ETV Bharat / sports

ಸೌಥಿ-ರಸೆಲ್ ಮಾರಕ ದಾಳಿ: ಗುಜರಾತ್​ ತಂಡವನ್ನು156ಕ್ಕೆ ನಿಯಂತ್ರಿಸಿದ ಕೆಕೆಆರ್​ - ಐಪಿಎಲ್ ಲೇಟೆಸ್ಟ್ ಅಪ್​ಡೇಟ್

ಆ್ಯಂಡ್ರೆ ರಸೆಲ್ ಮತ್ತು ಟಿಮ್ ಸೌಥಿ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್ ಎದುರಾಳಿ ಟೈಟನ್ಸ್ ತಂಡವನ್ನು ಕೇವಲ 156 ರನ್​ಗಳಿಗೆ ಕಟ್ಟಿಹಾಕಿದೆ.

Kolkata Knight Riders vs Gujarat Titans
Kolkata Knight Riders vs Gujarat Titans
author img

By

Published : Apr 23, 2022, 3:18 PM IST

Updated : Apr 23, 2022, 5:35 PM IST

ಮುಂಬೈ:ನಾಯಕ ಹಾರ್ದಿಕ್ ಪಾಂಡ್ಯರ ಅರ್ಧಶತಕದ ಹೊರತಾಗಿಯೂ ಗುಜರಾತ್ ಟೈಟನ್ಸ್​ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್​ಗಳಿಸಿದೆ.

ಗುಜರಾತ್ ಟೈಟನ್ಸ್​ ನಾಯಕ ಹಾರ್ದಿಕ್ ಪಾಂಡ್ಯ 49 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್​ಗಳ ಸಹಿತ 67 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರೆ, ವೃಧ್ದಿಮಾನ್ ಸಹಾ 25 ಮತ್ತು ಡೇವಿಡ್ ಮಿಲ್ಲರ್​ 27 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೈಟನ್ಸ್​ಗೆ 7 ರನ್​ಗಳಿಸಿದ್ದ ಶುಬ್ಮನ್​ ಗಿಲ್​ ವಿಕೆಟ್​ ಪಡೆಯುವ ಮೂಲಕ ಸೌಥಿ ಮೊದಲ ಆಘಾತ ನೀಡಿದರು. ಆದರೆ 2ನೇ ವಿಕೆಟ್​ಗೆ ಒಂದಾದ ಹಾರ್ದಿಕ್ ಮತ್ತು ಸಹಾ 75 ರನ್​ಗಳ ಜೊತೆಯಾಟ ನೀಡಿದರು. ಯಾವುದೇ ಹಂತದಲ್ಲಿ ಟಿ20ಗೆ ತಕ್ಕಂತೆ ಬ್ಯಾಟ್​ ಬೀಸದ ಸಹಾ 25 ಎಸೆತಗಳಲ್ಲಿ 25 ರನ್​ ಸಿಡಿಸಿ ಉಮೇಶ್​ ಯಾದವ್​ಗೆ ವಿಕೆಟ್ ಒಪ್ಪಿಸಿದರು.

3ನೇ ವಿಕೆಟ್​ ಡೇವಿಡ್​ ಮಿಲ್ಲರ್ ಮತ್ತು ಪಾಂಡ್ಯ 23 ಎಸೆತಗಳಲ್ಲಿ 50 ರನ್​ ಸೇರಿಸಿ ಬೃಹತ್​ ಮೊತ್ತದ ಭರವಸೆ ಮೂಡಿಸಿದ್ದರು. ಆದರೆ 20 ಎಸೆತಗಳಲ್ಲಿ 27 ರನ್​ಗಳಿಸಿದ್ದ ಮಿಲ್ಲರ್​ ಶಿವಂ ಮಾವಿಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಗುಜರಾತ್ ಪತನ ಆರಂಭವಾಯಿತು. ನಂತರದ ಓವರ್​ ಅಂತರದಲ್ಲಿ 67 ರನ್​ಗಳಿಸಿದ್ದ ಪಾಂಡ್ಯ ಮತ್ತು ಕಳೆದ ಪಂದ್ಯದ ಹೀರೋ ರಸೆಲ್ ಒಂದೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು.

ರಸೆಲ್ ಎಸೆದ 20ನೇ ಓವರ್​​​ನಲ್ಲಿ ಗುಜರಾತ್ ಟೈಟನ್ಸ್​ 5 ರನ್​ಗಳಿಸಿ 4 ವಿಕೆಟ್ ಕಳೆದುಕೊಂಡಿತು. ಅಭಿನವ್ ಮನೋಹರ್(2),ಲಾಕಿ ಫರ್ಗುಸನ್(0), ತೆವಾಟಿಯಾ(17) ಮತ್ತು ಯಶ್​ ದಯಾಳ್​ ಖಾತೆ ತೆರೆಯದೆ ರಸೆಲ್​ಗೆ ವಿಕೆಟ್ ಒಪ್ಪಿಸಿದರು.

ಕೆಕೆಆರ್​ ಆರ ಟಿಮ್ ಸೌಥಿ 24ಕ್ಕೆ3 ಮತ್ತು ಆ್ಯಂಡ್ರೆ ರಸೆಲ್ ಒಂದು ಓವರ್​ನಲ್ಲಿ 5 ರನ್​ ನೀಡಿ 4 ವಿಕೆಟ್ ಪಡೆದರು. ಶಿವಂ ಮಾವಿ ಮತ್ತು 36ಕ್ಕೆ 1 ಮತ್ತು ಉಮೇಶ್ ಯಾದವ್​ 31ಕ್ಕೆ 1 ವಿಕೆಟ್ ಪಡೆದರು.

ಟಾಸ್​ ಅಪ್​ಡೇಟ್​: ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್ ​ವಿರುದ್ಧ ಟಾಸ್​ ಗೆದ್ದ ಗುಜರಾತ್ ಟೈಟನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದೇ ಮೊದಲ ಬಾರಿಗೆ ಈ ಐಪಿಎಲ್​ನಲ್ಲಿ ಟಾಸ್​ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯದಿಂದ ಬಳಲಿ ವಿಶ್ರಾಂತಿ ಪಡೆದಿದ್ದರು, ಅವರ ವಾಪಸಾತಿಯಿಂದ ವಿಜಯ ಶಂಕರ್​ ತಂಡದಿಂದ ಹೊರಬಿದ್ದಿದ್ದಾರೆ. ಇತ್ತ ಕೆಕೆಆರ್​ ತಂಡದಲ್ಲಿ ಗಾಯ ಸಂಭವಿಸಿದ ಕಾರಣ ಕೆಲವು ಬದಲಾವಣೆಯಾಗಿವೆ. ಪ್ಯಾಟ್​ ಕಮಿನ್ಸ್​ ಬದಲಿಗೆ ಟಿಮ್ ಸೌಥಿ, ಶೆಲ್ಡಾನ್ ಜಾಕ್ಸನ್​ ಬದಲಿಗೆ ಸ್ಯಾಮ್ ಬಿಲ್ಲಿಂಗ್ಸ್​ ಮತ್ತು ಫಿಂಚ್ ಬದಲಿಗೆ ರಿಂಕು ಸಿಂಗ್​ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್), ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ (ವಿಕೀ), ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ

Last Updated : Apr 23, 2022, 5:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.