ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಹಾಗೂ ಕೋಚ್ ರವಿಶಾಸ್ತ್ರಿ ಇಂದು ಮುಂಬೈನಲ್ಲಿ ಬಯೋಬಬಲ್ನಲ್ಲಿರುವ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.
ಜೂನ್ 2 ರಂದು ಭಾರತ ಮಹಿಳಾ ತಂಡ ಮತ್ತು ಪುರುಷ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಅದಕ್ಕೂ ಮುನ್ನ ಮುಂಬೈನಲ್ಲಿ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗಳು ಕ್ವಾರಂಟೈನ್ನಲ್ಲಿರಬೇಕಾಗಿದೆ, ಈ ಅವಧಿಯಲ್ಲಿ 3 ಬಾರಿ ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದರೆ ಮಾತ್ರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಅನುಮತಿ ನೀಡಲಾಗುವುದೆಂದು ಬಿಸಿಸಿಐ ಈಗಾಗಲೇ ತಿಳಿಸಿದೆ.
ವರದಿಗಳ ಪ್ರಕಾರ ಮುಂಬೈನಲ್ಲಿ ವಾಸಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶಾರ್ದುಲ್ ಠಾಕೂರ್, ರವಿಶಾಸ್ತ್ರಿ ಹಾಗೂ ಇತ್ತೀಚೆಗಷ್ಟೇ ಕೋವಿಡ್ 19 ನಿಂದ ಚೇತರಿಸಿಕೊಂಡಿರುವ ಪ್ರಸಿಧ್ ಕೃಷ್ಣ ಮತ್ತು ವೃದ್ಧಿಮಾನ್ ಸಹಾ ಮುಂಬೈನಲ್ಲಿ ಆಟಗಾರರಿಗೆ ಏರ್ಪಾಡು ಮಾಡಿರುವ ಬಯೋ ಬಬಲ್ಗೆ ಸೇರಿಕೊಂಡಿದ್ದಾರೆ.
ಜೂನ್ 18ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಣಸಾಡಲಿವೆ. ಇದಕ್ಕೂ ಮುನ್ನ ಭಾರತ ತಂಡದ ಒಂದುವಾರದ ಕ್ವಾರಂಟೈನ್ಗೆ ಒಳಗಾಗಲಿದೆ. ನಂತರ ಇಂಟ್ರಾಸ್ಲ್ವಾಡ್ ಅಭ್ಯಾಸ ಪಂದ್ಯವನ್ನಾಡಲಿದೆ.
ಇದನ್ನು ಓದಿ: ಕೊಹ್ಲಿ, ರೋಹಿತ್ ಅಲ್ಲ, ಈತ ಭಾರತದ ಅಪಾಯಕಾರಿ - ಗೇಮ್ ಚೇಂಜರ್ ಬ್ಯಾಟ್ಸ್ಮನ್: ಕಿವೀಸ್ ಕೋಚ್