ಪಾರ್ಲ್(ದ.ಆಫ್ರಿಕಾ) : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ರನ್ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್ನಲ್ಲಿ ವಿದೇಶದಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಎಂಬ ವಿಶೇಷ ದಾಖಲೆಗೆ ಪಾತ್ರರಾದರು.
ನಾಯಕತ್ವ ಕಳೆದುಕೊಂಡ ನಂತರ ಮೊದಲ ಪಂದ್ಯವನ್ನಾಡುತ್ತಿರುವ ಕೊಹ್ಲಿ 9 ರನ್ಗಳಿಸಿದ್ದ ವೇಳೆ ವಿದೇಶದಲ್ಲಿ ಗರಿಷ್ಠ ರನ್ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡರು. ಪ್ರಸ್ತುತ ಏಕದಿನ ಕ್ರಿಕೆಟ್ನಲ್ಲಿ 12185 ರನ್ಗಳಿಸಿದ್ದು, ಇದರಲ್ಲಿ ವಿದೇಶದ ಏಕದಿನ ಸರಣಿಯಲ್ಲಿ 5070 ರನ್ಗಳಿಸಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 5065 ರನ್ಗಳಿಸಿ ಅಗ್ರಸ್ಥಾನದಲ್ಲಿದ್ದರು. ಇವರಿಬ್ಬರನ್ನು ಬಿಟ್ಟರೆ ಮಾಜಿ ನಾಯಕ ಎಂಎಸ್ ಧೋನಿ 3ನೇ ಸ್ಥಾನದಲ್ಲಿದ್ದು, 4520ರನ್ಗಳಿಸಿದ್ದಾರೆ. ರಾಹುಲ್ ದ್ರಾವಿಡ್(3998) ಮತ್ತು ಗಂಗೂಲಿ(3468) ರನ್ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ದ್ರಾವಿಡ್-ಗಂಗೂಲಿ ದಾಖಲೆ ಬ್ರೇಕ್
ಸಚಿನ್ ದಾಖಲೆ ಮಾತ್ರವಲ್ಲ ದಕ್ಷಿಣ ಆಫ್ರಿಕಾ ಮತ್ತು ಭಾರತ ಮುಖಾಮುಖಿಯಾದ ವೇಳೆ ಗರಿಷ್ಠ ರನ್ ಸಿಡಿಸಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಕೊಹ್ಲಿ 22 ರನ್ಗಳಿಸಿದ್ದ ವೇಳೆ ದ್ರಾವಿಡ್(1309) ಮತ್ತು 27 ರನ್ಗಳಿಸಿದ್ದ ವೇಳೆ ಗಂಗೂಲಿ(1313) ದಾಖಲೆ ಉಡೀಸ್ ಮಾಡಿದರು.
ಇದನ್ನೂ ಓದಿ:ಟೆಸ್ಟ್ ರ‍್ಯಾಂಕಿಂಗ್ : 2 ಸ್ಥಾನ ಬಡ್ತಿ ಪಡೆದ ಕೊಹ್ಲಿ, ಅಗ್ರ 10ಕ್ಕೆ ಮರಳಿದ ಬುಮ್ರಾ