ETV Bharat / sports

ವಿಸ್ಡನ್ ದಶಕದ ಕ್ರಿಕೆಟಿಗ: ಸಚಿನ್, ರಿಚರ್ಡ್ಸ್​, ಕಪಿಲ್ ದೇವ್ ಸಾಲಿಗೆ ಕಿಂಗ್ ಕೊಹ್ಲಿ ಸೇರ್ಪಡೆ - Sachin Tendulkar

ಕೊಹ್ಲಿ 2010-2021ರ ಆವೃತ್ತಿಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1971ರಿಂದ 10 ವರ್ಷಗಳ ಕ್ರಿಕೆಟ್​ ಸಾಧನೆಯ ಆಧಾರದ ಮೇಲೆ ಈ ಪ್ರಶಸ್ತಿಯನ್ನು ವಿಸ್ಡನ್​ ನೀಡುತ್ತಿದೆ. ಇದುವರೆಗೂ 5 ಆಟಗಾರರು ಕಳೆದ 50 ವರ್ಷಗಳಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೊಹ್ಲಿ ಕೂಡ ಈ ಆಟಗಾರರ ಲಿಸ್ಟ್​ನಲ್ಲಿ 5ನೇಯವರಾಗಿ ದಿಗ್ಗಜರ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿಸ್ಡನ್ ದಶಕದ ಕ್ರಿಕೆಟಿಗ
ವಿಸ್ಡನ್ ದಶಕದ ಕ್ರಿಕೆಟಿಗ ವಿರಾಟ್​ ಕೊಹ್ಲಿ
author img

By

Published : Apr 15, 2021, 4:58 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ, ವಿಸ್ಡನ್​ ಘೋಷಿಸಿರುವ ದಶಕದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ನಂತರ ಈ ಪ್ರಶಸ್ತಿ ಪಡೆದ 3ನೇ ಭಾರತೀಯ ಆಟಗಾರ ಎಂಬ ಶ್ರೇಯಕ್ಕೆ ಕೊಹ್ಲಿ ಪಾತ್ರರಾಗಿದ್ದಾರೆ.

ಕೊಹ್ಲಿ 2010-2021ರ ಆವೃತ್ತಿಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1971ರಿಂದ 10 ವರ್ಷಗಳ ಕ್ರಿಕೆಟ್​ ಸಾಧನೆಯ ಆಧಾರದ ಮೇಲೆ ಈ ಪ್ರಶಸ್ತಿಯನ್ನು ವಿಸ್ಡನ್​ ನೀಡುತ್ತಿದೆ. ಇದುವರೆಗೂ 5 ಆಟಗಾರರು ಕಳೆದ 50 ವರ್ಷಗಳಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೊಹ್ಲಿ ಕೂಡ ಆಟಗಾರರ ಲಿಸ್ಟ್​ನಲ್ಲಿ 5ನೇಯವರಾಗಿ ದಿಗ್ಗಜರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

2011ರಲ್ಲಿ ಏಕದಿನ ವಿಶ್ವಕಪ್​ನಲ್ಲಿ ತಮ್ಮ ದಶಕವನ್ನು ಆರಂಭಿಸಿದ ಕೊಹ್ಲಿ, ನಂತರ 50 ಓವರ್​ಗಳ ಕ್ರಿಕೆಟ್​ನಲ್ಲಿ ಮುಂಚೂಣಿ ಬ್ಯಾಟ್ಸ್​ಮನ್​ ಆಗಿ ಮಿಂಚಿದ್ದಾರೆ. ಭಾರತ ತಂಡದ ನಾಯಕ ಈ 10 ವರ್ಷಗಳಲ್ಲಿ 60ರ ಸರಾಸರಿಯಲ್ಲಿ 42 ಶತಕಗಳ ಸಹಿತ 11,125 ರನ್​ ಬಾರಿಸಿದ್ದಾರೆ.

ಕೊಹ್ಲಿ ಮೊದಲು ಭಾರತದ ದಂತಕಥೆಗಳಾದ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್​ ದೇವ್ (1980), ಸಚಿನ್ ತೆಂಡೂಲ್ಕರ್​ (1990) ವಿಸ್ಡನ್ ದಶಕದ ಪ್ರಶಸ್ತಿಗೆ ಭಾಜನರಾಗಿದ್ದರು. ಸಚಿನ್ 1998ರ ವರ್ಷದಲ್ಲಿ ಬರೋಬ್ಬರಿ 9 ಶತಕ ಸಿಡಿಸಿದ್ದರು. ಇದು ಕ್ಯಾಲೆಂಡರ್ ವರ್ಷದಲ್ಲಿ ಬ್ಯಾಟ್ಸ್​ಮನ್ ಒಬ್ಬನಿಂದ ದಾಖಲಾಗಿರುವ ಗರಿಷ್ಠ ಶತಕವಾಗಿದೆ.

1970ರ ದಶಕದ ಪ್ರಶಸ್ತಿ ವೆಸ್ಟ್​ ಇಂಡೀಸ್ ದಂತಕಥೆ ವಿವಿಯನ್ ರಿಚರ್ಡ್ಸನ್ ಪಾಲಾಗಿದೆ. 70 ದಶಕದಲ್ಲಿ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಮೆರೆದಿದ್ದ ವಿಂಡೀಸ್​ ಸತತ 2 ವಿಶ್ವಕಪ್​ ಗೆದ್ದಿತ್ತು. 1970ರ ವಿಶ್ವಕಪ್​ನಲ್ಲಿ ಅಜೇಯ ಶತಕ ಬಾರಿಸಿ ವಿಂಡೀಸ್​ಗೆ ಚೊಚ್ಚಲ ವಿಶ್ವಕಪ್​ ಗೆಲ್ಲಲು ರಿಚರ್ಡ್ಸ್​ ನೆರವಾಗಿದ್ದರು.

2000-2010 ದಶಕದ ಆಟಗಾರನಾಗಿ ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್​ ಆಯ್ಕೆಯಾಗಿದ್ದರು. ಅವರು ಈ ಅವಧಿಯಲ್ಲಿ 335 ವಿಕೆಟ್ ಪಡೆದಿದ್ದರು. ಅಲ್ಲದೆ 2011ರಲ್ಲಿ ಶ್ರೀಲಂಕಾ ಫೈನಲ್ ಪ್ರವೇಶಿಸಲು ಇವರ ಪಾತ್ರ ಮಹತ್ವವಾಗಿತ್ತು.

ಇದನ್ನು ಓದಿ:ಐಪಿಎಲ್​ 2021: ಕೊನೆಯ ಘಳಿಗೆಯಲ್ಲಿ ಶಹ್ಬಾಜ್​ ಕಮಾಲ್​... ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ 6 ರನ್​ಗಳ ರೋಚಕ ಜಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.