ETV Bharat / sports

ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್​ ಮೊಣಕಾಲು ಸರ್ಜರಿ ಯಶಸ್ವಿ - IPL

ಇದು ಅವರಿಗೆ ದೊಡ್ಡ ಹೊಡೆತವಾಗಲಿದೆ. ಯಾಕೆಂದರೆ, ಯಾದವ್​ ದೇಶಿ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಮರಳುವ ಯೋಜನೆಯಲ್ಲಿದ್ದರು. ಇನ್ನು, 2021ರ ಐಪಿಎಲ್​ನಲ್ಲೂ ಅವರು ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ವರುಣ್​ ಚಕ್ರವರ್ತಿ ಭಾರತ ತಂಡದಲ್ಲಿ ಅವಕಾಶ ಪಡೆದ ನಂತರ ಕೆಕೆಆರ್​ ಅವರನ್ನೇ ತಂಡದ ಪ್ರಧಾನ ಸ್ಪಿನ್​ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ..

Kuldeep Yadav undergoes successful knee surgery
ಕುಲ್ದೀಪ್ ಯಾದವ್​
author img

By

Published : Sep 29, 2021, 5:40 PM IST

ಮುಂಬೈ : ಭಾರತ ಸ್ಪಿನ್​​ ಬೌಲರ್ ಕುಲ್ದೀಪ್ ಯಾದವ್​ ಬುಧವಾರ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಬಬಲ್​ ತ್ಯಜಿಸಿ ತವರಿಗೆ ಮರಳಿದ್ದ ಯಾದವ್​ ಟ್ವಿಟರ್​ನಲ್ಲಿ ತಾನು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದೆ ಮತ್ತು ಚೇತರಿಕೆಯ ಹಾದಿ ಈಗಷ್ಟೇ ಆರಂಭವಾಗಿದೆ. ನನಗೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾನದಗಳು. ಈಗ ನನ್ನ ಗಮನ ಪುನಶ್ಚೇತನವನ್ನು ಉತ್ತಮವಾಗಿ ಪೂರ್ಣಗೊಳಿಸುವ ಕಡೆಗಿದೆ ಮತ್ತು ನಾನು ಪ್ರೀತಿಸುವುದನ್ನು ಆದಷ್ಟು ಬೇಗ ಮಾಡುತ್ತೇನೆ ಎಂದು 26 ವರ್ಷದ ಯಾದವ್​ ಶಸ್ತ್ರಚಿಕಿತ್ಸೆಯ ಬಳಿಕ ತೆಗೆದ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಮೊಣಕಾಲಿನ ಶಸ್ತ್ರಚಿಕಿತ್ಸೆ ಮತ್ತು ಪುನಶ್ಚೇತನಕ್ಕೆ ಒಳಗಾಗಲಿರುವ ಯಾದವ್ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗಿದೆ. ಅಕ್ಟೋಬರ್ 30ರಿಂದ ಮುಷ್ತಾಕ್ ಅಲಿ ಟ್ರೋಫಿಯ ಮೂಲಕ ಆರಂಭವಾಗಲಿರುವ ದೇಶೀಯ ಋತುವನ್ನು ತಪ್ಪಿಸಿಕೊಳ್ಳಲಿದ್ದಾರೆ.

  • Surgery was a success and the road to recovery has just begun. Thank you so much to everyone for your amazing support. The focus is now to complete my rehab well and be back on the pitch doing what I love as soon as possible. ♥️🙏🏻 pic.twitter.com/364k9WWDb3

    — Kuldeep yadav (@imkuldeep18) September 29, 2021 " class="align-text-top noRightClick twitterSection" data=" ">

ಇದು ಅವರಿಗೆ ದೊಡ್ಡ ಹೊಡೆತವಾಗಲಿದೆ. ಯಾಕೆಂದರೆ, ಯಾದವ್​ ದೇಶಿ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಮರಳುವ ಯೋಜನೆಯಲ್ಲಿದ್ದರು. ಇನ್ನು, 2021ರ ಐಪಿಎಲ್​ನಲ್ಲೂ ಅವರು ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ವರುಣ್​ ಚಕ್ರವರ್ತಿ ಭಾರತ ತಂಡದಲ್ಲಿ ಅವಕಾಶ ಪಡೆದ ನಂತರ ಕೆಕೆಆರ್​ ಅವರನ್ನೇ ತಂಡದ ಪ್ರಧಾನ ಸ್ಪಿನ್​ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

2019ರ ಏಕದಿನ ವಿಶ್ವಕಪ್ ಭಾಗವಾಗಿದ್ದ ಕುಲ್ದೀಪ್, ಚಹಾಲ್​ರೊಂದಿಗೆ ಭಾರತ ತಂಡದಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಜೊತೆ ಅಸಾಧಾರಣ ಜೋಡಿಯಾಗಿ ಮೆರೆದಿದ್ದರು. 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 2ನೇ ಹ್ಯಾಟ್ರಿಕ್ ಪಡೆದ ಹೊರತಾಗಿಯೂ ಅವರು ಭಾರತ ತಂಡದಿಂದ ಹೊರ ಬಿದ್ದಿದ್ದಾರೆ. ಜೊತೆಗೆ ಬಿಸಿಸಿಐ ಕೇಂದ್ರ ಒಪ್ಪಂದಗಳ ಪಟ್ಟಿಯಲ್ಲಿ ಎ ಗ್ರೇಡ್​ನಿಂದ ಸಿ ಗ್ರೇಡ್​ ಗೆ ಹಿಂಬಡ್ತಿ ಪಡೆದಿದ್ದರು.

ಇದನ್ನು ಓದಿ:ಮುಂದಿನ 2 ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗಬೇಕು: ಗವಾಸ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.