ಕ್ರಿಕೆಟ್ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಎಂದಾಗ ತಕ್ಷಣಕ್ಕೆ ನೆನಪಾಗುವುದೇ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ 6x6 ಹೊಡೆದು ಕ್ರಿಕೆಟ್ ಪಾಠ ಮಾಡಿದ್ದರು. ಇದಾದ ಬಳಿಕ ವೆಸ್ಟ್ ಇಂಡೀಸ್ನ ಕಿರನ್ ಪೊಲಾರ್ಡ್ ಕೂಡ ಇದೇ ಸಾಧನೆಯನ್ನು ಮಾಡಿದ್ದರು.
ಇದೀಗ ಯುವ ಆಟಗಾರನೊಬ್ಬ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದಾರೆ. ಅದೂ ಟಿ-10 ಲೀಗ್ನಲ್ಲಿ ಎಂಬುದು ವಿಶೇಷ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಆ ಸಾಧಕನ ಹೆಸರು ಕೃಷ್ಣ ಪಾಂಡೆ.
-
6️⃣6️⃣6️⃣6️⃣6️⃣6️⃣
— FanCode (@FanCode) June 4, 2022 " class="align-text-top noRightClick twitterSection" data="
He has done the unthinkable! #KrishnaPandey shows what's possible with his heart-stirring hits!
Watch the Pondicherry T10 Highlights, exclusively on #FanCode 👉 https://t.co/GMKvSZqfrR pic.twitter.com/jfafcU8qRW
">6️⃣6️⃣6️⃣6️⃣6️⃣6️⃣
— FanCode (@FanCode) June 4, 2022
He has done the unthinkable! #KrishnaPandey shows what's possible with his heart-stirring hits!
Watch the Pondicherry T10 Highlights, exclusively on #FanCode 👉 https://t.co/GMKvSZqfrR pic.twitter.com/jfafcU8qRW6️⃣6️⃣6️⃣6️⃣6️⃣6️⃣
— FanCode (@FanCode) June 4, 2022
He has done the unthinkable! #KrishnaPandey shows what's possible with his heart-stirring hits!
Watch the Pondicherry T10 Highlights, exclusively on #FanCode 👉 https://t.co/GMKvSZqfrR pic.twitter.com/jfafcU8qRW
6 ಸಿಕ್ಸರ್ ಸಿಡಿಸಿದ ಕೃಷ್ಣ ಪಾಂಡೆ: ಪುದುಚೇರಿಯಲ್ಲಿ ನಡೆದ ಟಿ-10 ಲೀಗ್ನಲ್ಲಿ ಪೆಟ್ರಿಯಾಟ್ಸ್ ತಂಡದ ಬಲಗೈ ದಾಂಡಿಗ ಕೃಷ್ಣ ಪಾಂಡೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ. ಶನಿವಾರ ನಡೆದ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೃಷ್ಣ ಪಾಂಡೆ ಬೌಲರ್ ನಿತೇಶ್ ಠಾಕೂರ್ ಎಸೆದ ಓವರ್ನಲ್ಲಿ ಮೈದಾನದಲ್ಲಿ ಸಿಕ್ಸರ್ ಮಳೆ ಸುರಿಸಿದರು. ಸತತ 6 ಎಸೆತಗಳಲ್ಲಿ ಬೌಂಡರಿ ಗೆರೆ ದಾಟಿಸಿದರು. ಇದಲ್ಲದೇ, ಪಂದ್ಯದಲ್ಲಿ ಕೇವಲ 19 ಎಸೆತಗಳನ್ನು ಆಡಿದ ಕೃಷ್ಣ ಪಾಂಡೆ ಸತತ 12 ಸಿಕ್ಸರ್ ಬಾರಿಸಿ ಒಟ್ಟು 83 ರನ್ ಗಳಿಸಿದರು.
ಯುವ ಆಟಗಾರನ ಸಿಕ್ಸರ್ ಅಬ್ಬರ ಎಷ್ಟಿತ್ತೆಂದರೆ, 19 ಎಸೆತಗಳಲ್ಲಿ ಕೃಷ್ಣ ಪಾಂಡೆ ಬಾರಿಸಿದ್ದು 12 ಸಿಕ್ಸರ್. ಸಿಕ್ಸರ್ಗಳಿಂದಲೇ ಈತ 72 ರನ್ ಬಾರಿಸಿದ್ದಾನೆ. ಪಾಂಡೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆದಾಗ್ಯೂ, ಪೆಟ್ರಿಯಾಟ್ಸ್ ತಂಡ ಪಂದ್ಯವನ್ನು 4 ರನ್‌ಗಳಿಂದ ಕೈಚೆಲ್ಲಿದೆ.
ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ 2007ರ ವಿಶ್ವಕಪ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅತಿವೇಗದ ದಾಖಲೆ ಮಾಡಿದ್ದರು. ಇದೀಗ ಕೃಷ್ಣ ಪಾಂಡೆ ಆ ದಾಖಲೆಯನ್ನು ಮೀರಿಸಿದ್ದಾರೆ.