ದುಬೈ : ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 2 ಸ್ಥಾನ ಬಡ್ತಿ ಪಡೆದು 7ನೇ ರ‍್ಯಾಂಕ್ ಪಡೆದುಕೊಂಡಿದ್ದರೆ, ವೇಗಿ ಜಸ್ಪ್ರೀತ್ ಬುಮ್ರಾ ಅಗ್ರ 10ಕ್ಕೆ ಮರಳಿದ್ದಾರೆ.
ಆ್ಯಶಸ್ ಮತ್ತು ಭಾರತ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಮುಗಿದ ಬಳಿಕ ರ‍್ಯಾಂಕಿಂಗ್‌ನಲ್ಲಿ ಬದಲಾವಣೆ ಕಂಡು ಬಂದಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಶತಕ ಸಿಡಿಸಿದ ಬೆನ್ನಲ್ಲೇ 10 ಸ್ಥಾನ ಏರಿಕೆ ಪಡೆದು 14ನೇ ಸ್ಥಾನ ಪಡೆದಿದ್ದರೆ, ಕೇಪ್ಟೌನ್ ಟೆಸ್ಟ್ನಲ್ಲಿ 6 ವಿಕೆಟ್ ಪಡೆದ ಬುಮ್ರಾ 3 ಸ್ಥಾನ ಏರಿಕೆ ಕಂಡು ಅಗ್ರ 10ರ ಬಳಗಕ್ಕೆ ಮರಳಿದ್ದಾರೆ.
ಇನ್ನು ಕೊನೆಯ ಟೆಸ್ಟ್ನಲ್ಲಿ 72 ಮತ್ತು 82 ರನ್ಗಳಿಸಿ 2-1ರಲ್ಲಿ ಸರಣಿ ಗೆಲ್ಲಲು ನೆರವಾದ ಕೀಗನ್ ಪೀಟರ್ಸನ್ ಬರೋಬ್ಬರಿ 68 ಸ್ಥಾನ ಬಡ್ತಿ ಪಡೆದು 33ನೇ ರ‍್ಯಾಂಕ್ ಪಡೆದಿದ್ದಾರೆ. ಈ ಸರಣಿಗೂ ಮುನ್ನ ಅವರು 158ನೇ ಸ್ಥಾನದಲ್ಲಿದ್ದರು. ಅದೇ ಸರಣಿಯಲ್ಲಿ ನಿರ್ಣಾಯಕ 276 ರನ್ ಸಿಡಿಸಿ ಬಹುದೊಡ್ಡ ಏರಿಕೆ ಸಾಧಿಸಿದ್ದಾರೆ.
ಬವೂಮ 35ರಿಂದ 28ಕ್ಕೆ ಮತ್ತು ಡಸೆನ್55ರಿಂದ 43ಕ್ಕೆ ಬಡ್ತಿಪಡೆದಿದ್ದಾರೆ. ಬೌಲರ್ಗಳಲ್ಲಿ ರಬಾಡ 7 ಸ್ಥಾನ ಮೇಲೇರಿ 3ಕ್ಕೂ ಲುಂಗಿ ಎಂಗಿಡಿ 7 ಸ್ಥಾನ ಏರಿಕೆ ಕಂಡು 21ರಲ್ಲಿದ್ದಾರೆ.
ಆ್ಯಶಸ್ ಸರಣಿಯಲ್ಲಿ 2 ಶತಕ ಸಹಿತ 357 ರನ್ ಗಳಿಸಿದ್ದ ಟ್ರಾವಿಸ್ ಹೆಡ್ 7 ಸ್ಥಾನ ಏರಿಕೆ ಕಂಡು ವೃತ್ತಿ ಜೀವನದ ಶ್ರೇಷ್ಠ 5ನೇ ರ‍್ಯಾಂಕ್ ಪಡೆದಿದ್ದಾರೆ. ಮಾರ್ನಸ್ ಲಾಬುಶೇನ್(935), ಜೋ ರೂಟ್(872), ಕೇನ್ ವಿಲಿಯಮ್ಸನ್(862) ಮತ್ತು ಸ್ಟಿವ್ ಸ್ಮಿತ್(845) ಮೊದಲ 4 ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:'ಐಸಿಸಿ ವರ್ಷದ ಟಿ20 ತಂಡ'ಕ್ಕೆ ಬಾಬರ್ ನಾಯಕ ; 11ರ ಬಳಗದಲ್ಲಿ ಭಾರತೀಯರಿಗಿಲ್ಲ ಅವಕಾಶ!