ್ರಿಕೆಟ್ ಆಡುತ್ತಿದೆ. ಇದು ದೇವರು ಕೊಟ್ಟ ವರ ಎಂದೇ ಹೇಳಬಹುದೆಂದು ಕುನಾಲ್ನ ಕ್ರಿಕೆಟ್ ಕೋಚ್ ಹೇಳಿದ್ದಾರೆ.
ಕುನಾಲ್ ಸೊಗರ್ವಾಲ್ ಅವರಿಗೆ ಜಿಲ್ಲಾ ಕ್ರಿಕೆಟ್ ಸಂಘದ ಕಾರ್ಯದರ್ಶಿ ಶತ್ರುಘನ್ ತಿವಾರಿ ಅವರು ಕೇವಲ 4 ತಿಂಗಳು ತರಬೇತಿ ನೀಡಿದ್ದಾರೆ. ಆದರೆ ಮಗು ಕ್ರಿಕೆಟ್ನ ಎಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡಿದೆ. ಕುನಾಲ್ಗೆ ಈಗಾಗಲೇ ಕ್ರಿಕೆಟ್ ಆಡಲು ತಿಳಿದಿದೆ. ಕ್ರಿಕೆಟ್ಗಾಗಿಯೇ, ಕ್ರಿಕೆಟ್ ಆಡಲೆಂದೇ ಈ ಮಗು ಜನಿಸಿದೆ. ಕುನಾಲ್ ಭಾರತ್ಪುರ ಮಾತ್ರವಲ್ಲದೇ ಭಾರತದ ಅತ್ಯಂತ ಕಿರಿಯ ಆಟಗಾರ ಎಂದು ಶತ್ರುಘನ್ ತಿವಾರಿ ಹೇಳುತ್ತಾರೆ.
ಕುನಾಲ್ ಸುಮಾರು 2 ವರ್ಷ ವಯಸ್ಸಿನವನಾಗಿದ್ದಾಗ ತನ್ನ ಹಳ್ಳಿಯ ಇತರೆ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿದ್ದ ಎಂದು ಕುನಾಲ್ನ ತಂದೆ ತಿಳಿಸಿದ್ದಾರೆ. ಒಂದು ದಿನ ಅವನು ಕ್ರಿಕೆಟ್ ಆಡುತ್ತಿರುವುದನ್ನು ನೋಡಿದಾಗ, ಅವನು ಕ್ರಿಕೆಟ್‌ನಲ್ಲಿ ಬಹಳ ಸಾಧನೆ ಮಾಡಬಹುದು ಎಂದೆನಿಸಿತು. ಅಂದಿನಿಂದ ಆತನಿಗೆ ಬ್ಯಾಟ್ ಮತ್ತು ಚೆಂಡನ್ನು ಕೊಟ್ಟು ಆಡಲು ಸ್ಫೂರ್ತಿ ನೀಡುವ ಮೂಲಕ ಕುನಾಲ್ನ ಕ್ರಿಕೆಟ್ ಅಭ್ಯಾಸ ಪ್ರಾರಂಭವಾಯಿತು ಎಂದು ತಂದೆ ತಿಳಿಸಿದರು.
ಪ್ರಸ್ತುತ, ಕುನಾಲ್ಗೆ ನಾಲ್ಕು ವರ್ಷ. ಒಂದು ವರ್ಷದ ಹಿಂದೆ ಕುನಾಲ್ನ ತಂದೆ ಮಗನನ್ನು ಜಿಲ್ಲಾ ಕ್ರಿಕೆಟ್ ಸಂಘದ ಕಾರ್ಯದರ್ಶಿ ಶತ್ರುಘನ್ ತಿವಾರಿ ಅವರ ಬಳಿಗೆ ಕುನಾಲ್ ಅನ್ನು ಕರೆತಂದು ಕುನಾಲ್ ಕ್ರಿಕೆಟ್ ಆಡುವ ವಿಡಿಯೋಗಳನ್ನು ತೋರಿಸಿದರು. ಶತ್ರುಘನ್ ತಿವಾರಿ ಕುನಾಲ್ನ ಪ್ರತಿಭೆಯನ್ನು ನೋಡಿ ಬೆರಗಾದರು. ನಂತರ ಕುನಾಲ್ಗೆ ತರಬೇತಿ ನೀಡಲು ಪ್ರಾರಂಭಿಸಿದರು.
ಇದನ್ನೂ ಓದಿ: WTC ಫೈನಲ್: ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಹೇಳಿದ್ರು ಈ ಮಾತು!
ಅವನಿಗೆ ಕೇವಲ 4 ತಿಂಗಳು ತರಬೇತಿ ನೀಡಲಾಗಿದೆ. ಆದರೆ ಕೇವಲ ನಾಲ್ಕೈದು ತಿಂಗಳ ತರಬೇತಿಯಲ್ಲಿ ಇಷ್ಟು ಚಿಕ್ಕ ಮಗು ಹೇಗೆ ಉತ್ತಮ ಕ್ರಿಕೆಟ್ ಕಲಿಯುತ್ತದೆ ಎಂದು ಸ್ವತಃ ನಂಬಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕುನಾಲ್ ಭಾರತದ ಪರ ಆಡಲಿದ್ದಾರೆ ಎಂಬುದು ಖಚಿತ. ಸದ್ಯ ಅವರಿಗೆ ಎರಡು-ಮೂರು ವರ್ಷಗಳ ಕಾಲ ಉತ್ತಮ ಕ್ರಿಕೆಟ್ ಅಭ್ಯಾಸ ನೀಡಲಾಗುವುದು ಎಂದು ಶತ್ರುಘನ್ ತಿವಾರಿ ಹೇಳಿದರು.
ಧೋನಿ ಆಗುವ ಕನಸು
ಮಹೇಂದ್ರ ಸಿಂಗ್ ಧೋನಿ ಆಗಬೇಕೆಂಬುದು ಕುನಾಲ್ ಮತ್ತು ಅವರ ತಂದೆಯ ಕನಸು. ಕುನಾಲ್ ಅವರ ತಂದೆ ಖಾಸಗಿ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಕರಾಗಿದ್ದಾರೆ. ಜತೆಗೆ ಕೃಷಿ ಕೂಡ ಮಾಡುತ್ತಾರೆ. ಕುನಾಲ್ ಅವರ ಕಿರಿಯ ಮಗ. ತನ್ನ ಮಗನನ್ನು ಉತ್ತಮ ಕ್ರಿಕೆಟಿಗನನ್ನಾಗಿ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ ಎಂದು ತಿಳಿಸಿದ್ದಾರೆ.