ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡ ಮುಖಾಮುಖಿಯಾಗಲಿವೆ. ಟಾಸ್ ಗೆದ್ದಿರುವ ಪಂಜಾಬ್ ಬೌಲಿಂಗ್ ಆಯ್ದುಕೊಂಡಿದೆ. ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳುವ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ಪ್ರಮುಖವಾಗಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ. ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಎರಡೂ ತಂಡಗಳಿಗೆ ಅನಿವಾರ್ಯ. ಹೀಗಾಗಿ, ಹೊಸ ಯೋಜನೆಗಳೊಂದಿಗೆ ತಂಡಗಳು ಮೈದಾನಕ್ಕಿಳಿದಿವೆ.
-
🚨 Toss Update from Dubai 🚨@PunjabKingsIPL have elected to bowl against @KKRiders. #VIVOIPL #KKRvPBKS
— IndianPremierLeague (@IPL) October 1, 2021 " class="align-text-top noRightClick twitterSection" data="
Follow the match 👉 https://t.co/lUTQhNzjsM pic.twitter.com/gOGUHuZ6AM
">🚨 Toss Update from Dubai 🚨@PunjabKingsIPL have elected to bowl against @KKRiders. #VIVOIPL #KKRvPBKS
— IndianPremierLeague (@IPL) October 1, 2021
Follow the match 👉 https://t.co/lUTQhNzjsM pic.twitter.com/gOGUHuZ6AM🚨 Toss Update from Dubai 🚨@PunjabKingsIPL have elected to bowl against @KKRiders. #VIVOIPL #KKRvPBKS
— IndianPremierLeague (@IPL) October 1, 2021
Follow the match 👉 https://t.co/lUTQhNzjsM pic.twitter.com/gOGUHuZ6AM
ಪಾಯಿಂಟ್ಸ್ ಪಟ್ಟಿಯಲ್ಲಿ ಕೋಲ್ಕತ್ತಾ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ 6ನೇ ಸ್ಥಾನದಲ್ಲಿದೆ. ಪ್ಲೇ-ಆಫ್ ರೇಸ್ನಲ್ಲಿ ಉಳಿಯಬೇಕಾದರೆ ಕನ್ನಡಿಗ ರಾಹುಲ್ ನೇತೃತ್ವದ ಪಂಜಾಬ್ ತಂಡ ಉಳಿದ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸುವುದರ ಜತೆಗೆ ಉತ್ತಮ ರನ್ ರೇಟ್ ಸಂಪಾದಿಸಬೇಕಿದೆ.
-
A round of applause for Tim Seifert, who will be making his debut for @KKRiders 👏 👏#VIVOIPL #KKRvPBKS pic.twitter.com/oxHs3Z3I2L
— IndianPremierLeague (@IPL) October 1, 2021 " class="align-text-top noRightClick twitterSection" data="
">A round of applause for Tim Seifert, who will be making his debut for @KKRiders 👏 👏#VIVOIPL #KKRvPBKS pic.twitter.com/oxHs3Z3I2L
— IndianPremierLeague (@IPL) October 1, 2021A round of applause for Tim Seifert, who will be making his debut for @KKRiders 👏 👏#VIVOIPL #KKRvPBKS pic.twitter.com/oxHs3Z3I2L
— IndianPremierLeague (@IPL) October 1, 2021
11 ಪಂದ್ಯಳಿಂದ 10 ಅಂಕಗಳಿಕೆ ಮಾಡಿರುವ ಕೆಕೆಆರ್ ಉತ್ತಮ ನೆಟ್ ರನ್ರೇಟ್ ಹೊಂದಿದೆ. ಆದರೆ, ಮುಂಬೈ ಇಂಡಿಯನ್ಸ್ ಹೊರ ಹಾಕಿ ಮುಂದಿನ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಉಳಿದಿರುವ 3 ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ.
ನಿರ್ಣಾಯಕ ಪಂದ್ಯಕ್ಕಾಗಿ ಉಭಯ ತಂಡಗಳು ಮಹತ್ವದ ಬದಲಾವಣೆ ಮಾಡಿಕೊಂಡಿದ್ದು, ಕೆಲ ಹೊಸ ಪ್ಲೇಯರ್ಸ್ಗಳಿಗೆ ಮಣೆ ಹಾಕಿವೆ. ಕೋಲ್ಕತ್ತಾ ತಂಡ ಲುಕಿ ಫರ್ಗ್ಯೂಸನ್ ಸ್ಥಾನಕ್ಕೆ ಸೀಫರ್ಟ್ ಹಾಗೂ ಸಂದೀಪ್ ವಾರಿಯರ್ ಸ್ಥಾನಕ್ಕೆ ಶಿವಂ ಮಾವಿಗೆ ಅವಕಾಶ ನೀಡಿದೆ. ಪಂಜಾಬ್ ತಂಡದಲ್ಲಿ ಮನ್ದೀಪ್ ಸಿಂಗ್ ಸ್ಥಾನಕ್ಕೆ ಮಯಾಂಕ್ ಹಾಗೂ ಹರ್ಪ್ರೀತ್ ಬ್ರಾರ್ ಜಾಗಕ್ಕೆ ಶಾರುಖ್ ಖಾನ್ ಬಂದಿದ್ದು, ತಂಡದಿಂದ ಹೊರಬಿದ್ದಿರುವ ಗೇಲ್ ಸ್ಥಾನಕ್ಕೆ ಫಾಬಿಯನ್ ಅಲೆನ್ ಬಂದಿದ್ದಾರೆ.
-
Huddle talks ✅#VIVOIPL #KKRvPBKS pic.twitter.com/RQf0t3XeZ6
— IndianPremierLeague (@IPL) October 1, 2021 " class="align-text-top noRightClick twitterSection" data="
">Huddle talks ✅#VIVOIPL #KKRvPBKS pic.twitter.com/RQf0t3XeZ6
— IndianPremierLeague (@IPL) October 1, 2021Huddle talks ✅#VIVOIPL #KKRvPBKS pic.twitter.com/RQf0t3XeZ6
— IndianPremierLeague (@IPL) October 1, 2021
ಆಡುವ 11ರ ಬಳಗ ಇಂತಿದೆ:
ಪಂಜಾಬ್ ಕಿಂಗ್ಸ್: ಕೆ.ಎಲ್.ರಾಹುಲ್( ಕ್ಯಾ/ವಿ.ಕೀ), ಮಯಾಂಕ್ ಅಗರವಾಲ್, ಮಾರ್ಕ್ರಾಮ್, ಪೂರನ್, ಶಾರುಖ್ ಖಾನ್, ದೀಪಕ್ ಹೂಡಾ, ಫಾಬಿಯನ್ ಅಲಿನ್, ನಾಥನ್ ಇಲ್ಸ್, ಮೊಹಮ್ಮದ್ ಶಮಿ, ರವಿ ಬಿಶ್ನೋಯಿ ಹಾಗು ಅರ್ಷದೀಪ್ ಸಿಂಗ್
ಕೋಲ್ಕತ್ತಾ: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್(ಕ್ಯಾ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್(ವಿ.ಕೀ), ಥಿಮ್ ಸೀಫರ್ಟ್, ಸುನಿಲ್ ನರೈನ್, ಶಿವಂ ಮಾವಿ, ಥಿಮ್ ಸೌಥಿ ಹಾಗು ವರುಣ್ ಚಕ್ರವರ್ತಿ.