ನವದೆಹಲಿ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರ ಆಕ್ರಮಣಶೀಲತೆ ಮತ್ತು ನಿರ್ಭೀತ ಕ್ರಿಕೆಟ್ ಆಟವನ್ನು ಒಪ್ಪಿಕೊಂಡಿರುವ ಯುವ ಆಟಗಾರ ಶುಬ್ಮನ್ ಗಿಲ್, ನಾಯಕ ತಮ್ಮನ್ನು ಕೂಡ ನಿರ್ಭೀತ ಕ್ರಿಕೆಟ್ ಆಡಲು ಪ್ರೋತ್ಸಾಹಿಸುತ್ತಾರೆಂದು ಹೇಳಿದ್ದಾರೆ.
ನಾವು ನಿರ್ಭಯವಾಗಿ, ನಮ್ಮದೇ ಆದ ರೀತಿಯಲ್ಲಿ ಮತ್ತು ನಾವು ಆಡಲು ಬಯಸುವ ರೀತಿಯಲ್ಲಿ ಆಡಬೇಕೆಂದು ಕೊಹ್ಲಿ ಹೇಳುತ್ತಾರೆ. ಅವರು ಯಾವಾಗಲೂ ನಮ್ಮನ್ನು ಪ್ರೇರೇಪಿಸುತ್ತಾರೆ, ಅವರು ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ" ಎಂದು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಗಿಲ್, ಕ್ಯಾಪ್ಟನ್ ಕೊಹ್ಲಿ ಕುರಿತು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಾನು ಉತ್ತಮ ಮನಸ್ಸಿನ ಚೌಕಟ್ಟಿನಲ್ಲಿಲ್ಲ ಎಂದು ಭಾವಿಸಿದಾಗಲೆಲ್ಲಾ ಕೊಹ್ಲಿ ಬಳಿ ಹೋಗಿ ಮಾತನಾಡುತ್ತೇನೆ. ಅವರು ನಮ್ಮನ್ನು ಪ್ರೇರಿಸುತ್ತಾರೆ ಮತ್ತು ಅವರು ಯುವಕರಾಗಿದ್ದಾಗ ಆಗಿರುವ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ಗಿಲ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಮನೋಭಾವನೆ ಬಗ್ಗೆ ಕೆಲವು ಮಾಜಿ ಕ್ರಿಕೆಟರ್ಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ಮಿಶ್ರ ಅಭಿಪ್ರಾಯಗಳಿವೆ. ಆದರೆ, ಕಳೆದ ವಾರ ಮೊಹಮ್ಮದ್ ಶಮಿ "ಕೊಹ್ಲಿಯ ಮನೋಭಾವನೆ ವೇಗದ ಬೌಲರ್ಗಳಂತಿರುತ್ತದೆ ಎಂದಿದ್ದಾರೆ.
ವೇಗದ ಬೌಲರ್ಗಳು ಆಕ್ರಮಣಕಾರಿಯಾಗಿರುತ್ತಾರೆ. ಹಿಂದಿನವರಾಗಿರಬಹುದು ಅಥವಾ ಈಗಿನವರಾಗಿರಬಹುದು. ಆದರೆ, ಬೌಲರ್ಗಳ ಆಕ್ರಮಣಶೀಲತೆಯನ್ನು ಅನುಕರಿಸುವ ಒಬ್ಬನೇ ಆಟಗಾರ ನಮ್ಮ ನಾಯಕ ಎಂದಿದ್ದರು.
ಇದನ್ನು ಓದಿ:ಕೋವಿಡ್ 19 ಹೋರಾಟಕ್ಕೆ ಆರ್ಸಿಬಿಯಿಂದ 45 ಕೋಟಿ ರೂ. ದೇಣಿಗೆ